ಸಂತೋಷ ರಾಯ್ಕರ್
ಮುಂಡಗೋಡ : ಪಟ್ಟಣದ ಬಸ್ ನಿಲ್ದಾಣ ಹೈ ಟೇಕ್ ಆಗಬೇಕೆಂದು ಮುಂಡಗೋಡ ಜನರ ಬಹಳ ದಿನಗಳ ಕನಸಿಗೆ ಸರಕಾರ ಹಸಿರು ನಿಶಾನೆ ತೋರಿಸಿದೆ. ಗುತ್ತಿಗೆದಾರರು ಬಸ್ಸ್ಟ್ಯಾಂಡ್ ಪಾಶ್ರ್ವದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಕನಸು ನನಸು ಆಗಲು ಇನ್ನೇನು ಕೆಲವೇ ದಿನಗಳು ಎಂದು ಭಾವಿಸಲಾಗಿತ್ತು. ಆದರೆ ಗುತ್ತಿಗೆದಾರರು ದೊಡ್ಡದೊಂದು ಹೊಂಡ ಅಗೆದು ಹಾಗೆ ಬಿಟ್ಟಿದ್ದರಿಂದ ಪ್ರಯಾಣಿಕರಿಗೆ ಇದು ಮೃತ್ಯುಕೂಪವಾದಂತಾಗಿದೆ.
ಮುಂಡಗೋಡ ಹಾಗೂ ಯಲ್ಲಾಪುರ ಬಸ್ ಸ್ಟ್ಯಾಂಡ್ ಕಾಮಗಾರಿ ಗುತ್ತಿಗೆಯನ್ನು ಒಬ್ಬರೆ ಪಡೆದಿದ್ದಾರೆ.ಮುಂಡಗೋಡನಲ್ಲಿ ಸಚಿವರು ಕಾಮಗಾರಿ ಉದ್ಘಾಟನೆ ಮಾಡಿದ್ದ ತಡ ಗುತ್ತಿಗೆದಾರ ಬಸ್ ಸ್ಟ್ಯಾಂಡ್ ಪಾಶ್ರ್ವಭಾಗದಲ್ಲಿ ದೊಡ್ಡದೊಂದು ಹೊಂಡವನ್ನು ಅಗೆದು ಯಾವದೇ ಕಾಮಗಾರಿ ಮುಂದುವರೆಸದೇ ಕೈತೊಳೆದು ಕುಳಿತಿರುವುದರಿಂದ ಮುಂಡಗೋಡ ಪ್ರಯಾಣಿಕರಿಗೆ ಇದು ಯಮಸದೃಶ್ಯದಂತೆ ಕಂಡು ಬರುತ್ತಿದೆ. ಹೊಂಡದ ಸುತ್ತಲು ಕಳೆಬೆಳೆದು ದೊಡ್ಡಗಾತ್ರದಲ್ಲಿ ನಿಂತಿದೆ. ಈಗ ಮಳೆಗಾಲ ಪ್ರಾರಂಭ ವಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿದ್ದರಿಂದ ವಿದ್ಯಾಥರ್ಿಗಳಿಗೆ, ಪ್ರಯಾಣಿಕರಿಗೆ ಹಾಗೂ ಅಲ್ಲಿಂದ ಸಂಚರಿಸುವ ಸಾರ್ವಜನಿಕರು ಈ ಹೊಂಡ ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾತ್ರಿಹೊತ್ತಿನಲ್ಲಿ ಈ ಬಸ್ಸ್ಟ್ಯಾಂಡ್ ಕುರಿತು ಪರಿಚಯ ಇಲ್ಲದ ಪ್ರಯಾಣಿಕರಾಗಲಿ ಅಥವಾ ಸಾರ್ವಜನಿಕರಾಗಲಿ ಮಲ-ಮೂತ್ರವಿಸರ್ಜನೆಗೆ ತೆರಳಿದರೆ ಅವರಿಗೆ ಅವಘಡ ಕಟ್ಟಿಟ್ಟ ಬುತ್ತಿ ಎಂದು ಪ್ರಯಾಣಿಕರ ಆತಂಕವಾಗಿದೆ.
ಅಜ್ಞಾನದ ಕೆಲ ಜನರು ಇದು ಬಸ್ಸ್ಟ್ಯಾಂಡ ನಿಮರ್ಾಣಮಾಡಲು "ಹಾರ" ಕೇಳಿದೆ ಎಂತೆ ಅದಕ್ಕಾಗಿ ಈ ರೀತಿ ನಿಮರ್ಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಹೊಂಡದಿಂದ ಜನರ ಪ್ರಾಣ ಹಾಗೂ ಪ್ರಾಣಿ ಪಕ್ಷೀಗಳ ಪ್ರಾಣಕ್ಕೆ ಸಂಚಕಾರ ಬಂದಿರುವುದಂತು ಸತ್ಯ.
ಮೊದಲೇ ಮುಂಡಗೋಡ ಬಸ್ ಸ್ಟ್ಯಾಂಡ್ ಅಂದರೆ ಅಸ್ವಚ್ಛತೆ ಅಗರ ಈಗ ಹೊಂಡನಿಮರ್ಾಣದಿಂದ ಮತ್ತಷ್ಟು ಆ ಹೆಸರಿಗೆ ಮೆರಗು ಬಂದಂತಾಗಿದೆ. ಹೊಂಡದಲ್ಲಿ ತಾಜ್ಯವಸ್ತುಗಳು ಬಿದ್ದು ವಿವಿಧ ನಮೂನೆ ಹುಳ ಹುಪ್ಪಡಿಗಳ ಸಾಮ್ರಾಜ್ಯವಾಗಿದೆ. ಸೊಳ್ಳೆಗಳಿಗಂತು ಸ್ವರ್ಗದಂತಾಗಿದೆ. ಸೊಳ್ಳೆಗಳ ಕಾಟದಿಂದ ಬಸ್ಸ್ಟ್ಯಾಂಡದಲ್ಲಿನಿಲ್ಲಲು ಆಗದ ಪರಿಸ್ಥಿತಿ ನಿಮರ್ಾಣವಾಗಿದೆ.ರೋಗ ಹರಡುವ ಭೀತಿ ಸಾರ್ವಜನಿಕರಿಗೆ ಕಾಡುತ್ತಿದೆ.ಯಾವದೇ ಅವಘಡ ಸಂಭವಿಸುವ ಮುನ್ನ ಸಂಬಂದಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಕಾಳಜಿವಹಿಸುವುದು ಅತ್ಯವಶ್ಯವಾಗಿದೆ.
ಬಸ್ ನಿಲ್ದಾಣ ಸೊಳ್ಳೆಗಳ ಸಾಮ್ರಾಜ್ಯವಾಗಿ ಪ್ರಯಾಣಿಕರಿಗೆ ನರಕಯಾತನೆ ತಂದೊಡ್ಡಿದೆ.ಊರಿನ ಕೇಂದ್ರಸ್ಥಳವಾದ ಬಸ್ ನಿಲ್ದಾಣದಲ್ಲಿಯೇ ಇಂತಹ ಅವ್ಯವಸ್ಥ್ಯೆ ನಮ್ಮ ಮುಂಡಗೋಡಕ್ಕೆ ಕಪ್ಪುಚುಕ್ಕೆಯಾದಂತಾಗಿದೆ.ಅವಘಡ ಸಂಭವಿಸುವ ಮುನ್ನ ಸಂಬಂದಪಟ್ಟ ಅಧಿಕಾರಿಗಳು, ಹೊಂಡ ಮುಚ್ಚುವ ಕ್ರಮಕ್ಕೆ ಮುಂದಾಗಬೇಕು-ಶ್ರೀಧರ ಉಪ್ಪಾರ ಯುವ ಬ್ರೀಗೇಡ್ ತಾಲೂಕಾ
ಸಂಚಾಲಕ.