ನೂತನ ಶಿಖರ ಕಳಸಾರೋಹಣ ಸಮಾರಂಭಕ್ಕೆ ಭಕ್ತಿ ಪೂರ್ವಕ ದೇಣಿಗೆ ಸಲ್ಲಿಸುತ್ತಿರುವ ಭಕ್ತಾದಿಗಳು

ನೂತನ ಶಿಖರ ಕಳಸಾರೋಹಣ ಸಮಾರಂಭಕ್ಕೆ ಭಕ್ತಿ ಪೂರ್ವಕ ದೇಣಿಗೆ ಸಲ್ಲಿಸುತ್ತಿರುವ ಭಕ್ತಾದಿಗಳು Devotees making devotional donations for the new summit ascension ceremony

ಲೋಕದರ್ಶನ ವರದಿ 

ಯಮಕನಮರಡಿ 30: ಸಮೀಪದ ದಾದಬಾನಹಟ್ಟಿ ಗ್ರಾಮದ ಶ್ರೀ ಲಕ್ಷ್ಮಿ ದೇವಿ ಮಂದಿರದ ನೂತನ ಶಿಖರ ಮತ್ತು ಕಳಸರೋಹನ ಸಮಾರಂಭವು ಮೇ 17 18 ರಂದು ಜರುಗಲಿದ್ದು ಗ್ರಾಮದ ಭಕ್ತಾದಿಗಳು ತಮ್ಮ ತಮ್ಮ ದೇಣಿಗೆ ಯನ್ನು ಭಕ್ತಿ ಪೂರ್ವಕ ಸಲ್ಲಿಸುತ್ತಿರುವ ದೃಶ್ಯ ದೇವಸ್ಥಾನದ ಉಸ್ತುವಾರಿ ಕಮಿಟಿಯ ಅಧ್ಯಕ್ಷರಾದ ಶೆಟ್ಯಪ್ಪ ಜಮಕೋಳಿ ಅವರು ತಮ್ಮ ಭಕ್ತಿ ದೇಣಿಗೆ ಸಲ್ಲಿಸುವಲ್ಲಿ ಯಶಸ್ವಿಯಾದರು. 

ಈ ಸಂದರ್ಭದಲ್ಲಿ ಉಸ್ತುವಾರಿ ಸದಸ್ಯರು ಉಪಸ್ಥಿತರಿದ್ದು ದೇಣಿಗೆಯನ್ನು ಸ್ವೀಕರಿಸಿದರು. ಸಂಪ್ರದಾಯದಂತೆ ಉಸ್ತುವಾರಿ ಸರ್ವ ಸದಸ್ಯರನ್ನು ಪಾದ ತೊಳೆದು ಪೂಜೆ ಸಲ್ಲಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಿ ಸನ್ಮಾನಿಸಿ ದೇಣಿಗೆ ಸಲ್ಲಿಸುವ ಸಂಪ್ರದಾಯವು ಇಂದಿಗೂ ರೂಡಿಯಲ್ಲಿರುವದೊಂದು ಪದ್ಧತಿ ಅಲ್ಲದೆ ಸಮಾರಂಭಕ್ಕೆ ಸುಮಾರು 500 ಸುಮಂಗಲಿಯರ ಕುಂಭಮೇಳ ನಡೆಯಲಿದೆ ಎಂದು ಉಸ್ತುವಾರಿ ಸದಸ್ಯರು ತಿಳಿಸಿದ್ದಾರೆ.