ಬ್ಯಾಡಗಿ 18: ಮುಂದಿನ ದಿನಗಳಲ್ಲಿ ಚಿಕ್ಕಬಾಸೂರ, ಕಾಗಿನೆಲೆ ಹಾಗೂ ತಿಳವಳ್ಳಿ ಸುತ್ತಮುತ್ತಲ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ. ಕಳೆದ ಹಲವಾರು ವರ್ಷಗಳಿಂದ ಲೋಡ್‌ಶೆಡ್ಡಿಂಗ್‌ನಿಂದ ಈ ಭಾಗದ ಹಳ್ಳಿಗಳಿಗೆ ಸಮರ್ಕ ವಿದ್ಯುತ್ ಸಿಗುತ್ತಿರಲಿಲ್ಲ. ಇನ್ನು ಮುಂದೆ ಚಿಕ್ಕಬಾಸೂರ, ಕಾಗಿನೆಲೆ ಹಾಗೂ ತಿಳವಳ್ಳಿ ಗಾಮ ಪಂಚಾಯತ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಮನೆಗಳು, ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ ಹೇಳಿದರು.
ಅವರು ತಾಲ್ಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ 12.49 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ 110 ಕೆವಿ ಸಾಮರ್ಥ್ಯದ ನೂತನ ವಿದ್ಯುತ್ ವಿತರಣಾ ಕೇಂದ್ರಗಳನ್ನು ಇಂಧನ ಸಚಿವ ಕೆ.ಜೆ.ಜಾರ್ಜ ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮುಂದಿನ ವರ್ಷ 100 ವಿದ್ಯುತ್ ಸಾಮರ್ಥ್ಯದ ಹೊಸ ಕೇಂದ್ರಗಳನ್ನು ತೆರೆಯಲಾಗುವುದು. ರೈತರಿಗೆ 80 ಪರ್ಶಂಟ್ ಸಬ್ಸಡಿರೂ.ಗಳಲ್ಲಿ ವಿದ್ಯುತ್ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಸಭೆ ಮಾಡಿ ಸಮಸ್ಯೆಗಳನ್ನು ಆಲಿಸುತ್ತಿರುವುದಾಗಿ ತಿಳಿಸಿದರಲ್ಲದೇ ವಿರೋಧ ಪಕ್ಷದವರು ಟಿಕಿಸುವುದನ್ನು ಬಿಟ್ಟು ನಾವು ಮಾಡುವ ಕೆಲಸವನ್ನು ಮೆಚ್ಚಬೇಕೆಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ಪ್ರತಿ ವರ್ಷ 293 ಕೋಟಿ ರೂ.ಗಳನ್ನು ತಾಲೂಕಿನ ಜನತೆಗೆ ಗ್ಯಾರಂಟಿ ಯೋಜನೆಗೆ ಖರ್ಚು ಮಾಡಲಾಗುತ್ತಿದೆ.110 ಕೋಟಿ ರೂ.ಗಳ ವೆಚ್ಚದಲ್ಲಿ ತಾಲೂಕಿನ ಕೆರೆ ತುಂಬಿಸುವ ಕಾರ್ಯಕ್ಕೆ ಡಿಪಿಆರ್ ತಯಾರಿಯಾಗಿದೆ. ರಾಜ್ಯದಲ್ಲಿ 2 ಕೋಟಿ ಜನರಿಗೆ ವಿದ್ಯುತನ್ನು ಉಚಿತವಾಗಿ ನೀಡುತ್ತಿದ್ದೇವೆ. 21 ಕೋಟಿ ರೂ.ಗಳ ವೆಚ್ಚದಲ್ಲಿ ಚಿಕ್ಕಬಾಸೂರಲ್ಲಿ ರಸ್ತೆ ನಿರ್ಮಿಸಲಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಗಳನ್ನು ಈ ಭಾಗದಲ್ಲಿ ಮಾಡುವುದಾಗಿ ಭರವಸೆ ನೀಡಿದರು. ವಿದ್ಯುತ ಇಲಾಖೆಯ ಜಿ.ಕೆ.ಗೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಗ್ಯಾರಂಟಿ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷೆ ಲಲೀತವ್ವ ವಾಲ್ಮೀಕಿ, ವಿದ್ಯುತ್ ನಿರ್ದೇಶಕಿ ಎಂ.ಎಲ್.ವೈಶಾಲಿ,ದಾನಪ್ಪ ಚೂರಿ, ಬೀರ್ಪ ಬಣಕಾರ, ಬಸಣ್ಣ ಕೋಣನವರ, ದ್ಯಾಮನಗೌಡ ಚಿಕ್ಕನ ಗೌಡ್ರ, ಜಯಣ್ಣ ಮಲ್ಲಿಗಾರ, ಮಹೇಶಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಸುರೇಶಗೌಡ ಪಾಟೀಲ, ಮಂಜುನಗೌಡ ಪಾಟೀಲ, ಅಬ್ದುಲ್ ಮುನಾಫ್ ಎಲಿಗಾರ, ನಾಗಣ್ಣ ಆನ್ವೇರಿ, ಸುರೇಶ್ ಸವಣೂರ, ಖಾದರ್ ಸಾಬ ದೊಡ್ಡಮನಿ, ಶಿವನಗೌಡ ಪಾಟೀಲ, ಶಂಭು ಪಾಟೀಲ, ಬಸವರಾಜ ಬನ್ನಿ ಹಟ್ಟಿ, ರುದ್ರಣ್ಣ ಹೊಂಕಣ, ಮಾರುತಿ ಅಚ್ಚಿಗೇರಿ, ಗುತ್ತಿಗೆದಾರ ಮಹದೇವಯ್ಯ ಗಚ್ಚಿನಮಠ ಸೇರಿದಂತೆ ಇತರರಿದ್ದರು.