ನೈಸರ್ಗಿಕ ಕೃಷಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ

Inaugural Program of Natural Agriculture Workshop

ನೈಸರ್ಗಿಕ ಕೃಷಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ

ಹುಲಕೋಟಿ 03 : ನಾಡು ಕಂಡ ಅಪರೂಪದ ರಾಜಕಾರಣಿ, ಸಹಕಾರಿ ರಂಗದ ಭೀಷ್ಮ  ಕೆ.ಎಚ್‌.ಪಾಟೀಲರ ಜನ್ಮ ಶತಮಾನೋತ್ಸವ (1925-2025) ಸಂಭ್ರಮದ ಅಂಗವಾಗಿ ನೈಸರ್ಗಿಕ ಕೃಷಿ ಕಾರ್ಯಾಗಾರವನ್ನು ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ದಿನಾಂಕ 02-03-2025 ರಿಂದ 03-03-2025ರ ವರೆಗೆ ಏರಿ​‍್ಡಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ  ಎಚ್‌.ಕೆ.ಪಾಟೀಲ, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿ, ಕೃಷಿಯಲ್ಲಿರುವ ಹಲವಾರು ಸಮಸ್ಯೆಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವರು. ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕು ನೈಸರ್ಗಿಕ ಕೃಷಿಯನ್ನು ಮಾಡಲು ರೈತರು ಮುಂದೆ ಬರಬೇಕು. ಇದರಿಂದ ರೈತರ ಆತ್ಮ ಹತ್ಯೆಯ ಪ್ರಕರಣಗಳು ಕಡಿಮೆ ಆಗಬೇಕು.  ಇಲ್ಲಿ ಸೇರಿರುವಂತಹ ರೈತರೆಲ್ಲರೂ ಸೇರಿ ಸೂಕ್ತವಾದ ನಿರ್ಣಯಗಳನ್ನು ಕೈಗೊಂಡರೆ ಅವುಗಳನ್ನು ಈಡೇರಿಸಲು ರಾಜಕೀಯವಾಗಿ ಹಾಗೂ ಕಾನೂನಾತ್ಮಕ ನೀತಿಗಳನ್ನು ಜಾರಿಗೊಳಿಸಲು ನಾವು ಬದ್ದವಾಗಿದ್ದೇವೆ. ಒಟ್ಟಾರೆಯಾಗಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡು, ಅವರ ಬದುಕಿನಲ್ಲಿ ಸಕರಾತ್ಮಕ ಬದಲಾವಣೆಯನ್ನು ತರಬೇಕು. ಜೊತೆಗೆ ನಾವು ನೀವೆಲ್ಲರೂ ವಿಷಮುಕ್ತ ಆಹಾರವನ್ನು ಸೇವಿಸುವಂತಾಗಬೇಕು. ಹಾಗಾದಾಗ ಇಡೀ ಜಗತ್ತಿಗೆ ನಿಮ್ಮಂತಹ ರೈತರೆಲ್ಲರ ಬಹು ದೊಡ್ಡ ಕೊಡುಗೆ ಆಗುತ್ತದೆ ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಡಿ.ಆರ್‌.ಪಾಟೀಲ, ಚೇರಮನ್, ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಮಾಜಿ ಶಾಸಕರು, ಗದಗ ಇವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಈ ದಿಶೆಯಲ್ಲಿ ನಾವು ಕೆಲಸ ಮಾಡುತ್ತಿದ್ದು ಇನ್ನೂ ಹೆಚ್ಚು ಕೆಲಸ ಆಗಬೇಕು. ರೈತರು ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಲು ನೈಸರ್ಗಿಕ ಕೃಷಿ ಒಂದು ಉತ್ತಮ ಕೊಡುಗೆಯಾಗಿದೆ. ಪ್ರತಿಯೊಬ್ಬರು ವಿಷಮುಕ್ತ ಆಹಾರವನ್ನು ದಿನ ನಿತ್ಯ ಸೇವಿಸುವಂತಾಗಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದಂತಹ      ತುಮಕೂರಿನ ನೈಸರ್ಗಿಕ ಕೃಷಿ ತಜ್ಞರಾದಂತಹ ಶ್ರೀ ಪ್ರಸನ್ನ ಮೂರ್ತಿ ಅವರು ಹಲವಾರು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವರು. ಇನ್ನೋರ್ವ ಅತಿಥಿಗಳಾದ   ರಾಜಶೇಖರ ನಿಂಬರಗಿ, ಪ್ರಗತಿಪರ ರೈತರು, ಇಂಡಿ ಅವರು ಪ್ರಸನ್ನ ಮೂರ್ತಿ ಅವರ ಮಾರ್ಗದರ್ಶನದಂತೆ 10 ವರ್ಷದಿಂದ ನೈಸರ್ಗಿಕ ಕೃಷಿಯನ್ನು ಮಾಡಿ ಒಂದು ನಿಂಬೆ ಗಿಡದಿಂದ 5000 ಉತ್ತಮ ನಿಂಬೆ ಕಾಯಿಗಳನ್ನು ಪಡೆಯುತ್ತಿರುವರು ಎಂದು ತಿಳಿಸಿದರು.  ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿದ್ದ ಪ್ರಸನ್ನ ಮೂರ್ತಿ ಅವರು ಮಾತನಾಡಿ ನಮ್ಮ ಹೊಲದ ಮಣ್ಣು ಹೊಲದಿಂದ ಹೊರಗೆ ಹೋಗದಂತೆ ತಡೆಯುವದು ಬಿದ್ದ ನೀರು ಇಂಗುವಂತೆ ಮಾಡುವುದು ತಮ್ಮ ಹೊಲದ ಬೀಜವನ್ನು ತಾವೇ ಉಪಯೋಗಿಸಬೇಕು. ಒಂದು ಜವಾರಿ ಆಕಳನ್ನು ಬೆಳಸಿ ಅದರಿಂದ ಬರುವಂತಹ ಗಂಜಲು ಮತ್ತು ಶಗಣಿ ಉಪಯೋಗಿಸಿ ತಮ್ಮ 6 ಎಕರೆ ಕ್ಷೇತ್ರದಲ್ಲಿ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವೆವು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಪ್ರಗತಿಪರ ರೈತರಾದ ಸಿದ್ದಪ್ಪ ಕರಿಕಟ್ಟಿ,  ಅಕ್ಬರಸಾಬ ಬಬರ್ಚಿ, ಡಾ.ಎಲ್‌.ಜಿ.ಹಿರೇಗೌಡರ, ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರರು ಹಾಗೂ ಸೆಕ್ರೆಟರಿ ಎ.ಎಸ್‌.ಎಫ್, ಹುಲಕೋಟಿ, ಡಾ.ಸುಧಾ ವ್ಹಿ. ಮಂಕಣಿ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯದ 18 ಜಿಲ್ಲೆಗಳಿಂದ ಆಗಮಿಸಿದ್ದ 230 ಜನ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.