ಕಾಗವಾಡ ಪಟ್ಟಣದಲ್ಲಿ: ರಂಗೋಲಿಯ ಚಿತ್ತಾರದಿಂದ ಮತದಾನ ಜಾಗೃತಿ


ಶೇಡಬಾಳ 19: ಚುನಾವಣೆಯಲ್ಲಿ ಪ್ರತಿಯೊಬ್ಬರು ಚಲಾಯಿಸುವ ಮತ ಅತ್ಯಮೂಲ್ಯವಾಗಿದ್ದು, ನೀವು ಚಲಾಯಿಸುವ ಮತ ದೇಶದ ಆಡಳಿತ ಚುಕ್ಕಾಣೆಯನ್ನೇ ಬದಲಿಸುವ ಶಕ್ತಿ ಹೊಂದಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಸುಭಧ್ರ ಸಕರ್ಾರ ರಚನೆಗೆ ನಾಂದಿ ಹಾಡಬೇಕೆಂದು ಕಾಗವಾಡ ಸಮಗ್ರ ಶಿಶು ಅಭಿವೃದ್ಧಿಯ ಸಿಡಿಪಿಓ ಡಾ.ಸುರೇಶ ಕದ್ದು ಹೇಳಿದರು.

 ಅವರು ಸೋಮವಾರ ದಿ. 18 ರಂದು ಕಾಗವಾಡ ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಇಲಾಖೆ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮತದಾರರ ನೋಂದಣಿ ಹಾಗೂ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮ ಮತ್ತು ಮತದಾನದ ಮಹತ್ವವನ್ನು ರಂಗೋಲಿಯ ಚಿತ್ತಾರದ ಮೂಲಕ ಬಿಂಬಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಮ್ಮ ಜನ್ಮ ಸಿದ್ಧ ಹಕ್ಕಾಗಿರುವ ಮತದಾನವನ್ನು ಯಾವುದೇ ಅಂಜಿಕೆ ಅಳಕು ಇಲ್ಲದೇ ಚಲಾಯಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಕಾಗವಾಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನದ ಮಹತ್ವ ಹಾಗೂ ಜಾಗೃತಿಯನ್ನುಂಟು ಮಾಡಿದರು. ದಾರಿಯುದ್ದಕ್ಕೂ ಮತದಾನದ ಮಹತ್ವದ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿ ಮಾಡಿದರು.