ಅರಿಹಂತ ಸಂಸ್ಥೆ 45ನೇ ಶಾಖೆ ಉದ್ಘಾಟನೆ

ಲೋಕದರ್ಶನ ವರದಿ

ಕಾಗವಾಡ 24: ಕಳೇದ 30 ವರ್ಷಗಳಿಂದ ಕನರ್ಾಟಕರಾಜ್ಯದ ಅನೇಕ ತಾಲೂಕಾ ಮತ್ತುಜಿಲ್ಲಾ ಮಟ್ಟದಲ್ಲಿಅರಿಹಂತ ಸಂಸ್ಥೆಯ ಶಾಖೆಗಳನ್ನು ಪ್ರಾರಂಭಿಸಿ ಸುಮಾರು 700 ಕೋಟಿರೂ.ಠೇವಣಿ ಹಣ ಸ್ವೀಕರಿಸಿ, 500 ಕೋಟಿರೂ.ಸಾಲ ವಿತರಿಸಿ ಅನೇಕ ಕುಟುಂಬಗಳಿಗೆ ಆಥರ್ಿಕ ನೆರವು ನೀಡಿದ ಸಹಕಾರರತ್ನರಾವಸಾಹೇಬ ಪಾಟೀಲ ಇವರ ನೇತೃತ್ವದಅರಿಹಂತ ಸೌಹಾರ್ದ ಸಂಸ್ಥೆ ಒಂದು ಮಾದರಿ ಸಂಸ್ಥೆಯೆಂದುಕನರ್ಾಟಕರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತರಕಲ್ಯಾಣ ಇಲಾಖೆ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಸೋಮವಾರರಂದು ಶೇಡಬಾಳದಲ್ಲಿ ಅರಿಹಂತ ಸೌಹಾರ್ದ ಸಂಸ್ಥೆಯ 45ನೇ ಶಾಖೆ ಉದ್ಘಾಟಿಸಿ, ಶ್ರೀಮಂತ ಪಾಟೀಲ ಮಾತನಾಡಿದರು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಸಚಿವ ಶ್ರೀಮಂತ ಪಾಟೀಲ ಈ ಇಬ್ಬರುಅರಿಹಂತ ಸಂಸ್ಥೆಯ ನಿಸ್ವಾರ್ಥ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿಶೇಷ ಸೇವೆಯಿಂದ ಅನೇಕ ಕುಟುಂಬಗಳು ಇವರ ಮೇಲೆ ನಂಬಿಕೆಯಿಟ್ಟುತಮ್ಮ ಹಣವನ್ನು ಸಂಸ್ಥೆಯಲ್ಲಿ ಸಂಗ್ರಹಿಸಿದ್ದರಿಂದ ಈ ಮಟ್ಟಕ್ಕೆ ಬೆಳದಿದೆ ಎಂದು ಹೇಳಿದರು.

ಸಚಿವರು ಹಾಗೂ ಶಾಸಕರನ್ನು ಸಂಸ್ಥಾಪಕ ರಾವಸಾಹೇಬ ಪಾಟೀಲ, ಉತ್ತಮ ಪಾಟೀಲ, ಅಭಿನಂದನ ಪಾಟೀಲ ಹಾಗೂ ಪ್ರಧಾನ ವ್ಯವಸ್ಥಾಪಕ ಅಶೋಕ ಬಂಕಾಪುರೆ ಹಾಗೂ ಸಂಚಾಲಕರು ಸನ್ಮಾನಿಸಿದರು.

ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ರಾಜ್ಯದಲ್ಲಿ ಅನೇಕ ಆಥರ್ಿಕ ಸಂಸ್ಥೆಗಳು ಕೆಲ ಸಮಸ್ಯೆಗಳು ಎದುರಿಸುತ್ತಿರುವಾಗಅರಿಹಂತ ಸೌಹಾರ್ದ ಸಂಸ್ಥೆ 700 ಕೋಟಿರೂ. ಠೇವಣಿ ಹಣ ಸ್ವೀಕರಿಸಿ, 500 ಕೋಟಿ ಸಾಲ ವಿತರಿಸಿ, 5000 ಕೋಟಿದುಡಿಯುವ ಬಂಡವಳ ಹೊಂದಿದೆ. ಮತ್ತು 2 ವರಿಕೋಟಿ ಲಾಭಗಳಿಸಿದೆ. ಈ ಅಭಿವೃದ್ಧಿಯಲ್ಲಿ ಏನೋ ಗುಟ್ಟುಇದೆಎಂದು ಹಾಸ್ಯಚಟಾಕೆ ಮುಖಾಂತರ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಹೊಗಳಿದರು.

ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸುಭಾಷ ಶೇಟೆ, ಸಂಸ್ಥೆಯಎಲ್ಲ ಸಂಚಾಲಕರು, ಶೇಡಬಾಳದ ಹಿರಿಯರಾದ ಮಾಮಾಸಾಹೇಬ ಪಾಟೀಲ, ಭರತೇಶ ಪಾಟೀಲ, ಅಣ್ಣಾಗೌಡಾ ಪಾಟೀಲ, ರಾಜು ನಾಂದ್ರೆ, ಸುನೀಲ ಪಾಟೀಲ, ಸುಭಾಷಕಠಾರೆ, ಸಾಗರಚವಾಜ್, ಅರುಣಗಣೇಶವಾಡಿ, ಪ್ರಕಾಶ ಚೌಗುಲೆ, ತೇಜಗೌಡಾ ಪಾಟೀಲ, ಎಂ.ಎ.ಗಣೆ, ಸುಭಾಷ ಮೋನೆ, ಸಂಜಯ ಪಾಟೀಲ, ಬಿ.ಎಂ.ಚೌಗುಲೆ, ಅಮೋಲ ನಾಯಿಕ, ಉತ್ಕರ್ಶ ಪಾಟೀಲ, ಸುಮತಿನಾಥ ಪಾಟೀಲ, ವಿನೋದ ಬರಗಾಲೆ ಸೇರಿದಂತೆ ಅನೇಕರು ಇದ್ದರು.