ಕೂಸಿನ ಮನೆ ಆರೈಕೆದಾರರಿಗೆ 7 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟಣೆ

Inauguration of 7 days training workshop for nursing home caregivers

ಕೂಸಿನ ಮನೆ ಆರೈಕೆದಾರರಿಗೆ 7 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟಣೆ

ಸವದತ್ತಿ 23: ಸ್ಥಳೀಯ ತಾಲೂಕ ಪಂಚಾಯತ ಸಭಾ ಭವನದಲ್ಲಿ ಸೋಮವಾರ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ತಾಲೂಕ ಪಂಚಾಯತ ಸವದತ್ತಿ ಇವರ ಸಹಯೋಗದಲ್ಲಿ ಕೂಸಿನ ಮನೆ ಆರೈಕೆದಾರರಿಗೆ 7 ದಿನಗಳ ತರಬೇತಿ ಕಾರ್ಯಾಗಾರ ವನ್ನು ಮಾನ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಆನಂದ ಬಡಕುಂದ್ರಿ ರವರು ಸಸಿಗೆ ನೀರು ಹಣಿಸುವುದರ ಮೂಲಕ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾನ್ಯ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಆನಂದ ಬಡಕುಂದ್ರಿ ರವರು ಮಾತನಾಡಿ ಉದ್ಯೋಗ ಖಾತರಿ ಕೆಲಸಕ್ಕೆ ಬರುವ ಕೂಲಿಕಾರರ ಮಕ್ಕಳನ್ನು ನೋಡಿಕೊಳ್ಳಲು ಹಾಗೂ ಮಕ್ಕಳ ಅಪೌಷ್ಠಿಕತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಆರೈಕೆ ಕೇಂದ್ರಗಳನ್ನು ಸರ್ಕಾರ ಪ್ರಾರಂಬಿಸಿದ್ದು ಈ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು.  

ಕೂಸಿನ ಮನೆಯಲ್ಲಿನ ಮಕ್ಕಳನ್ನುವಿಶೇಷ ಕಾಳಜಿ ವಹಿಸಿಕೊಂಡು ಪಾಲನೆ ಮತ್ತು ಪೋಷಣೆ ಮಾಡಬೇಕು. 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಪಾಲನೆ -ಪೋಷಣೆ ಮಾಡಬೇಕಿದೆ. ಹಾಗಾಗಿ ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆದುಕೊಂಡು ಕೂಸಿನ ಮನೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಪಾಲನೆ ಮತ್ತು ಪೋಷಣೆಯನ್ನು ಮಾಡುವುದರ ಜೊತೆಗೆ ವ್ಯವಸ್ಥಿತವಾಗಿ ಕೂಸಿನ ಮನೆ ನಡೆಸುವ ನಿಟ್ಟಿನಲ್ಲಿ ಎಲ್ಲ ಆರೈಕೆದಾರರು ಕೆಲಸ ಮಾಡಬೇಕು ಎಂದು ತಿಳಿಸಿದರು.ಬಳಿಕ ಮಾನ್ಯ ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ಆರ್ ಬಿ ರಕ್ಕಸಗಿ ರವರು ಮಾತನಾಡಿ ಮನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಬರುವ ಕೂಲಿಕಾರರ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಪ್ರತಿಯೊಂದು ಮಕ್ಕಳನ್ನು ತಮ್ಮ ಮಕ್ಕಳಂತೆ ಪಾಲನೆ-ಪೋಷಣೆ ಮಾಡಬೇಕು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಾನ್ಯ ತಾಪಂ ಸಹಾಯಕ ನಿರ್ದೇಶಕರು (ಪಂ.ರಾ) ಆರ್ ಎ ಪಾಟೀಲ, ತಾಪಂ ವ್ಯವಸ್ಥಾಪಕರು ಮಲ್ಲಿಕಾರ್ಜುನ ಕಂಬಿ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಪಂ ಎಂಐಎಸ್ ಸಂಯೋಜಕ ನಾಹರಾಜ ಬೆಹರೆ, ಆಡಳಿತ ಸಹಾಯಕಿ ಸಂಜನಾ, ತರಬೇತುದಾರರಾದ ಲಕ್ಷ್ಮೀಬಾಯಿ ಪಾಟೀಲ, ಜ್ಯೋತಿ ಕೊಪ್ಪಳ, ಡಿಟಿಸಿ ಮಲ್ಲಿಕಾರ್ಜುನ ಚಚಡಿ ್ಘ ಗ್ರಾಮ ಕಾಯಕ ಮಿತ್ರರು, ತಾಪಂ ಸಿಬ್ಬಂದಿಗಳು, ಕೂಸಿನ ಮನೆ ಆರೈಕೆದಾರರು, ಇನ್ನಿತರರು ಉಪಸ್ಥಿತರಿದ್ದರು.