ಪೀರನವಾಡಿಯಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ

ಬೆಳಗಾವಿ 29: ಸಿರಿಧಾನ್ಶಗಳು ಭವಿಷ್ಶದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಶ. ಈ ನೆಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಸಿರಿಧಾನ್ಶಗಳನ್ನು ಬೆಳೆಸಿ ಆಹಾರವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದು ಬೆಳಗಾವಿಯ ಆದೀವೀರ ಮಲ್ಟಿಸ್ಪೆಷಲಿಸ್ಟ್‌ ಆಸ್ಪತ್ರೆಯ ಡಾ. ಪದ್ಮರಾಜ್ ಪಾಟೀಲ್ ಅವರು ಅಭಿಪ್ರಾಯ ಪಟ್ಟರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೆಳಗಾವಿ-3 ಯೋಜನಾವ್ಯಾಪ್ತಿಯ ಪೀರನವಾಡಿಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸಿರಿ ಮಿಲೆಟ್ ನಿರ್ದೇಶಕ ದಿನೇಶ್ ಎಂ ಅವರು ಮಾತನಾಡಿ ಪೂಜ್ಶರು, ಮಾತೃಶ್ರೀ ಅಮ್ಮನವರ ಆಶಯ ಪೌಷ್ಠಿಕಾಂಶ ಭರಿತ ಸಿರಿಧಾನ್ಶಗಳನ್ನು ರೈತರು ಬೆಳೆಸುವಲ್ಲಿ ಪ್ರೋತ್ಸಾಹ ನೀಡುವುದು. ರೈತರಿಗೆ ಯೋಗ್ಶ ಬೆಲೆ ಒದಗುವಂತೆ ಮಾಡುವುದು, ಸಮಾಜಕ್ಕೆ ಪೌಷ್ಠಿಕಯುತ ಆಹಾರ ದೊರಕುವಂತೆ ಮಾಡುವ ಮೂಲಕ ಆರೋಗ್ಶ ಭದ್ರತೆಯನ್ನು ಒದಗಿಸುವುದಾಗಿದೆ ಎಂದರು. ಇದರೊಂದಿಗೆ ಸಿರಿಧಾನ್ಶಗಳನ್ನು ಆಹಾರವಾಗಿ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.  

 ಜಿಲ್ಲಾ ನಿರ್ದೇಶಕ ಸತೀಶ್ ನಾಯ್ಕರವರು ಮಾತನಾಡಿ ಮಧುಮೇಹ ನಿಯಂತ್ರಣ, ಬೊಜ್ಜು ನಿಯಂತ್ರಣ, ವಿವಿಧ ಆರೋಗ್ಶ ಸಮಸ್ಶೆಗಳಿಗೆ ಸಿರಿಧಾನ್ಶ ರಾಮಬಾಣ ಎಂದರು.  

ಯೋಜನಾಧಿಕಾರಿ ಜ್ಶೋತಿ ಜೋಳದ, ಮಾಲತೇಶ್, ಸುಭಾಶ್ ಅಖಅ ಜಿಲ್ಲಾ ವ್ಶವಸ್ಥಾಪಕ ಮಲ್ಲಿಕಾರ್ಜುನ, ಅಖಅ ಜಿಲ್ಲಾ ಸಂಯೋಜಕ ಅಖಿಲ್, ಕೃಷ್ಣಬಾಯಿ, ಭಾರತಿ ಚೌಗಲೆ, ಸವಿತಾ ರೊಟ್ಟಿ ಮತ್ತು ಸಿರಿಮಿಲೆಟ್ ಹೌಸ್ ಮಾಲಿಕ ಜಯಶ್ರೀ, ಶಿವರಾಜ್ ಮಿರ್ಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸಿರಿಮಿಲೆಟ್ ಮಾರುಕಟ್ಟೆ ಮೇಲ್ವಿಚಾರಕ ರವಿ ಕುಮಾರ್, ವಲಯ ಮೇಲ್ವಿಚಾರಕಿ ವನಿತಾ ಮತ್ತು ಸೇವಾಪ್ರತಿನಿಧಿಯವರು ಕಾರ್ಯಕ್ರಮ ಸಂಘಟನೆಯಲ್ಲಿ ಸಹಕರಿಸಿದರು.