ವಿವಿಧ ಕಾಮಗಾರಿಗೆ ಶಾಸಕ ಸಿದ್ದು ಸವದಿಯವರಿಂದ ಉದ್ಘಾಟನೆ, ಭೂಮಿಪೂಜೆ ಕಾರ್ಯಕ್ರಮ.

ವಿವಿಧ ಕಾಮಗಾರಿಗೆ ಶಾಸಕ ಸಿದ್ದು ಸವದಿಯವರಿಂದ ಉದ್ಘಾಟನೆ, ಭೂಮಿಪೂಜೆ ಕಾರ್ಯಕ್ರಮ. Inauguration and ground-breaking ceremony of various works by MLA Siddu Savadi.

ವಿವಿಧ ಕಾಮಗಾರಿಗೆ ಶಾಸಕ ಸಿದ್ದು ಸವದಿಯವರಿಂದ ಉದ್ಘಾಟನೆ, ಭೂಮಿಪೂಜೆ ಕಾರ್ಯಕ್ರಮ.

ಮಹಾಲಿಂಗಪುರ 02: ಸರ್ಕಾರಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಕಾಮಗಾರಿಗಳಲ್ಲಿ ಯಾವುದೇ ಲೋಪ ಮತ್ತು ಅವ್ಯವಹಾರ ಆಗದಂತೆ ಎಚ್ಚರವಹಿಸಿ ಪ್ರಾಮಾಣಿಕವಾಗಿ ಕಾಮಗಾರಿಯನ್ನು ಮುಗಿಸಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು. 

ಶಾಸಕ ಸಿದ್ದು ಸವದಿಯವರು ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ಕೊಠಡಿ ನಿರ್ಮಾಣ ಮಾದರ ಚೆನ್ನಯ್ಯ ಬಾಗಿಲು ನಿರ್ಮಾಣ, ಈದ್ಗಾ ಮೈದಾನದ ರಸ್ತೆ ಬದಿಗೆ ವಿದ್ಯುತ್ ಕಂಬ, ಮತ್ತು ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗಳಿಗೆ ಚಾಲನೆ ನೀಡಿ ಕೆಇಬಿ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಉದ್ಘಾಟನೆ ಸೇರಿದಂತೆ ಅಂದಾಜು 50 ಲಕ್ಷ ವೆಚ್ಚದ ಕಾಮಗಾರಿ ನೆರವೇರಿಸಿದರು.ಶನಿವಾರ ಬೆಳಿಗ್ಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಹಂತ ನಾಲ್ಕರ ಅಡಿಯಲ್ಲಿ ಶೇ 5 ಅ ರಷ್ಟು ಪ್ರೋತ್ಸಾಹ ಧನದಡಿ 8 ಲಕ್ಷ ವೆಚ್ಚದಲ್ಲಿ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಅಡುಗೆ ಕೋಣೆ ನಿರ್ಮಾಣ ಮತ್ತು 5 ಲಕ್ಷ ವೆಚ್ಚದಲ್ಲಿ ಮಾದರ ಚೆನ್ನಯ್ಯ ದ್ವಾರ ಬಾಗಿಲು ನಿರ್ಮಾಣ ಕಾಮಗಾರಿ ಮತ್ತು 2022-23 ಸಾಲಿನ ಪುರಸಭೆ ನಿಧಿ ಅಡಿಯಲ್ಲಿ 8.5 ಲಕ್ಷ ವೆಚ್ಚದಲ್ಲಿ ಕೆಂಗೇರಿಮಡ್ಡಿಯ ಈದ್ಗಾ ಮೈದಾನದಿಂದ ಕೋಡಿಹಾಳ ರಸ್ತೆ ಬದಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ ಮತ್ತು 2022-23 ನೇ ಸಾಲಿನ ಶಿಕ್ಷಣ ಇಲಾಖೆಯ ವಿವೇಕ ಕೊಠಡಿಗಳ ಅನುದಾನದಡಿ 27.80 ಲಕ್ಷ ವೆಚ್ಚದ ಸ್ಥಳೀಯ ಕೆಇಬಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. 

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಉಪಾಧ್ಯಕ್ಷ ಶೀಲಾ ಭಾವಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಾಗವಾನ, ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ,ಪುರಸಭಾ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಸಜನಸಾಬ ಪೆಂಡಾರಿ,ಮುಖಂಡರಾದ ಅಶೋಕಗೌಡ ಪಾಟೀಲ,ಈರ​‍್ಪ ದಿನ್ನಿಮನಿ, ಜಿ.ಎಸ್‌.ಗೊಂಬಿ, ಸುನೀಲಗೌಡ ಪಾಟೀಲ,ಅಶೋಕ ದಿನ್ನಿಮನಿ, ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಲಕ್ಷ್ಮಣ ಮಾಂಗ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಜಮೀರ್ ಯಕ್ಷಂಬಿ ,ಗುರುಪಾದ ಅಂಬಿ, ಶಿವಬಸು ಗೌಂಡಿ, ಎಂ.ಡಿ.ಆನಂದ, ಅರ್ಜುನ ಮೋಪಗಾರ ,ಮಹಾಲಿಂಗಪ್ಪ ಕಂಠಿ, ರಾಜೇಶ ಭಾವಿಕಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಸಂಜಯ ರಾಠೋಡ, ಸಿಬಿಸಿ ಅಧ್ಯಕ್ಷ ಮಹೇಶ ಜಿಡ್ಡಿಮನಿ, ಉಪಾಧ್ಯಕ್ಷ ವಿಜಯ ಸಬಕಾಳೆ, ಶ್ರೀಧರ ಹಳ್ಳಿ, ತಿಪ್ಪಣ್ಣ ಬಂಡಿವಡ್ಡರ, ಮಹಾಲಿಂಗ ಶಿವಣಗಿ, ಬಸು ಪರಿಟ್,ರವಿ ಗಿರಿಸಾಗರ,ರಾಮು ಪಾತ್ರೋಟ,ಮಹಾಲಿಂಗ ಬುದ್ನಿ, ಅಲ್ಲಪ್ಪ ಲೋಕಾಪುರ,ಬಸವರಾಜ ಮಡಿವಾಳ,ಪುರಸಭಾ ಮುಖ್ಯಾಧಿಕಾರಿ ನಾಮದೇವ ಲಮಾಣಿ,ಹಾಗೂ ಅಧಿಕಾರಿಗಳಾದ ಎಸ್‌. ಎನ್ .ಪಾಟೀಲ, ಎಸ್‌. ಎಂ. ಕಲಬುರ್ಗಿ ಸೇರಿದಂತೆ ಹಲವರು ಇದ್ದರು.  

ಬಾಕ್ಸ್‌: "ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆ ಕಾಮಗಾರಿ ವೀಕ್ಷಿಸಿದ ಶಾಸಕರು ನೆಲಕ್ಕೆ ಟೈಲ್ಸ್‌ ಹಾಕುವ ಬದಲು ಬೆಡ್ ಹಾಕಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನೀಲಿ ನಕಾಶೆಯಲ್ಲಿರುವಂತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು."