ಕೂನಬೇವು ಗ್ರಾಮದಲ್ಲಿಂದು ದಾನಿಗಳು ನೀಡಿದ ಶಾಲಾ ಧ್ವಜ ಸ್ತಂಭದ ಉದ್ಘಾಟನೆ

ಲೋಕದರ್ಶನವರದಿ

ರಾಣೇಬೆನ್ನೂರು06: ತಾಲೂಕಿನ ಕೂನಬೇವು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗುಡ್ಡದ ಆನ್ವೇರಿ ಗ್ರಾಮ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ.ಹಿ.ಪ್ರಾ ಕೂನಬೇವು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾ.7 (ಇಂದು) ರಂದು ಮಧ್ಯಾಹ್ನ 12.30 ಗಂಟೆಗೆ ದಾನಿಗಳಿಂದ ನಿಮರ್ಿಸಲಾದ ನೂತನ ಶಾಲಾ 'ಧ್ವಜಸ್ಥಂಭ' ಉದ್ಘಾಟನಾ ಸಮಾರಂಭ ಜರುಗಲಿದೆ.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧ್ವಜಸ್ಥಂಭ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ಚೌಡವ್ವ ಪಚ್ಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾಕೋಳ ಜಿಪಂ ಸದಸ್ಯ ಏಕನಾಥ ಬಾನುವಳ್ಳಿ ಕಾರ್ಯಕ್ರಮ ಉದ್ಘಾಟಿಸುವರು.

ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರೆವ್ವ ಹೊನ್ನಾಳಿ, ಸದಸ್ಯ ಭರಮಪ್ಪ ಉಮರ್ಿ, ಎಸ್ಡಿಎಂಸಿ ಅಧ್ಯಕ್ಷ ಮುದಕನಗೌಡ ಪಾಟೀಲ, ಉಪಾಧ್ಯಕ್ಷೆ ಕಾಳಮ್ಮ ಬಡಿಗೇರ, ಗ್ರಾಪಂ ಉಪಾಧ್ಯಕ್ಷೆ ರೇಣುಕಾ ಲಮಾಣಿ, ಸದಸ್ಯರುಗಳಾದ ಮಾಲತೇಶ ಮಾಸಣಗಿ, ಲಕ್ಷ್ಮೀ ಮಾಳಗುಡ್ಡಪ್ಪನವರ, ಕಸ್ತೂರಮ್ಮ ನೆಗಳೂರ, ತಾಪಂ ಕಾರ್ಯ ನಿವರ್ಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್ ಎನ್., ಕ್ಷೇತ್ರ ಸಮನ್ವಯಾಧಿಕಾರಿ ಎಸ್.ವಿ.ಶಿಮಿಕೇರಿ, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಲಿಂಗರಾಜ ಸುತ್ತಕೋಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಬಿ.ಚಂದ್ರಶೇಖರ, ಶಿಕ್ಷಣ ಸಂಯೋಜಕ ಚಂದ್ರು ದೇವಾಂಗದ, ಕ.ರಾ.ಸ.ನೌ.ಸಂಘದ ತಾಲೂಕಾಧ್ಯಕ್ಷ ಎಂ.ಡಿ.ದ್ಯಾವಣ್ಣನವರ, ಪ್ರಾ.ಶಾ.ಶಿ.ಸಂಘದ ತಾಲೂಕಾಧ್ಯಕ್ಷ ಬಿ.ಪಿ.ಶಿಡೇನೂರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿದ್ಯಾವತಿ ಹಳೇಗೌಡ್ರ, ಸಮೂಹ ಸಂಪನ್ಮೂಲ ವ್ಯಕ್ತಿ ಯು.ಹೆಚ್.ಶೇಖ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ನೂತನ ಶಾಲಾ 'ಧ್ವಜಸ್ತಂಭ'ದ ದಾನಿಗಳು ಹಾಗೂ ಗ್ರಾಮದ ನಿವಾಸಿಗಳಾದ ಸೋಮಶೇಖರಪ್ಪ ಬಣಕಾರ, ಮಾಜಿ ಸೈನಿಕರುಗಳಾದ ಗುಡ್ಡಪ್ಪ ನೆಗಳೂರ, ಶಂಕರ್ ಅಣಜಿ, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಾಲತೇಶ ಮಾಸಣಗಿ, ಶಿಕ್ಷಕ ಮಾದೇವಪ್ಪ ಹಲವಾಗಲ, ಪ್ರವೀಣ ಶಿರಗಂಬಿ ಶಿವನಗೌಡ ಪಾಟೀಲ ಮೊದಲಾದವರ ಅಭಿನಂದನಾ ಸನ್ಮಾನ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ವಿ.ವಿ.ಪಾಟೀಲ, ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರುಗಳು  ತಿಳಿಸಿದ್ದಾರೆ