ಹೊಸಪೇಟೆಯ ವಿನಾಯಕ ನಗರದ ಪದಾಧಿಕಾರಿಗಳ ಪದಗ್ರಹಣ

ಪದಗ್ರಹಣ ಕಾರ್ಯಕ್ರಮ

ಹೊಸಪೇಟೆ 26: ನಗರದ ಸಂಕ್ಲಾಪುರ ಗ್ರಾಮದಲ್ಲಿ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಿನಾಯಕ ನಗರ ಬಡಾವಣೆಯ ನೂತನ ಪದಾಧಿಕಾರಿಗಳ ಆಯ್ಕೆಯು ದಿ. 24ರಂದು ನಡೆಯಿತು. 

ಅಂಜನೇಯಲು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿ ಪದಗ್ರಹಣ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ನಡೆಯಿತು. ಭಾನುವಾರದ ಸಂಜೆ ವಿನಾಯಕ ನಗರ ಬಡಾವಣೆಯ ಉದ್ಯಾನವನದಲ್ಲಿ ಸೇರಿದ ಸರ್ವ ನಿವಾಸಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆಂಜನೇಯಲು, ಉಪಾಧ್ಯಕ್ಷರಾಗಿ ಎಸ್‌.ಎಂ.ಭಾಷಾ, ಪ್ರಧಾನ ಕಾರ್ಯದರ್ಶಿಗಳಾಗಿ ಕಿಚಡಿ ರಾಘವೇಂದ್ರ ರವರು, ಖಜಾಂಚಿಗಳಾಗಿ ಎಲ್‌.ಬಸವರಾಜರವರು, ಹಲ್ಲೂರವರು ಹಾಗೂ 21 ನಿರ್ದೇಶಕರುಗಳಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ವಿನಾಯಕ ನಗರದ ಬಡಾವಣೆಯ ಸರ್ವ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ವಿನಾಯಕ ನಗರದ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಸರ್ವ ನೂತನ ಪದಾಧಿಕಾರಿಗಳು ಸದಾ ಕಾಲ ಶ್ರಮಿಸುತ್ತೇವೆ ಎಂದು ಪಣತೊಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  

ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರುಗಳಾಗಿ ಎಸ್‌. ಟಿ. ಮುಂಡರಿಗಿ, ಎಚ್ ತಿಪ್ಪೇಸ್ವಾಮಿ, ಜಾಂಗೀರ್ ಸಾಬ್‌. ಕೆ. ಸುರೇಶ್‌. ಬಸಣ್ಣ, ಕೃಷ್ಣ ರಾವ್‌. ಪಿ .ರಮೇಶ್‌. ನಾಗಭೂಷಣ್‌. ಎಂ ತಿಪ್ಪೇಸ್ವಾಮಿ, ಮಹೇಶ್‌. ಎ .ಎಂ. ಬಸವರಾಜ್‌. ರವೀಂದ್ರ, ಸಂಗಪ್ಪ, ಕುಬೇರ​‍್ಪ, ಗೋಪಾಲ್ ಜೋಶಿ. ಪವನ್ ಕುಮಾರ್‌. ನಜೀರ್ ಖಾನ್, ಪ್ರಿತೇಶ್ ಆಯ್ಕೆಯಾಗಿದ್ದಾರೆ.