ಜನಪದ ಉತ್ಸವ ಕಾರ್ಯಕ್ರಮ ಉದ್ಘಾಟಿನೆ
ಧಾರವಾಡ 14: “ಆಡಿ ಬಾ ನನ್ನ ಕಂದ ಅಂಗಾಲ ತೊಳದೇನ ತೆಂಗಿನಕಾಯಿ ತಿಳೀನೀರ ತೊಗೊಂಡ ಬಂಗಾರದ ಮಾರಿ ತೊಳದೇನ” ಎಂದು ಹಳ್ಳಿ ಸೊಗಡಿನ ಸಂಪ್ರದಾಯ ಪದಗಳನ್ನು ಮೆಲಕು ಹಾಕುತ್ತಾ ನಮ್ಮ ಗ್ರಾಮೀಣ ಭಾಗದಲ್ಲಿ ಇಂಥ ಜಾನಪದ ಸಂಪ್ರದಾಯಗಳು ಹಬ್ಬ ಹರಿದಿನಗಳಲ್ಲಿ ಜನರನ್ನು ರಂಜಿಸಲು ಮುಖ್ಯ ವಾಹಿನಿಯಲ್ಲಿ ಇರುತ್ತವೆ ಎಂದು ಕೃಷ್ಣ ಡಿ. ಕೊಳ್ಳಾನಟ್ಟಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಭವನದಲ್ಲಿ ಲಕ್ಷ್ಮೀದೇವಿ ಮಹಿಳಾ ಜಾನಪದ ಕಲಾ ಡೊಳ್ಳಿನ ಸಂಘ ಸಾಽಽ ಮರೇವಾಡ ಏರಿ್ಡಸಿದ ಜನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ ತವನಪ್ಪ ಅಷ್ಟಗಿ ಮಾತನಾಡಿ ನಮ್ಮ ಅಜ್ಜ ಅಮ್ಮರ ಕಾಲದಲ್ಲಿ ಮನೆಯಲ್ಲಿ ಕೌದಿಗಳನ್ನು ಹೊಲಿಯುತ್ತಿದ್ದರು. ಹಂತ ಕೌದಿಗಳನ್ನು ನಾವೆಲ್ಲರು ಉಪಯೋಗ ಮಾಡುತ್ತಿದ್ದೇವೆ. ಬರಬರುತ್ತ ಕೌದಿಗಳು ಈಗ ಮಾಯವಾಗುತ್ತಿದ್ದು ಈ ಕೌದಿಯ ಮಹತ್ವ ಮಳೆಗಾಲದಲ್ಲಿ ಬಿಸಿಯಾಗಿ ಬೇಸಿಗೆ ಕಾಲದಲ್ಲಿ ತಂಪಾಗಿಸುತಿತ್ತು ಎಂದು ಕೌದಿಯ ಮಹತ್ವವನ್ನು ಹೇಳಿದರು.
ವೇದಿಕೆಯ ಮೇಲೆ ಅತಿಥಿಯಾಗಿ ಈರ್ಪ ಮ ಪೂಜಾರ, ಚನ್ನಬಸಪ್ಪ ಸಿ ಮೊರಬದ, ಸತೀಶ ತುರಮರಿ, ಎಸ್.ಎನ್ ಬಿದರಳ್ಳಿ, ಸಿ.ಬಿ ಹಾದಿಮನಿ, ಬಸವರಾಜ ಮಾಳಗಿಮನಿ, ಶ್ರೀಮತಿ ಸುನಿತಾ ಹಡಪದ, ಮಾಂತೇಶ ಚಂದರಗಿ, ಗಂಗಪ್ಪ ಗು ಗಾಳಿ, ಶಿವಾನಂದ ಇಟ್ನಾಳ, ಅರ್ಜುನ ಮಾದರ, ಶ್ರೀಮತಿ ದುರ್ಗವ್ವಾ ಮಾದರ, ಶ್ರೀಮತಿ ಮಾದೇವಿ ಮಾದರ, ಪರಮೇಶ್ವರ ಮಾದರ, ಬಸಪ್ಪ ಪ ಮಾದರ ಉಪಸ್ಥಿತರಿದ್ದು, ಯಕ್ಕೇರ್ಪ ನಡುವಿನಮನಿ (ಶಾನವಾಡ ಮಾಸ್ತರ) ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರೆ್ಣ ನಡೆಸಿಕೊಟ್ಟರು.