ಫೆ.7ರಂದು ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಉದ್ಘಾಟನೆ

ಲೋಕದರ್ಶನ ವರದಿ

ಬ್ಯಾಡಗಿ03: ಪಟ್ಟಣದ ಶಬರಿ ನಗರದಲ್ಲಿ ನೂತನವಾಗಿ ನಿಮರ್ಿಸಿರುವ ಅಯ್ಯಪ್ಪ ಸ್ವಾಮಿ, ವರಸಿದ್ಧಿ ವಿನಾಯಕ ಹಾಗೂ ಅನ್ನಪೂಣರ್ೆಶ್ವರಿ ದೇವಿ ದೇವಸ್ಥಾನಗಳ  ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಇದೇ ದಿ. 7 ರಂದು ಜರುಗಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯದೇವ ಶಿರೂರು ತಿಳಿಸಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿ. 6 ರಂದು ಬೆಳಿಗ್ಗೆ 8 ಗಂಟೆಗೆ ಮೂರೂ ದೇವರ ಶಿಲಾ ಮೂತರ್ಿಗಳ ಮೆರವಣಿಗೆಯು ಪಟ್ಟಣದಲ್ಲಿರುವ ನೆಹರೂ ನಗರದ ಶ್ರೀ ಸೋಮೇಶ್ವರ ದೇವಾಲಯದಿಂದ ಸಕಲ ವಾದ್ಯ ವೈಭವದೊಂದಿಗೆ ಬಹು ವಿಜೃಂಭಣೆಯಿಂದ ಮುಖ್ಯ ರಸ್ತೆಯ ಮುಖಾಂತರ ಕದರಮಂಡಲಗಿ ರಸ್ತೆಯಲ್ಲಿರುವ ಶಬರಿ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಧಿಯವರೆಗೆ ನಡೆಯಲಿದೆ. 

   ಸಂಜೆ 5 ಗಂಟೆಗೆ ಮಂಡಲ ದರ್ಶನ, ಕಳಸ ಸ್ಥಾಪನೆ, ಸೇರಿದಂತೆ ವಿವಿಧ ಪೂಜೆಗಳು ನಡೆಯುತ್ತವೆ. ದಿ. 7 ರಂದು ಬ್ರಾಹ್ಮೀ ಮುಹೂರ್ತದಲ್ಲಿ ನೆಗಳೂರಿನ ಷ. ಬ್ರ. ಗುರು ಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ   ದೇವರ ಮೂತರ್ಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾ ರೋಹಣ ಜರುಗಲಿದ್ದು, ವೇ//ಬ್ರ// ಗೋಪಾಲಕೃಷ್ಣ ಶಿವಪೂಜಿ ಅವರಿಂದ ವಿಶೇಷ ಪೂಜಾ ಹವನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. 

   ಸಮಿತಿ ಅಧ್ಯಕ್ಷ ಮೋಹನ ಕತ್ತಿ ಮಾತನಾಡಿ, ದಿ.7 ರಂದು ಬೆಳಿಗ್ಗೆ 11 ಗಂಟೆಗೆ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದ್ದು,  ಮುಪ್ಪಿನಸ್ವಾಮಿ ಮಠದ ಚೆನ್ನಮಲ್ಲಿಕಾಜರ್ುನಸ್ವಾಮಿ, ಅಂಕಸಾಪೂರದ ಈಶ್ವರಾನಂದಸ್ವಾಮಿ, ಹಾಗೂ ರಾಚಯ್ಯ ಶಾಸ್ತ್ರಿಗಳ ಉಪಸ್ಥಿತಿಯಲ್ಲಿ ಧರ್ಮದಶರ್ಿಗಳಾದ ಮಂಜುನಾಥ ಮಣೆಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ರಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೇಕಾರ, ಮಾಜಿ ಶಾಸಕರಾದ ಸುರೇಶಗೌಡ್ರ ಪಾಟೀಲ, ಬಸವರಾಜ ಶಿವಣ್ಣನವರ, ಉದ್ಯಮಿ ಎಸ್.ಆರ್. ಪಾಟೀಲ, ಪುರಸಭಾ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಸದ್ಭಕ್ತರು ಭಾಗವಹಿಸಬೇಕೆಂದು ಅವರು ಕೋರಿದರು. 

 ಉಪಾಧ್ಯಕ್ಷರಾದ ಸುರೇಶ ಪಾಟೀಲ, ರಾಮಾಂಜನೇಯ ಕಟ್ಲ, ಬಸಣ್ಣ ಕಡೇಕೊಪ್ಪ, ಎ. ವೆಂಕಟೇಶ, ಟಿ. ಮಂಜಣ್ಣ, ಕರಬಸಪ್ಪ ಅಂಗಡಿ, ಎಸ್.ಎಸ್. ಹಿರೇಮಠ, ಗದಿಗೆಪ್ಪ ಕಡತಿ, ಶಿವಕುಮಾರ ಕೊಪ್ಪದ, ವಿಶ್ವನಾಥ ನವಲೆ, ಸುರೇಶ ಡಂಬಳ, ಪರಶುರಾಮ ಉಜನಿಕೊಪ್ಪ ಉಪಸ್ಥಿತರಿದ್ದರು.