ಯಲ್ಲಾಪುರ ತಾಲೂಕಿನಲ್ಲಿ ಯಂತ್ರನಾಟಿಗೆ ಚಾಲನೆ

  ಯಲ್ಲಾಪುರ : ಕೃಷಿಯಲ್ಲಿ ಕೂಲಿ ಆಳುಗಳ ಕೊರತೆ ಕಾಣುತ್ತಿದ್ದು.ಕನರ್ಾಟಕ ಸರಕಾರ ಕೃಷಿ-ಇಲಾಖೆ ಪ್ರಾಯೋಜಿತ ಹಾಗೂ ಶ್ರೀ,ಕ್ಷೆ,ಧ,ಗ್ರಾ,ಯೋಜನೆಯ ಕ್ರಷಿ ಯಂತ್ರಧಾರೆಯ ಸಮರ್ಪಕವಾದ ಬಳಕೆಯಿಂದ ಕೃಷಿಯಲ್ಲಿ ಖರ್ಚನ್ನು ಕಡಿಮೆ ಮಾಡಿ ಹಾಗೂ ಹೆಚ್ಚಿನ ಆದಾಯ ಗಳಿಸಲು ಸಾದ್ಯ ಎಂದು ಮಂಚಿಕೇರಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿ   ಪ್ರಮೀಳಾ ಘೋಡಸೆ ಹೇಳಿದರು.ಅವರು ಗುರುವಾರ ತಾಲೂಕಿನ ಚಂದಗುಳಿ ಗ್ರಾಮಪಂಚಾಯತಿಯ ಹುಬ್ನಳ್ಳಿಗ್ರಾಮದಲ್ಲಿಶ್ರೀ,ಕ್ಷೆ,ಧ,ಗ್ರಾ,ಯೋಜನೆಯ ಮಾರ್ಗದರ್ಶನದಲ್ಲಿ ಪ್ರಗತಿಪರ ಕ್ರಷಿಕರಾದ ಪೆದ್ರು ಸಿದ್ದಿಯವರ ಕ್ರಷಿ

ಜಮೀನಿನಲ್ಲಿ ಯಂತ್ರನಾಟಿಗೆ ಚಾಲನೆ ನೀಡಿ ಮಾತನಾಡಿದರು. 

 ಕೃಷಿಯಂತ್ರಧಾರೆಯ ವ್ಯವಸ್ಥಾಪಕರಾದ ಚಂದ್ರಹಾಸ ಅವರು ಮಾತನಾಡಿ ಯೋಜನೆಯ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಪ್ರಸ್ತುತ ಮುಂಗಾರಿನಲ್ಲಿ 665 ಕ್ಕಿಂತಲೂ ಅಧಿಕ ಕುಟುಂಬದಲ್ಲಿ 900 ಎಕ್ರೆ ಪ್ರದೇಶದಲ್ಲಿ ಭತ್ತ ಯಂತ್ರನಾಟಿಯನ್ನು ಮಾಡಿಸಲಾಗುತ್ತದೆ.ಅದೆ ರೀತಿ ಯಲ್ಲಾಪುರ ತಾಲೂಕಿನಾದ್ಯಂತ ಸುಮಾರು 75 ಕುಟುಂಬದಲ್ಲಿ 150 ಎಕ್ರೆ ಪ್ರದೇಶದಲ್ಲಿ ನಾಟಿಯಂತ್ರದ ಮೂಲಕ ಭತ್ತನಾಟಿ ಮಾಡಿಸಲಾಗುತ್ತದೆ.ಎಂದು ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ  ಶ್ರೀ,ಕ್ಷೆ,ಧ, ಗ್ರಾ,ಯೋಜನೆಯಲ್ಲಿ ಕೃಷಿ ಮೇಲ್ವಿಚಾರಕ  ಗಣಪತಿ ನಾಯ್ಕ, ಶ್ರೀ ಕೂಟದ ಅಧ್ಯಕ್ಷ ಅಶೋಕ ನಾಯ್ಕ,ಆನಂದ ನಾಯ್ಕ,ಸೇವಾ ಪ್ರತಿನಿಧಿ ಮಂಜುನಾಥ ಹೆಗಡೆ  ಚಂದ್ರಕಾಂತ ನಾಯ್ಕ,ಮಹೇಶ ಸಿದ್ದಿ, ಚಂದ್ರು ಮರಾಠಿ, ಅಭೀಷೆಕ ನಾಯ್ಕ, ಉಪಸ್ಥತರಿದ್ದರು.