ಆಧುನಿಕ ಯುಗದಲ್ಲಿ ಮಹಿಳೆ ಸರ್ವ ರಂಗದಲ್ಲೂ ಸರಿಸಮನಾಗಿ ನಿಲ್ಲಬಲ್ಲಳು: ಡಾ ರಶ್ಮಿ ಸೊರಗಾಂವಿ

In the modern era, women can stand on equal footing in all fields: Dr Rashmi Soragamvi

ಮಹಾಲಿಂಗಪುರ 12: ಇಂದಿನ ಆಧುನಿಕ ಯುಗದಲ್ಲಿ ಮಹಿಳೆ ಪ್ರತಿ ರಂಗದಲ್ಲಿ ಪುರುಷರಿಗೆ ಸರಿ ಸಮನಾಗಿ ಕಾರ್ಯ ನಿರ್ವಹಿಸುತ್ತಿರುವುದು ಎದ್ದು ಕಾಣುತ್ತದೆ.ರಾಜಕೀಯ, ಕ್ರೀಡೆ, ವಿಜ್ಞಾನ, ಕೃಷಿ, ಬ್ಯಾಂಕಿಂಗ್, ಉದ್ದಿಮೆ, ಶಾಲೆ, ಸೈನ್ಯ, ವೈದ್ಯಕೀಯ ಇನ್ನುಳಿದ ಎಲ್ಲಾ ರಂಗದಲ್ಲೂ ಪ್ರತಿ ರಂಗದಲ್ಲೂ ಪ್ರಗತಿ ಸಾಧಿಸಿ ಸಮಾನತೆ ಸಾರಿದ್ದಾಳೆ, ಎಂದು ನಗರದ ಖ್ಯಾತ ವೈದ್ಯ ಡಾ ರಶ್ಮಿ ಸೊರಗಾಂವಿ  ಹೇಳಿದರು. 

ಅವರು ನಗರದ ಶ್ರೀ ಸಿದ್ದಾರೂಢ  ದೇವಸ್ಥಾನದಲ್ಲಿ  ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು ಮಹಿಳೆ ಇಂದು ಜಗತ್ತಿನ ಅರ್ಧದಷ್ಟು ಇದ್ದರು ಪುರುಷ ಪ್ರಧಾನ ಸಮಾಜದಲ್ಲಿ  ಪ್ರತಿ ರಂಗದಲ್ಲೂ ಸರಿಸಮಾನಾಗಿ ಕೆಲಸ ಮಾಡುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಇಂದು ಜಗತ್ತಿನ ಬಲಿಷ್ಟ ರಾಷ್ಟಗಳನ್ನು ಹಿಡಿದು ಅನೇಕ ದೇಶಗಳನ್ನು ಮುನ್ನೇಡೆಸುತ್ತಿರುವುದೇ ಸಾಕ್ಷಿ ಎಂದರು. 

ಅರೋಗ್ಯ ಇಂದಿನ ಬಹು ಮುಖ್ಯವಾಗಿದೆ. ಪ್ರತಿ ಆಹಾರವು ವಿಷಯುಕ್ತವಾಗಿದೆ. ಓಷಧಿ ಬಳಕೆ ಅತಿಯಾಗಿ ಅರೋಗ್ಯ ಹದಗೆಡುತ್ತಿದೆ. ಅದರಲ್ಲೂ ಗರ್ಭಕಂಠದ ಕ್ಯಾನ್ಸರ ಕುರಿತು ಸಮಗ್ರ ಮಾಹಿತಿ ನೀಡಿ ಆರಂಭದಲ್ಲಿ ಗುರುತಿಸಿದ್ದರೆ. ಮಾತ್ರ್‌ ಬೇಗನೆ ಗುಣಪಡಿಸಬಹುದು ದೇಹದಲ್ಲಿ ಯಾವುದೇ ಬದಲಾವಣೆ ನಿರ್ಲಕ್ಷ ಬೆಡ ತಕ್ಷಣ ವೈದ್ಯರಿಗೆ ತೋರಿಸಿ ಬೆಳೆಯಲು ಬಿಡಬೇಡಿ ಬೆಳದಷ್ಟು ಅಪಾಯ ಕಟ್ಟಿಟ್ಟ ಬುತ್ತಿ.ಎಂದರು. 

ನಂತರ  ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ಕೆ ಎಲ್ ಇ ಸಂಸ್ಥೆಯ ಶಿಕ್ಷಕರಾದ ಶ್ರೀಮತಿ ಸಪನಾ ಅನಿಗೋಳ  ಮಹಿಳೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ, ವಿಶ್ವ ಸಾಧಕರಲ್ಲಿ ಮುಂಚೂಣಿಯಲ್ಲಿ ನಾರಿಯರೆ ಮುಂದಿದ್ದಾರೆ, ಅವರಲ್ಲಿ ಮೇರಿ ಕ್ಯೂರಿ, ಕಲ್ಪನಾ ಚಾವ್ಲ್‌, ದ್ರೌಪದಿ ಮುರ್ಮು, ಮದರ ತೆರೇಸಾ, ಇಂದಿರಾ ಗಾಂಧಿ, ಕಮಲಾ ಹ್ಯಾರಿಸ, ಮಾರ್ಗರೆಟ್ ಥ್ಯಾಚರ, ರಾಣಿ ಎಲೆಜೇಬತ್‌. ಅಹಲ್ಯಭಾಯಿ ಹೊಲ್ಕರ, ಕಿತ್ತೂರು ಚನ್ನಮ್ಮ, ಲತಾ ಮಂಗೆಸ್ಕರ, ಇನ್ನು ಅನೇಕ ಸಾಧಕರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. 

ಮಹಿಳೆಯ ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಶಕ್ತಿ ಇದೆ, ಈ ಶಕ್ತಿ ಪ್ರಕೃತಿದತ್ತವಾಗಿದ್ದರೆ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ, ಬಾಲ್ಯ ವಿವಾಹ, ಅನಕ್ಷರತೆ, ಮೂಡನಂಬಿಕೆ, ಕೀಳರಮೆ ಮನೋಭಾವ, ಈ ಎಲ್ಲಾ ಲಕ್ಷಣಗಳನ್ನು ಕಿತ್ತೆಸೆದು ಮಹಿಳೆ ಸಾಧಕಿಯಾಗಬೇಕು. ಶಿಕ್ಷಣದಿಂದ ಮಾತ್ರ ಮಹಿಳೆಯ ಸವಾಂರ್ಗಿನ ಪ್ರಗತಿ ಸಾಧ್ಯ. ಒಂದು ಮನೆಗೆ ಹೆಣ್ಣು ವರವಾಗಬಹುದು ಮತ್ತು ಶಾಪ ವಾಗಬಹುದು, ಮನೆಯ ನಾಲ್ಕು ಗೋಡೆಯ ಒಳಗೆ ಇರದೇ ಹೊರ ಬಂದು ನಾನು ಜಗತ್ತನ್ನು ಮುನ್ನೆಡೆಸಬಲ್ಲ ಎಂದು ಸಾಧಿಸಿ ತೋರಿಸಬೇಕು. 

ಮಕ್ಕಳಿಗೆ ಸಂಸ್ಕಾರ ಕೊಡಿ ಮೊಬೈಲ ಬಳಕೆ ಅತಿಯಾಗಿದೆ. ಅದು ಯುವ ಶಕ್ತಿಯನ್ನು ಹಾಳು ಮಾಡುತ್ತಿದೆ. ಇದರಿಂದ ಜಗತ್ತಿನ ಯುವ ಜನ ಹಾದಿ ತಪ್ಪುತ್ತಿದ್ದಾರೆ. ಮಕ್ಕಳ ಕೈಗೆ ಪುಸ್ತಕ ಕೊಡಿ ಅವರ ಮಸ್ತಕ ಸುದ್ದಿಯಾಗುತ್ತದೆ. ಅವಶ್ಯಕತೆ ಇದಷ್ಟು ಮೊಬೈಲ್ ಬಳಸಿ ಮಕ್ಕಳಿಗೆ ಕೊಡುವುದನ್ನು ಕಡಿಮೆ ಮಾಡಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಬಟ್ಟೆ ಚೀಲ ಬಳಸಿ ಪರಿಸರ ರಕ್ಷಿಸಿ ಎಂದರು. 

ಈ ಕಾರ್ಯಕ್ರಮದಲ್ಲಿ ಬನಹಟ್ಟಿಯ ಹೇಮಾ ಪಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಭಾರತ ವಿಶ್ವಗುರು ಆಗುತ್ತಿದೆ ಈ ವಿಶ್ವ ಗುರುವಿನ ಸ್ಥಾನ ನೀಡುವುದರಲ್ಲಿ ಭಾರತದಲ್ಲಿರುವ ಪ್ರತಿಯೊಬ್ಬ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಸರ್ವರ ಸಯೋಗದಿಂದ್ ಸುಖಮಯ ಸಂಸಾರ ಎಂಬ ನಾಣ್ಣುಡಿಯಂತೆ ಅನೇಕ ಮಹಾನ್ ಪುರುಷರಿಗೆ ಜನ್ಮವಿತ್ತ ಸಾಧಕ ಮಹಿಳೆಯರ ತ್ಯಾಗ ಮತ್ತು ಶ್ರಮ ಸ್ಮರಿಸುವ ಸಂದರ್ಭವೇ ಈ ಮಹಿಳಾ ದಿನಾಚರಣೆ, ಅರ್ಥ  

ಈ ಕಾರ್ಯಕ್ರಮದಲ್ಲಿ ಸವಿತಾ ಮಣ್ಣಯ್ಯನವರಮಠ ದಿವ್ಯಾ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು. ನೀಲವ್ವ ಖೋತ, ಕಸ್ತೂರಿ ಖೋತ, ಸವಿತಾ ಕಳಶೆಟ್ಟಿ, ಸುಶೀಲಾ ಖೋತ, ಮಂಜುಳಾ ಖೋತ, ವನಿತಾ ಮರೆಗುದ್ದಿ, ಶೀಲಾ ಹುಲ್ಲೂರ್, ಕಸ್ತೂರಿ ಕೋಲಾರ,ಶೀತಲ್ ಆರಿ, ಲತಾ ಆರಿ,ಶಿವಲೀಲಾ ತಳವಾರ್, ಸೋನವ್ವ ದಿನ್ನಮನಿ, ಮಹಾನಂದ ಕಿಶೋರ್, ಶಕುಂತಲಾ ಖೋತ ರುಕ್ಕಮ್ಮ ಬಂಡಿ, ನಾಗರತ್ನ ಬಡಿಗೇರ್‌.ಕಲ್ಲಪ್ಪ ಚಿಂಚಲಿ, ಮಹೇಶ್ ಇಟಕನ್ನವರ, ಜಿ ಎಸ್ ಗೊಂಬಿ ಮಹಾದೇವ್ ಮರೆಗುದ್ದಿ, ಮಹದೇವ್ ಕದ್ದಿಮನಿ, ಸುಹಾಸಿನಿ ಕದ್ದಿಮನಿ ಸುಕ್ಲಾ ಜಾಡಗೌಡರ್‌.ಅಶ್ವಿನಿ ತೇಲಿ, ಶೈಲಾ ನ್ಯಾಮಗೌಡ, ಮಂಜುಳಾ ಕೋಲಾರ ನೀಲಾಂಬಿಕಾ ಹುನಶ್ಯಾಳ ಸೇರಿ ಹಲವರು ಮಹಿಳೆಯರು ಭಾಗವಹಿಸಿದರು.