ಕನ್ನಡ ಸಾಹಿತ್ಯ ಪರಿಷತ ಭವನದಲ್ಲಿ ಜನಪದ ಕಲಾಮೇಳ ಉದ್ಘಾಟನೆ

Inauguration of Janapada Kala Mela at Kannada Sahitya Parishad Bhawan


ಕನ್ನಡ ಸಾಹಿತ್ಯ ಪರಿಷತ ಭವನದಲ್ಲಿ ಜನಪದ ಕಲಾಮೇಳ ಉದ್ಘಾಟನೆ 

ಧಾರವಾಡ 02: ಮುತ್ತೈದಿಯಾಗಿ ಬಾಳವ್ವ ತಂಗಿ, ಹುಟ್ಟಿದ ಹೆಣ್ಣಾಗಿ ಹೋಗಿ ಬಾರವ್ವ ಗಂಡನ ಮನಿಗಿ, ಹೆಸರ ತರಬೇಕವ್ವ ತವರಿಗೆ ಎಂದು ಮನೆಯಲ್ಲಿ ಬೆಳದು ನಿಂತ ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ಹಿರಿಯರಾದವರು ಬುದ್ಧಿ ಮಾತು ಹೇಳು ಪದ್ಧತಿ ಮೊದಲಿನಿಂದಲೂ ಇದೆ ಎಂದು ಧುರೀಣರಾದ ಮುತ್ತುರಾಜ್ ಮಾಕಡವಾಲೆ ಅವರು ಹೇಳಿದರು.  

ಕಾರಂಜಿ ಮಕ್ಕಳ ಕಲಾ ವೇದಿಕೆ ದೇವರಹುಬ್ಬಳ್ಳಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಹಾಗೂ ಜೈ ಹನುಮಾನ ಜಾನಪದ ಕಲಾ ಸಂಘ ಸೋಮನಕೊಪ್ಪ ಇವರು ನಗರದ ಕನ್ನಡ ಸಾಹಿತ್ಯ ಪರಿಷತ ಭವನದಲ್ಲಿ ಏರಿ​‍್ಡಸಿದ್ದ ‘ಜನಪದ ಕಲಾಮೇಳ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

 ಮುಂದುವರೆದು ಮಾತನಾಡಿದ ಅವರು, ಗಂಡನ ಮನಿಗೆ ಹೋಗುವ ಮಗಳಿಗೆ ನಿನ್ನ ಅತ್ತಿ ಮಾವನಿಗೆ ನಮಸ್ಕರಿಸಿ ಗೌರವ ಕೊಡು, ನಿನ್ನ ಗಂಡ ದೇವರೆಂದು ತಿಳಿ, ಮನೆಯಲ್ಲಿ ನಡೆಯುವ ಸಮಸ್ಯೆಗಳನ್ನು  ಹೂರಗೆ ಹಾಕದೆ ಹೊಸ್ತಿಲ ಒಳಗ ಇರಿಸು. ಗುರು ಹಿರಿಯರಿಗೆ ಗೌರವಿಸುತ್ತ ಬಾಳವ್ವ ಎಂದು ಜಾನಪದ ಸೊಗಡಿನ ಅರ್ಥವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.  

  ಅಥಿತಿಯಾಗಿ ಆಗಮಿಸಿದ್ದ ಮಹೇಶ ಹುಲ್ಲಣ್ಣವರ ಮಾತನಾಡುತ್ತಾ,  ಜಾನಪದ ಹಾಗೂ ರಂಗಭೂಮಿಯಲ್ಲಿ ನನ್ನಗೂ ಕೂಡ ಅನುಭವವಿದೆ. ನಾನು ದೂಡ್ಡಾಟದಲ್ಲಿ ಪಾತ್ರವನ್ನು ಕೂಡ ಮಾಡಿದ್ದೆನೆ. ರಂಗಭೂಮಿ ಅನುಭವ ಗೊತ್ತಿದೆ. ಕಲಾವಿದರು ಕಲೆಯಲ್ಲಿ ಮಾತ್ರ ಶ್ರೀಮಂತರು, ಕಲಾವಿದರ ಬದಕು ಕಷ್ಟಕರ ಎಂದರು. 

ಸಾನಿಧ್ಯ ವಹಿಸಿದ ಪರಮಪೂಜ್ಯ ವಿದ್ಯಾನಂದ ಸ್ವಾಮೀಜಿ, ಕಣವಿಹೊನ್ನಾಪುರ ಹಾಗೂ ಎಸ್‌.ಎನ್‌.ಬಿದರಳ್ಳಿ, ಕಮಲಮ್ಮ ವಗ್ಗರ, ಮಲ್ಲವ್ವ ಬೇರುಡಗಿ, ಶಿಲ್ಪಾ ಗಂಗವ್ವ ಹಿರೇಮಠ, ಯಕ್ಕೇರ​‍್ಪ ನಡುವಿನಮನಿ ಇದ್ದರು. ಕಾರ್ಯಕ್ರಮದ ನಿರೂಪಣೆ ಶಿವಾನಂದ ಇಟ್ನಾಳ ನಡೆಸಿಕೊಟ್ಟರು ನಂತರ ವಿವಿಧ ಕಲಾವಿದರಿಂದ ಜಾನಪದ ಕಾಯಕ್ರಮಗಳು ಜರುಗಿದವು.