ಸಿಂದಗಿ 17: ಈ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳು ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹಾಗೂ ವಸತಿ ನಿಲಯಕ್ಕೆ ಸ್ವಂತ ನಿವೇಶನ ಒದಗಿಸಿ, ಸುಸಜ್ಜಿತ ಕಟ್ಟಡವನ್ನು ಕೂಡ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಈ ಭಾಗದ ಶೈಕ್ಷಣಿಕವಾಗಿ ಬಹುದಿನಗಳ ಬೇಡಿಕೆಯಾಗಿದ್ದ, 2024-25 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿಶೇಷ ಕಾಳಜಿವಹಿಸಿ ಮಂಜೂರು ಆಗಿರುವ 100 ಸಂಖ್ಯಾ ಬಲದ ಡಿ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನೂತನ ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕ ಕಲ್ಯಾಣಾಧಿಕಾರಿಗಳಾದ ರವೀಂದ್ರ ಬಂಥನಾಳ, ಇಲಾಖೆಯ ನಿಲಯ ಪಾಲಕರು ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಅಮೋಗಿ ಜೈನಾಪುರ, ಉಪಾಧ್ಯಕ್ಷರಾದ ರಮೇಶ್ ವಂದಾಲ, ಕೆಡಿಪಿ ಸದಸ್ಯರಾದ ಖಾದಿರ್ ಬಂಕಲಗಿ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಪೂಜಾರಿ, ಹಿರಿಯ ಮುಖಂಡರಾದ ಮಲ್ಲಣ್ಣ ಸಾಲಿ, ಶಿವಯೋಗಿ ಹತ್ತರಕಿ, ಹೆಚ್ ಬಿ ಚಿಂಚೋಳಿ, ಧರ್ಮರಾಯ ಒಡೆಯರ್, ರವಿರಾಜ ದೇವರಮನಿ, ಬಸವರಾಜ್ ಮಾರಲಭಾವಿ, ಮುದಿಗೌಡ ಬಿರಾದಾರ,ಶ್ರೀಶೈಲ ಜಾಲವಾದಿ, ಮಡಿವಾಳ ನಾಯ್ಕೋಡಿ, ಸೇರಿದಂತೆ ಗ್ರಾಮ ಪಂಚಾಯತ್ ಎಲ್ಲ ಸದಸ್ಯರು ಗ್ರಾಮಸ್ಥರು ಹಿರಿಯರು ಕಿರಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.