ಇಂದಿನಿಂದ ಗ್ರಾಮದೇವತೆ ಅಂಕಿ ಆಚರಣೆ: ಐದು ದಿನಗಳ ಧಾರ್ಮಿಕ ಕಾರ್ಯಕ್ರಮ
Village deity Anki celebration from today
ಹನುಮಸಾಗರ 30: ಹನುಮಸಾಗರ ಗ್ರಾಮದಲ್ಲಿ ಸಂಪ್ರದಾಯ ಬದ್ಧವಾಗಿ ನಡೆಯುವ ಗ್ರಾಮದೇವತೆ ಅಂಕಿ ಆಚರಣೆ ಮೇ 1 ಶುಕ್ರವಾರದಿಂದ ಮೇ 5 ಮಂಗಳವಾರದವರೆಗೆ ಐದು ದಿನಗಳ ಕಾಲ ಜರುಗಲಿದೆ.
ಕಾರ್ಯಕ್ರಮಕ್ಕೆ ತಿಮ್ಮನಗೌಡ ಪೊಲೀಸ್ ಪಾಟೀಲ ಅವರ ಮನೆಯಿಂದ ಚಾಲನೆ ದೊರೆಯಲಿದ್ದು, ದೇಸಾಯಿವರು, ಗುರಿಕಾರರು, ತಳವಾರರು ಹಾಗೂ ಮುತ್ತೈದೆಯರು ಭಾಗವಹಿಸಲಿದ್ದಾರೆ. ಮೊದಲ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ಗ್ರಾಮದೇವತೆಗೆ ದೀಪ ಹಚ್ಚುವ (ಅಂಕಿ ಹಾಕುವ) ಮೂಲಕ ಪೂಜೆಗಳು ಆರಂಭವಾಗಲಿವೆ.
ಈ ಸಂದರ್ಭದಲ್ಲಿ ಊರಿನ ಪ್ರಮುಖರು, ಹಿರಿಯರು ಹಾಗೂ ಎಲ್ಲಾ ಸಮುದಾಯದ ಭಕ್ತರು ಭಕ್ತಿ ಭಾವದಿಂದ ಭಾಗವಹಿಸುವಂತೆ ಗ್ರಾಮದೇವತೆ ಸಮಿತಿ ಮನವಿ ಮಾಡಿದೆ.ಐದು ದಿನಗಳ ಅವಧಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಐದನೇ ದಿನವಾದ ಮಂಗಳವಾರ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮದೇವತೆ ದೇವಸ್ಥಾನದಿಂದ ಊರಿನ ಎಲ್ಲಾ ಪ್ರಮುಖ ದೇವಸ್ಥಾನಗಳಿಗೆ ‘ಉಡಿ ತುಂಬುವ’ ವಿಧಿ ನೆರವೇರಿಸಲಾಗುತ್ತದೆ. ಡೊಳ್ಳು, ಬಾಜಾ ಹಾಗೂ ಭಜಂತ್ರಿಗಳ ನಾದದ ನಡುವೆ ಮುತ್ತೈದೆಯರು ಮತ್ತು ಊರಿನ ಪ್ರಮುಖರು ಭಾಗವಹಿಸಿ, ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಕಾಯಿ, ಕಪೂರ ಮತ್ತು ಉಡಿಯನ್ನು ಸಮರ್ಿಸಿ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಿದ್ದಾರೆ.ಆಚರಣೆ ಅವಧಿಯಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಶುಕ್ರವಾರ ಹಾಗೂ ಮಂಗಳವಾರದಂದು ಕುಟ್ಟುವುದು ಮತ್ತು ಬೀಸುವುದು ಸಂಪೂರ್ಣ ನಿಷೇಧವಾಗಿದ್ದು, ಉಳಿದ ಮೂರು ದಿನಗಳಲ್ಲಿ ದೈನಂದಿನ ಕೆಲಸಗಳಿಗೆ ಅವಕಾಶ ನೀಡಲಾಗಿದೆ.ಗ್ರಾಮದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಏಕತೆಯ ಪ್ರತೀಕವಾಗಿರುವ ಈ ಅಂಕಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಗ್ರಾಮದೇವತೆ ಸಮಿತಿ ಪ್ರಕಟಣೆಯಲ್ಲಿ ಗ್ರಾಮಸ್ಥರನ್ನು ಕೋರಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 