ಹಾಫ್ ಪಿಚ್ಕ್ರಿಕೆಟ್ ಟೂನರ್ಾಮೆಂಟ್ ಉದ್ಘಾಟನೆ

ಹಾವೇರಿ18 :ಜಿಲ್ಲೆಯ ಜಂಗಿನ ಕೊಪ್ಪಗ್ರಾಮದಲ್ಲಿ ಸೇವಾಲಾಲ ಜಯಂತಿ ಪ್ರಯುಕ್ತ  ಸೇವಾಲಾಲ ಕ್ರಿಕೆಟ್ ಕ್ಲಬ್ ವತಿಯಿಂದ ಹಾಫ್ ಪಿಚ್ಕ್ರಿಕೆಟ್ ಟೂನರ್ಾಮೆಂಟ್ ಜರುಗಿತು.

      ಬಂಜಾರ ಸಮುದಾಯದ ಮುಖಂಡ ಹಾಗೂ ಜೀವಜ್ಯೋತಿ ಫೌಂಡೇಶನ್ ಅಧ್ಯಕ್ಷ ಜಯರಾಮ ಮಾಳಾಪೂರ ಟೂನರ್ಾಮೆಟ್ ಉದ್ಘಾಟಿಸಿದರು. ನಂತರ ಮಾತನಾಡಿ ನಮ್ಮ ಸಮುದಾಯದ ಮೂಲ ಪುರುಷ ಸಂತಸೇವಾಲಾಲ ಅವರ ಜಯಂತ್ಯೋತ್ಸವದ ನಿಮಿತ್ಯ ಯುವಕರಿಗೆ ಕ್ರೀಡಾ ಚಟುವಟಿಕೆ ಇಡಲು ನಾವೆಲ್ಲಾ ತೀಮರ್ಾನಿಸಲಾಗಿದೆ. ಮಾಹಾನ್ ನಾಯಕರ ಹೆಸರು ಚಿರಪರಿಚಿತವಾಗಿ ಉಳಿಯಬೇಕಾದರೆ ವಿವಿಧ ಕಾರ್ಯಕ್ರಮ ಇಡಬೇಕಾಗುತ್ತದೆ. ಸಂತ ಸೇವಾಲಾಲರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ. 10 ಸಾವಿರರೂ ಪ್ರಥಮ ಹಾಗೂ 5 ಸಾವಿರರೂ ದ್ವಿತೀಯ ಬಹುಮಾನ ಸೇರಿದಂತೆ ಇತರ ಬಹುಮಾನ ನೀಡಲಾಗುವುದು. ಕ್ರೀಡೆ ಜೀವನಕ್ಕೆ ನವ ಉತ್ಸಾಹ ನೀಡಿವ ಮೂಲಮಂತ್ರವಾಗಿದೆ. ಕ್ರೀಡಾ ನಿಯಮ ಪಾಲಿಸಿ ಸಂತೋಷದಿಂದ ಆಟವಾಡಿರಿ ಎಂದು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಪ್ಪಆಲೂರ, ಪುಟ್ಟಪ್ಪಗುಂಡೂರ, ರಾಮು ನೆಲ್ಲಿವಿಡ, ಗಣಪತಿ ಬಿರಿಸಿನಕೊಪ್ಪಿ, ಹನುಮಂತಪ್ಪ ಲಮಾಣಿ, ನಾಗಪ್ಪ ಲಮಾಣಿ, ದೇವಲಪ್ಪ ಆಲೂರ, ಕ್ರೀಡಾಳುಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.