ಇಂದು ನೂತನ ಪಂಚಾಯತಿ ಕಾರ್ಯಾಲಯ ಉದ್ಘಾಟನಾ ಸಮಾರಂಭ
Inauguration ceremony of new Panchayat office today
ಯಮಕನಮರಡಿ, 25 : ಸಮೀಪದ ಹತ್ತರಗಿ ಗ್ರಾಮ ಪಂಚಾಯತಿ ಸ್ವಂತ ಸಂಪನ್ಮೂಲದಿಂದ ನಿರ್ಮಿಸಲಾದ ನೂತನ ಗ್ರಾಮ ಪಂಚಾಯತಿ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ಇಂದು ಸೊಮವಾರ ದಿನಾಂಕ 26ರಂದು ಸಾಯಂಕಾಲ 4 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹತ್ತರಗಿ ಸುಕ್ಷೇತ್ರ ಕಾರಿಮಠದ ಪೂಜ್ಯರಾದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಹತ್ತರಗಿ ಯಮಕನಮರಡಿ ಹರಿಮಂದಿರದ ಪೂಜ್ಯರಾದ ಡಾ. ಆನಂದ ಮಹಾರಾಜ ಗೊಸಾವಿ ವಹಿಸಲಿದ್ದು ಉದ್ಘಾಟಕರಾಗಿ ಮಾನ್ಯ ಲೋಕೊಪಯೋಗಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ ಜಾರಕಿಹೋಳಿ ರವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು ಮಾನ್ಯ ಗ್ರಾ ಪಂ ಅಧ್ಯಕ್ಷರು ಸಮೀರ್ ಬೇಪಾರಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಪ್ರಿಯಾಂಕ ಖರ್ಗೆ ಮಾನ್ಯ ಗ್ರಾಮೀಣಾಭಿವೃದ್ದಿ ಪಂಚಾಯತರಾಜ್ಯ ಸಚಿವರು ಕರ್ನಾಟಕ ಸರ್ಕಾರ ಹಾಗೂ ಚಿಕ್ಕೋಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಜಾರಕಿಹೋಳಿ ಇವರು ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಈರಣ್ಣಾ ಕಡಾಡಿ ಮಾನ್ಯ ರಾಜ್ಯ ಸಭಾ ಸದಸ್ಯರು ಚನ್ನರಾಜ ಹಟ್ಟಿಹೋಳಿ ವಿಧಾನಪರಿಷತ್ ಸದಸ್ಯರು ಲಖನ್ ಜಾರಕಿಹೋಳಿ ವಿಧಾನಪರಿಷತ್ ಸಚಿವರು, ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಬೆಳಗಾವಿ, ರಾಹುಲ್ ಶಿಂಧೆ, ಮಾನ್ಯ ಕಾರ್ಯ ನಿರ್ವಾಹಕ ಅಭಿಯಂತರರು ಪಂ ರಾ ಇಂ ವಿಭಾಗ ಚಿಕ್ಕೋಡಿ ಪ್ರವೀಣ ಮಠಪತಿ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಪಂ ಹುಕ್ಕೇರಿ ಟಿಆರ್ ಮಲ್ಲಾಡದ ಅದರಂತೆ ಗೌರವಾನ್ವಿತ ಅತಿಥಿಗಳಾಗಿ ಶಶಿಕಾಂತ ವಂದಾಳೆ ಮಾನ್ಯ ಸಹಾಯಕ ನಿರ್ವಾಹಕ ಅಭಿಯಂತರರು ಉಪವಿಭಾಗ ಚಿಕ್ಕೋಡಿ ಮತ್ತು ಗ್ರಾ ಪಂ ಉಪಾಧ್ಯಕ್ಷರಾದ ಅಕ್ಷತಾ ಭಿಮಗೋಳ ಅದರಂತೆ ಯಮಕನಮರಡಿ ಪೋಲಿಸ ಠಾಣೆ ಸಿಪಿಐ ಜಾವೀದ್ ಮುಶಾಪಿರಿ ಯುವಧುರಿಣರು ರವೀಂದ್ರ ಜಿಂಡ್ರಾಳಿ ಯಮಕನಮರಡಿ ಮಾಜಿ ತಾ ಪಂ ಅಧ್ಯಕ್ಷರು ದಸ್ತಗೀರ ಬಸ್ಸಾಪುರಿ ನಿವೃತ್ತ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಎಬಿ ಪಟ್ಟನಶೆಟ್ಟಿ ಕಿರಿಯ ಅಭಿಯಂತರರು ಉಪವಿಭಾಗ ಹುಕ್ಕೇರಿ ಎಸ್‌ಎ ಗುಸಗೋಳ, ಸ್ವಾಗತ ಕೋರುವವರು ಪಂಚಾಯತ ಅಭಿವೃದ್ದಿ ಅಧಿಕಾರಿ ಆನಂದ ಹೋಳೆನ್ನವರಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಗ್ರಾಮ ಪಂಚಾಯತ ಹತ್ತರಗಿ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 