ಎಲ್‌.ಐ.ಸಿ ಕಂತುಕಟ್ಟುವ ನೂತನ ಸೇವಾ ಕೇಂದ್ರದ ಉಧ್ಘಾಟನೆ

Inauguration of new service center of LIC installments

ಎಲ್‌.ಐ.ಸಿ ಕಂತುಕಟ್ಟುವ ನೂತನ ಸೇವಾ ಕೇಂದ್ರದ ಉಧ್ಘಾಟನೆ  

ಮಹಾಲಿಂಗಪುರ,04 ; ಸ್ಥಳೀಯ ಅಷ್ಟಗಿ ಟಾಕೀಜ ಎದುರಿಗಿನ ಕಿರಗಟಗಿ ಕಾಂಪ್ಲೇಕ್ಷನಲ್ಲಿ ನೂತನವಾಗಿ ಎಲ್‌.ಐ.ಸಿ ಕಂತುಕಟ್ಟುವ ಸೇವಾ ಕೇಂದ್ರದ ಉಧ್ಘಾಟನೆಯೂ ಫೇ. 7 ರಂದು ಮುಂಜಾನೆ 10 ಗಂ.ಗೆ ಜರುಗಲಿದೆ ಎಂದು ಜಮಖಂಡಿ ಶಾಖೆಯ ಅಭಿವೃಧ್ದಿ ಅಧಿಕಾರಿ ಡಿ.ಬಾಪುಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

 ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಕಾರ್ಯಕ್ರಮದ ಉಧ್ಘಾಟನೆಯನ್ನು ಮಾಡುವರು, ಜಮಖಂಡಿ ಶಾಖೆಯ ಶಾಖಾಧಿಕಾರಿ ಗಣೇಶ ಗಾಗ ಪ್ರೀಮಿಯಂ ತುಂಬುವ ಯಂತ್ರವನ್ನು ಪ್ರಾರಂಭಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಪಿ.ಕೆ.ಪಿ.ಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಮತ್ತು ಎಲ್‌.ಐ.ಸಿ ರಬಕವಿ ಸಂಪರ್ಕ ಶಾಖೆಯ ಶಾಖಾಧಿಕಾರಿ ಶಿವಪ್ರಸಾದ ಸರ್, ಮುಧೋಳ ಸಂಪರ್ಕ ಶಾಖೆಯ ಶಾಖಾಧಿಕಾರಿ ವೆಂಕಟೇಶ ಸರ್ಜಾಪುರ, ನಿವೃತ್ತ ಅಭಿವೃದ್ದಿ ಅಧಿಕಾರಿ ಎಸ್‌.ಎಂ ಜಮಖಂಡಿ, ಗಣ್ಯರಾದ ಎಂ.ವಾಯ್ ಕಟ್ಟಿ, ಜಿ.ಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ಪುರಸಭೆ ಸದಸ್ಯ ಶೇಖರ ಅಂಗಡಿ,ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪಿ.ಎಸ್ ಐ ಕಿರಣ ಸತ್ತಿಗೇರಿ, ಇಂಜೀನಿಯರ ಸುನೀಲ ಕಡಪಟ್ಟಿ, ಗಣ್ಯರಾದ ಶ್ರೀಶೈಲ ಕಿರಗಟಗಿ, ಗುತ್ತಿಗೆದಾರರಾದ ಹುಚ್ಚೇಶ ವಡ್ಡರ, ಶಶಿ ನಕಾತಿ  ಹಾಗೂ ಎಲ್‌.ಐ.ಸಿ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಾರಣ ಎಲ್ಲ ಪಾಲೀಸಿದಾರರು ತಮ್ಮ ಪಾಲೀಸಿಕಂತುಗಳನ್ನು ಇಲ್ಲಿ ಕಟ್ಟುವ ಮೂಲಕ ಈ ಕೇಂದ್ರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.