ಬಾಗಲಕೋಟೆ 03: ನಗರದ ಬಿವಿವ ಸಂಘದ ಬಸವೇಶ್ವರ ಬಾಲಕಿಯರ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಎ.ಎಸ್.ಪಾವಟಿ ಮಾತನಾಡಿ ವಿದ್ಯಾಥರ್ಿಗಳು ಯಾವುದೇ ಕೆಲಸ ಮಾಡಲು ಗಮನವಿಟ್ಟು ಮಾಡಬೇಕು. ವಿದ್ಯಾಥರ್ಿ ಜೀವನದಲ್ಲಿ ಗುರಿ ಮುಖ್ಯವಾಗಿಟ್ಟುಕೊಳ್ಳಬೇಕು. ಶ್ರದ್ದೆಯಿಂದ ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಕೊಣ್ಣೂರಿನ ಅಡವಿಸಿದ್ದೇಶ್ವರ ಮಠದ ಸಿದ್ದೇಶ್ವರ ಸ್ವಾಮಿಗಳು ಮಾತನಾಡಿ ವಿದ್ಯಾಥರ್ಿಗಳು ಓದಿನ ಜೊತೆ ಪಠ್ಯೇತರ ಚುಟವಟಿಕೆಗಳಲ್ಲಿ ಭಾಗವಹಿಸಬೇಕು. ವಿದ್ಯಾಥರ್ಿಗಳು ಸದೃಡ ದೇಹಹೊಂದಲು ಕ್ರೀಡೆಗಳು ಅಗತ್ಯವಾಗಿವೆ. ಏಕಾಗ್ರತೆಯಿಂದ, ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಯಶಸ್ಸು ಕಾಣಲು ಸಾದ್ಯವಾಗತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಪಿ.ಎಸ್.ಆಲೂರ ವಹಿಸಿದ್ದರು. ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಜಿ.ಸನ್ನಿ, ಎಸ್.ಆರ್.ಬೋಳಗಟ್ಟಿ, ಶಾಲೆಯ ಮುಖ್ಯೋಪಾದ್ಯ ದಯಾನಂದ ಸಿಕ್ಕೇರಿ ಉಪಸ್ಥಿತರಿದ್ದರು.