ಇಂದು ಅಂಬಾಭವಾನಿ ದೇವಸ್ಥಾನ ಉದ್ಘಾಟನೆ, ಧರ್ಮಸಭೆ

Inauguration of Ambabhavani temple today, religious meeting

ಇಂದು  ಅಂಬಾಭವಾನಿ ದೇವಸ್ಥಾನ ಉದ್ಘಾಟನೆ, ಧರ್ಮಸಭೆ  

ತಾಳಿಕೋಟಿ, 17;  ಪಟ್ಟಣದ ಗೊಂದಳಿ ಸಮಾಜದ ಆರಾಧ್ಯ ದೈವ ಶ್ರೀ ಅಂಬಾ ಭವಾನಿ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಶಿಷ್ಟಾಪನೆ ಹಾಗೂ ಧರ್ಮಸಭೆ ಇಂದು ( ಫೆ.18) ಮಂಗಳವಾರ ಜರುಗಲಿದೆ. ಬೆಳಿಗ್ಗೆ 10:30 ಘಂಟೆಗೆ ಧರ್ಮಸಭೆಯ ಕಾರ್ಯಕ್ರಮಗಳು ಆರಂಭವಾಗಲಿದ್ದು ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಶ್ರೀ ಸಿದ್ಧಲಿಂಗ ದೇವರು ವಹಿಸುವರು. ಗುಂಡಕನಾಳ ಬ್ರಹನ್ ಮಠದ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರು, ಮ.ನಿ.ಪ್ರ.ಶಿವಕುಮಾರ ಮಹಾಸ್ವಾಮಿಗಳು ಕೊಡೆಕಲ್, ಅನ್ನದಾನೇಶ್ವರ ಹಿರೇಮಠ ಹಿರೂರದ ಷ.ಬ್ರ.ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು, ವಡವಡಗಿ ನಂದಿ ಮಠದ ಮ.ನಿ.ಪ. ಶ್ರೀ ವೀರಸಿದ್ದ ಮಹಾಸ್ವಾಮಿಗಳು, ಕುಂಟೋಜಿ ಭಾವೈಕ್ಯತಾ ಹಿರೇಮಠದ ಶ್ರೀ ಷ.ಬ್ರ.ಡಾ.ಗುರು ಚನ್ನವೀರ ಶಿವಾಚಾರ್ಯರು,ಅರ್ಚಕ ಶ್ರೀ ವೇ.ಮೂ. ಸಂತೋಷ್ ಭಟ್ ಜೋಶಿ ಪಾವನ ಸಾನಿಧ್ಯ ವಹಿಸುವರು. ಕೆಎಸ್‌ಡಿಎಲ್ ಅಧ್ಯಕ್ಷರು, ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ( ಅಪ್ಪಾಜಿ) ಸಮಾರಂಭವನ್ನು ಉದ್ಘಾಟಿಸುವರು. ಗೊಂದಳಿ ಸಮಾಜದ ಅಧ್ಯಕ್ಷ ವಿಠಲ ರಾಮು ಸೂರ್ಯವಂಶಿ, ಗೊಂದಳಿ ಸಮಾಜ ಮೈಸೂರು ರಾಜ್ಯಾಧ್ಯಕ್ಷ ಕೆ. ಜಯರಾಮಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ). ಅತಿಥಿಗಳಾಗಿ ಪುರಸಭೆ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ, ಸುರೇಶ್ ಭಿಸ್ಸೆ ವಿಜಯಪುರ, ಅಂಬಾಜಿ ಜೋಶಿ ಬಾಗಲಕೋಟ, ಯಶೋಧಾ ಇಂಗಳೆ ನಾಗರಾಳ, ಸಿಪಿಐ ಕಾರಟಗಿ ಪ್ರದೀಪ್ ಬಿಸ್ಸೆ, ಕಲಬುರ್ಗಿ ಗೋವಿಂದ ಭಟ್, ಕುಷ್ಟಗಿ ತುಕಾರಾಂ ಸುರ್ವೆ, ನಾಲತವಾಡ ಶಿಕ್ಷಕ ಚೆನ್ನಪ್ಪ ಗೊಂದಳಿ, ನಾರಾಯಣ ಗಣಪತಿ ದುರವೇ, ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಂ ಗೊಂದಳಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರ್ಕಲ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ್ ಹಜೇರಿ, ನೀಲಮ್ಮ ಶಂ.ಪಾಟೀಲ ಹಾಗೂ ತಾಳಿಕೋಟಿ ಮುಸ್ಲಿಂ ಸಮಾಜ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಸಂಭಾಜಿ ವಾಡಕರ, ಹರಿಸಿಂಗ್ ಮೂಲಿಮನಿ, ಭೀಮರಾವ್ ಕುಲಕರ್ಣಿ, ಮಲ್ಲಾರಿ ದರ್ಜಿ, ಬಾಬುರಾವ್ ಚಿತಾಪೂರ, ನಾರಾಯಣ ಹಿಂಗಮೊರೆ, ಲಕ್ಷ್ಮಣ್ ಕಲಾಲ, ಕಕುಸಾ ರಂಗರೇಜ, ಡಾ. ಎನ್‌.ಎಲ್‌.ಶೆಟ್ಟಿ, ಡಿ.ಪಿ.ಧನಪಾಲ, ಡಾ.ಆರಿ​‍್ಪ.ಅಗರವಾಲ, ಚಂದ್ರಶೇಖರ್ ದೊಡ್ಮನಿ, ಹುಲಗಪ್ಪ ಕಟ್ಟಿಮನಿ, ಮುದಕನಗೌಡ ಪಾಟೀಲ, ಬಾಳು ಬಕ್ಷಿ, ಮಾಸೂಮಸಾಬ ಕೆಂಭಾವಿ, ಸಂಜೀವಪ್ಪ ಬರದೇನಾಳ, ಪರುಶುರಾಮ ಹೊಟಗಾರ, ಸಂದೀಪ ಗೋರೆ, ರಮೇಶ್ ಮೂಕಿಹಾಳ, ಯಮನಪ್ಪ ಕಟ್ಟಿಮನಿ ಹಾಗೂ ಗುರುಹಿರಿಯರು ಉಪಸ್ಥಿತರಿರುವರು ಎಂದು ಗೊಂದಳಿ ಸಮಾಜದ ಅಧ್ಯಕ್ಷ ವಿಠ್ಠಲ್ ರಾಮು ಸೂರ್ಯವಂಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.