ತಾಳಿಕೋಟಿ 16: ಪಟ್ಟಣದ ಗೊಂದಳಿ ಸಮಾಜದ ಆರಾಧ್ಯ ದೈವ ಶ್ರೀ ಅಂಬಾ ಭವಾನಿ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಶಿಷ್ಟಾಪನೆ ಅಂಗವಾಗಿ ಫೇ.17,18 ರಂದು ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ದಿ. 17.2.2025 ಸೋಮವಾರ ಬೆಳಿಗ್ಗೆ 10:00 ಘಂಟೆಗೆ ನೂತನ ಮೂರ್ತಿಗಳ ಗಂಗಸ್ಥಳ ನಂತರ ಕಳಸ ಕುಂಭಗಳೊಂದಿಗೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ,ಅಂದೆ ಸಂಜೆ 5:00 ಘಂಟೆಗೆ ಮೂರ್ತಿಗಳ ಜಲವಾಸ, ಧಾನ್ಯವಾಸ ಹಾಗೂ ಶಯ್ಯಾದಿವಸ ನಡೆಯುವುದು. ದಿ. 18.02.2025 ಮಂಗಳವಾರ ಬೆಳಿಗ್ಗೆ 6:00 ಘಂಟೆಯಿಂದ ಪ್ರತಿಷ್ಠಾಪನೆಯ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗುವುದು ಮಧ್ಯಾಹ್ನ 1:00 ಘಂಟೆಗೆ ಮಹಾಪ್ರಸಾದ ಜರಗುವುದು. ಅರ್ಚಕ ಶ್ರೀ ವೇದ.ಮೂ. ಸಂತೋಷ ಭಟ್ ಜೋಶಿ ಇವರ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿ ವಿಧಾನಗಳು ಜರಗುವವು. ದಿ. 18-2- 2025 ರ ಬೆಳಿಗ್ಗೆ 10:30 ಘಂಟೆಗೆ ಧರ್ಮಸಭೆ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ವಹಿಸುವರು. ಗುಂಡಕನಾಳ ಬ್ರಹನ್ ಮಠದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರು, ಮ.ನಿ.ಪ್ರ.ಶಿವಕುಮಾರ ಮಹಾಸ್ವಾಮಿಗಳು ಕೊಡೆಕಲ್, ಅನ್ನದಾನೇಶ್ವರ ಹಿರೇಮಠ ಹಿರೂರದ ಷ.ಬ್ರ.ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು, ವಡವಡಗಿ ನಂದಿ ಮಠದ ಮ.ನಿ.ಪ. ಶ್ರೀ ವೀರಸಿದ್ದ ಮಹಾಸ್ವಾಮಿಗಳು,ಕುಂಟೋಜಿ ಭಾವೈಕ್ಯತಾ ಹಿರೇಮಠದ ಶ್ರೀ ಷ.ಬ್ರ.ಡಾ.ಗುರು ಚನ್ನವೀರ ಶಿವಾಚಾರ್ಯರು,ಅರ್ಚಕ ಶ್ರೀ ವೇ.ಮೂ. ಸಂತೋಷ್ ಭಟ್ ಜೋಶಿ ಪಾವನ ಸಾನಿಧ್ಯ ವಹಿಸುವರು. ಕೆಎಸ್‌ಡಿಎಲ್ ಅಧ್ಯಕ್ಷರು, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ( ಅಪ್ಪಾಜಿ) ಸಮಾರಂಭವನ್ನು ಉದ್ಘಾಟಿಸುವರು.ಗೊಂದಳಿ ಸಮಾಜದ ಅಧ್ಯಕ್ಷ ವಿಠಲ ರಾಮು ಸೂರ್ಯವಂಶಿ, ಗೊಂದಳಿ ಸಮಾಜ ಮೈಸೂರು ರಾಜ್ಯಾಧ್ಯಕ್ಷ ಕೆ. ಜಯರಾಮಯ್ಯ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ). ಅತಿಥಿಗಳಾಗಿ ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಸುರೇಶ್ ಭಿಸ್ಸೆ ವಿಜಯಪುರ, ಅಂಬಾಜಿ ಜೋಶಿ ಬಾಗಲಕೋಟ, ಯಶೋಧಾ ಇಂಗಳೆ ನಾಗರಾಳ,ಸಿಪಿಐ ಕಾರಟಗಿ ಪ್ರದೀಪ್ ಬಿಸ್ಸೆ, ಕಲಬುರ್ಗಿ ಗೋವಿಂದ ಭಟ್, ಕುಷ್ಟಗಿ ತುಕಾರಾಂ ಸುರ್ವೆ, ನಾಲತವಾಡ ಶಿಕ್ಷಕ ಚೆನ್ನಪ್ಪ ಗೊಂದಳಿ, ನಾರಾಯಣ ಗಣಪತಿ ದುರವೇ, ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಂ ಗೊಂದಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರ್ಕಲ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ್ ಹಜೇರಿ, ನೀಲಮ್ಮ ಶಂ.ಪಾಟೀಲ ಹಾಗೂ ತಾಳಿಕೋಟಿ ಸರ್ವ ಸಮಾಜದ ಅಧ್ಯಕ್ಷರು ಮುಖಂಡರು ಹಾಗೂ ಗುರುಹಿರಿಯರು ಉಪಸ್ಥಿತರಿರುವರು ಎಂದು ಗೊಂದಳಿ ಸಮಾಜದ ಅಧ್ಯಕ್ಷ ವಿಠ್ಠಲ್ ರಾಮು ಸೂರ್ಯವಂಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.