ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆ

ಹಾವೇರಿ: ಹಾವೇರಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮಕ್ಕಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಾವೇರಿ ನಗರದ ಎಸ್ ಎಮ್ ಎಸ್ ಪ್ರೌಢಶಾಲೆಯಲ್ಲಿ  ಮಂಗಳವಾರ ಜರುಗಿತು.

 ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಮ್ ಎಚ್ ಪಾಟೀಲ ಅವರು  ವಸ್ತು ಪ್ರದರ್ಶನ  ಉದ್ಘಾಟಿಸಿ ಮಾತಮಾಡಿ, ಮಕ್ಕಳಲ್ಲಿ   ವೈಜ್ಞಾನಿಕ ಮನೋಭಾವನೆ ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಾಯಕಾರಿಯಾಗುತ್ತವೆ.ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಗಳು ಇಮ್ಮಡಿಗೊಳ್ಳುವ ರೀತಿಯಲ್ಲಿ ಮಕ್ಕಳಿಗೆ ಪ್ರೇರಣೆ ನೀಡಿ,ಅವರ ಜೀವನದ ಪ್ರತಿ ಹಂತದಲ್ಲೂ ವಿಜ್ಞಾನದ ಸದ್ಭಳಕೆಯಾಗುವ ರೀತಿಯಲ್ಲಿ ಕಲಿಕಾ ಹಂತದಲ್ಲಿಯೆ ಗಮನಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಮ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಾಯ್ ಎಮ್ ಓಲೇಕಾರ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎನ್ ಐ ಇಚ್ಚಂಗಿ,ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಸಿ ಎಸ್ ಭಗವಂತಗೌಡ್ರ, ನೋಡಲ್ ಅಧಿಕಾರಿಗಳಾದ ಸಿದ್ಧರಾಜು ಎಲ್. ಶಿಕ್ಷಣ ಸಂಯೋಜಕರಾದ ಎಸ್ ಆರ್ ಹಿರೇಮಠ. ತಾಲೂಕಾ ವಿಜ್ಞಾನ ಸಂಘದ ಅಧ್ಯಕ್ಷರಾದ ಏಫ್ ಎನ್ ಖರೇಗೌಡ್ರ, ಕಾರ್ಯದಶರ್ಿಗಾದ ರಶ್ಮಿ ನಾಗೇನಹಳ್ಳಿಯವರು ಭಾಗವಹಿಸಿದ್ದರು.