ಪ್ರಸಕ್ತ ವರ್ಷದ ಮಹಾ ಮಳೆಗೆ 993 ಜನ ಬಲಿ

ನವದೆಹಲಿ 27: ಪ್ರಸಕ್ತ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಮಹಾಮಳೆಗೆ ದೇಶದಲ್ಲಿ 993 ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರು ನಿರ್ವಸತಿಗರಾಗಿದ್ದಾರೆ.

70 ಲಕ್ಷಕ್ಕೂ ಹೆಚ್ಚು ಜನರಿಗೆ ಮಹಾಮಳೆಯಿಂದ ಮನೆ, ಮಠ , ವಸತಿ ಕಳೆದುಕೊಂಡಿದ್ದು, 17 ಲಕ್ಷ ಮಂದಿ ಪುನರ್ವಸತಿ ಕೇಂದ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ.

ದೇಶದಲ್ಲೇ ಅತಿಹೆಚ್ಚು ಮಳೆಗೆ ಹಾನಿಗೊಳಗಾದ ರಾಜ್ಯಗಳ ಪೈಕಿ ದೇವರನಾಡು ಕೇರಳ ಮೊದಲ ಸ್ಥಾನದಲ್ಲಿದ್ದರೆ, ಕನರ್ಾಟಕ 4ನೇ ಸ್ಥಾನದಲ್ಲಿದೆ.

ಕೇರಳದಲ್ಲಿ ಪ್ರಸಕ್ತ ವರ್ಷ ಮಳೆಗೆ 387 ಮಂದಿ ಸಾವನ್ನಪ್ಪಿದ್ದು , ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದಾರೆ. ಕೇರಳ ನಂತರ ವರುಣಾನ ಆರ್ಭಟಕ್ಕೆ ದೇಶದ  ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 195, ಕನರ್ಾಟಕ 161 ಹಾಗೂ ಅಸ್ಸಾಂನಲ್ಲಿ 46 ಮಂದಿ ಸೇರಿದಂತೆ ಈ ಬಾರಿ ಒಟ್ಟು 993 ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ಭಾರತೀಯ ಹವಾಮಾನ ಇಲಾಖೆ  ತಿಳಿಸಿದೆ.

ಮಹಾಮಳೆಗೆ ಕೇರಳದ 14 ಜಿಲ್ಲೆಗಳಲ್ಲಿ , ಉತ್ತರ ಪ್ರದೇಶ 16, ಪಶ್ಚಿಮ ಬಂಗಾಳ 23, ಕನರ್ಾಟಕ 11 ಹಾಗೂ ಅಸ್ಸಾಂನ 23 ಜಿಲ್ಲೆಗಳಲ್ಲಿ ಅತಿವೃಷ್ಟಿ  ಸಂಭವಿಸಿದೆ. 

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೇರಳದಲ್ಲಿ 54 ಲಕ್ಷ ಮಂದಿ ಸಂತ್ರಸ್ತರಾಗಿದ್ದು, 14.52 ಲಕ್ಷ ಮಂದಿ ಪುನರ್ವಸತಿ ಕೇಂದ್ರಗಳಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಅಸ್ಸಾಂನಲ್ಲಿ 11.46 ಲಕ್ಷ  ಮಂದಿ ಮಳೆಯಿಂದ ಸಂಕಷ್ಟಕ್ಕೀಡಿದ್ದು, 2.45 ಲಕ್ಷ ಮಂದಿ ಶಿಬಿರಗಳಲ್ಲಿದ್ದಾರೆ. 

ಪ್ರತಿವರ್ಷ ದೇಶದ ವಿವಿಧೆಡೆ ವರುಣನ ಆರ್ಭಟಕ್ಕೆ 1600 ಮಂದಿ ಸಾವನ್ನಪ್ಪಿದ್ದರೆ  ಲಕ್ಷಾಂತರ ಮಂದಿ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. 

ಸರಿಸುಮಾರು ವಾಷರ್ಿಕ 5000 ಕೋಟಿಗೂ ಹೆಚ್ಚು ಮಳೆಗೆ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 2017ರಲ್ಲಿ ಮಹಾಮಳೆಗೆ ದೇಶದ ವಿವಿಧೆಡೆ 1200 ಮಂದಿ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದರು. 

ಕಳೆದ ವರ್ಷ ಬಿಹಾರದಲ್ಲಿ 514, ಪಶ್ಚಿಮ ಬಂಗಾಳದಲ್ಲಿ 261, ಅಸ್ಸಾಂ 150, ಮಹಾರಾಷ್ಟ್ರ 124 ಹಾಗೂ ಉತ್ತರ ಪ್ರದೇಶದಲ್ಲಿ 121 ಮಂದಿ ಮೃತಪಟ್ಟಿದ್ದರು. ಒಟ್ಟು 34 ಲಕ್ಷ ಮಂದಿ ನಿರ್ವಸತಿಗರಾಗಿದ್ದರು.

2016ರಲ್ಲಿ ಪ್ರವಾಹಕ್ಕೆ ಸಿಲುಕಿ 936 ಮಂದಿ ಸಾವನ್ನಪ್ಪಿದ್ದರು. ಅದೇ ವರ್ಷ ಬಿಹಾರದಲ್ಲಿ 254, ಮಧ್ಯಪ್ರದೇಶ 184, ಮಹಾರಾಷ್ಟ್ರ 145 ಹಾಗೂ ಉತ್ತರಖಂಡ್ನಲ್ಲಿ 102 ಮಂದಿ ಕಣ್ಮರೆಯಾಗಿದ್ದರು. 

ಮುಂಗಾರು ಆರಂಭವಾಗುತ್ತಿದ್ದಂತೆ ಕರಾವಳಿ ತೀರಾ ಪ್ರದೇಶ ಮತ್ತಿತರ ಕಡೆ ಮುಂಜಾಗ್ರತಾ ಕ್ರಮವಾಗಿ ತುತರ್ು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಕರ್ಾರ ಎಲ್ಲಾ ರಾಜ್ಯಗಳಿಗೆ ಸೂಚನೆ ಕೊಡುತ್ತಲೇ ಬಂದಿದೆ. ಆದರೂ ಸಮನ್ವಯದ ಕೊರತೆಯಿಂದಾಗಿ ಎಚ್ಚರಿಕೆ ವಹಿಸದೆ ಅವಘಡಗಳು ಸಂಭವಿಸುತ್ತಲೇ ಇದೆ.