ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ಉದ್ಘಾಟನೆ
Inauguration of new Mahadwara of Lakshmidevi Temple
ರಾಯಬಾಗ 02: ಒಳ್ಳೆಯ ಕೆಲಸ ಅಷ್ಟೇ ಮಾಡಿ, ಫಲಾಫೇಕ್ಷೆಯನ್ನು ಆ ಭಗವಂತನಿಗೆ ಬಿಟ್ಟುಬಿಡಬೇಕು, ಆಗ ಮಾತ್ರ ಜೀವನದಲ್ಲಿ ಸುಖ ಶಾಂತಿಯನ್ನು ಪಡೆಯಲು ಸಾಧ್ಯವೇಂದು ಕವಲಗುಡ್ಡ (ಹನುಮಾಪೂರ) ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಗುರುವಾರ ಸಾಯಂಕಾಲ ರಾಯಬಾಗ ರೈಲ್ವೇ ಸ್ಟೇಷನ್‌ದ (ಖೈರವಾಡಿ) ಲಕ್ಷ್ಮೀದೇವಿ ದೇವಸ್ಥಾನದ ನೂತನ ಮಹಾದ್ವಾರದ ವಾಸ್ತು ಪೂಜಾ ಹಾಗೂ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮೊಬೈಲ್, ಟಿವ್ಹಿಗಳು ಬಂದಾಗಿನಿಂದ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿವೆ. ಇದರಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ, ಸಮಾಜದಲ್ಲಿ ಕುಟುಂಬದಲ್ಲಿ, ಸಮಾಜದಲ್ಲಿ ಅಶಾಂತಿ ಹೆಚ್ಚಿದೆ. ಎಲ್ಲಿ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ ಅಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿದೆ. ಅಲ್ಲಿ ಸದಾ ಲಕ್ಷ್ಮೀ ನೆಲೆಸಿರುತ್ತಾಳೆ. ದೇವರಲ್ಲಿ ಶುದ್ಧ ಶ್ರದ್ಧಾಭಕ್ತಿ, ಭಾವಗಳಿಂದ ನಡೆದುಕೊಳ್ಳಬೇಕು ಎಂದರು.
ವಕೀಲ ಆರ್.ಎಚ್.ಗೊಂಡೆ, ಮರೇಪ್ಪ ದಿಪಾಳೆ, ಗುಣಪಾಲ ಬಡೋರೆ, ಸಂಜು ಬಾವಚೆ, ರಮೇಶ ಕುಂಬಾರ, ಅಣ್ಣಪ್ಪ ಹೊಸಕೋಟೆ, ಸಂತೋಷ ತೆರದಾಳೆ, ತಾನಾಜಿ ದಿಪಾಳೆ, ಮಹಾವೀರ ಶೆಟ್ಟಿ, ಸಂತೋಷ ಶೆಟ್ಟಿ, ಬೀರ್ಪ ಗೊಂಡೆ, ಹಾಲಪ್ಪ ಅಳಗವಾಡಿ, ಕುಮಾರ ಹೊಸಕೋಟೆ, ಬೀರಾ ಗೆನಾನಿ, ಅಣ್ಣಪ್ಪ ಮುಧೋಳೆ, ಕಲ್ಲಪ್ಪ ನಾಗರಾಳೆ ಸೇರಿ ಅನೇಕ ಭಕ್ತಾದಿಗಳು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 