ಲೋಕದರ್ಶನ ವರದಿ
ಧಾರವಾಡ03: ಕಲುಷಿತ ನೀರು ಕುಡಿಯುವದರಿಂದ ಮನುಷ್ಯನಿಗೆ ಕಾಲರಾ, ಟೈಪಡ, ಪೋಲಿಯೋದಂತಹ ಹಲವಾರು ರೋಗಗಳು ಬಂದು ಆರೋಗ್ಯ ಕೆಟ್ಟು ಹೋಗುವುದು. ಮನುಷ್ಯ ಆರೋಗ್ಯವಂತ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಸಾಧ್ಯವಾದಷ್ಟು ಶುದ್ಧವಾದ ನೀರನ್ನು ಸೇವಿಸಬೇಕೆಂದು ಶಾಸಕರಾದ ಅರವಿಂದ ಬೆಲ್ಲದ ಅವರು ಹೇಳಿದರು.
ಎಸ್.ವಿ. ಸಂಕನೂರ, ಮಾನ್ಯ ವಿಧಾನ ಪರಿಷತ್ ಸದಸ್ಯರು ಇವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣ ಹಾಗೂ ಕನರ್ಾಟಕ ವಿಶ್ವವಿದ್ಯಾಲಯದ ಶಿ.ಶಿ. ಬಸವನಾಳ ಗ್ರಂಥಾಲಯದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕರಾದ ಅರವಿಂದ ಬೆಲ್ಲದ ಅವರು ಉದ್ಘಾಟಿಸಿ ಮಾತನಾಡಿದರು.
ಎರಡು ಕಾರ್ಯಕ್ರಮಗಳಲ್ಲಿ ಡಾ. ಪ್ರಮೋದ ಗಾಯಿ, ಕುಲಪತಿಗಳು, ಕನರ್ಾಟಕ ವಿಶ್ವವಿದ್ಯಾಲಯ, ವಿಜ್ಞಾನ ಕೇಂದ್ರದ ನಿದರ್ೇಶಕರಾದ ಡಾ. ಕೆ.ಬಿ.ಗುಡಸಿ, ಗ್ರಂಥಪಾಲಕರಾದ ಡಾ. ಎಸ್.ಬಿ. ಪಾಟೀಲ, ಸ್ಥಾನಿಕ ಅಭಿಯಂತರರಾದ ಎಸ್.ಡಿ. ಬದಾಮಿ, ಸಹಾಯಕ ಇಂಜನೀಯರ ಕಾಶೀಕರ ವಿಶ್ವವಿದ್ಯಾಲಯ ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.