ಲೋಕದರ್ಶನ ವರದಿ
ಬೆಳಗಾವಿ 08: ಜೆನೆರಿಕ್ ಮೆಡಿಸಿನ್ಗಳು ಇವತ್ತಿನ ಸಮಾಜಕ್ಕೆ ಅತೀ ಅವಶ್ಯಕವಾಗಿದ್ದು ಇದರಿಂದ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತಿದ್ದು ಜೆನೆರಿಕ್ಪ್ಲಸ್ ಔಷಧಿ ಅಂಗಡಿಗಳು ಮಹತ್ವದ ಪಾತ್ರವಹಿಸುತ್ತವೆ. ಈಗಾಗಲೇ ನಗರದಲ್ಲಿ ಜೆನೆರಿಕ್ಪ್ಲಸ್ ಸಂಸ್ಥೆಯ 7 ಔಷಧಿ ಅಂಗಡಿಗಳು ಕಾರ್ಯನಿರತವಾಗಿದ್ದು ಇದರಿಂದ ಬೆಳಗಾವಿ ಜನತೆಗೆ ಉಪಯೋಗವಾಗುತ್ತಿದೆ. ಇದರಿಂದ ಬಡಜನರಿಗೆ ಬಹಳಷ್ಟು ಉಪಯೋಗವಾಗುತ್ತಿದೆ ಎಂದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಣಬಗರ್ಿಯಲ್ಲಿ ಜೆನೆರಿಕ್ಪ್ಲಸ್ನ 7ನೇ ಔಷಧಿ ಅಂಗಡಿ ಉದ್ಘಾಟಿಸುವ ಸಂದರ್ಭದಲ್ಲಿ ಮಾತನಾಡಿದ ಅವರು ಮಹೇಶ್ ಫೌಂಢೇಶನ್ ಮತ್ತು ಜೆನೆರಿಕ್ಪ್ಲಸ್ ಮಾಡುತ್ತಿರುವ ಕಾರ್ಯದ ಬಗ್ಗೆ ಶ್ಲಾಘಿಸಿದರು.
ಜೆನೆರಿಕ್ಪ್ಲಸ್ ಔಷಧಿ ಅಂಗಡಿಯಲ್ಲಿ ಅತೀ ಕಡಿಮೆ ದರದಲ್ಲಿ ಎಲ್ಲ ತರಹದ ಔಷಧಿಗಳು ಉಪಲಬ್ಧವಿದ್ದು ಬ್ರ್ಯಾಂಡೆಡ್ ಮತ್ತು ಜೆನೆರಿಕ್ ಮೆಡಿಸಿನ್ನಲ್ಲಿ ಯಾವುದೇ ವ್ಯತ್ಯಾಸ ಇಲ್ಲದ ಕಾರಣ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಕಣಬಗರ್ಿಯ ಖ್ಯಾತ ವೈದ್ಯರಾದ ಡಾ.ವಾಯ್.ಬಿ. ಘಸಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜೆನೆರಿಕ್ಪ್ಲಸ್ನ ಮುಖ್ಯಸ್ಥರಾದ ಮತ್ತು ಮಹೇಶ್ ಫೌಂಢೇಶನ್ ಅಧ್ಯಕ್ಷ ಮಹೇಶ ಜಾಧವ್ ಮಾತನಾಡಿ ಬರುವ 2 ತಿಂಗಳಿನಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಇನ್ನೂ ಹೊಸ 15 ಔಷಧಿ ಅಂಗಡಿಗಳನ್ನು ತೆರೆಯುತ್ತಿದ್ದು ಇದರಿಂದ ಜನರಿಗೆ ಅನುಕೂಲವಾಗುವುದಿದೆ ಎಂದು ಹೇಳಿದರು. ಕಣಬಗರ್ಿ ನಗರಸೇವಕ ಭೈರಗೌಡ ಪಾಟೀಲ, ಸಮಾಜ ಸೇವಕ ಅಂಜನಕುಮಾರ ಗಂಡಗುದರ, ಡಾ. ಘಸಾರಿ, ಡಾ. ಸುನೀಲ ಚಿಕ್ಕೋಡಿ, ನ್ಯಾಯವಾದಿ ಮುರಗೇಶ ಪಾಟೀಲ ಮತ್ತು ಕಣಬಗರ್ಿ ನಾಗರಿಕರು ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.