ಕಾಗವಾಡ 27: ಉಗಾರ ಬುದ್ರುಕ ಗ್ರಾಮದ ನೇಮಿನಾಥ ಜೈನ್ ಮಂದಿರದಲ್ಲಿ ಸೋಳಾಕಾರ ಹಾಗೂ ದಶಲಕ್ಷಣ ಪೂಜಾ ಕಾರ್ಯಕ್ರಮದ ಮುಕ್ತಾಯ ಸಮಾರಂಭ ಅಂಗವಾಗಿ ವಿಶ್ವ ಶಾಂತಿಗಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ಉಗಾರ ಬುದ್ರುಕ ಗ್ರಾಮದ ನೇಮಿನಾಥ ದಿಗಂಬರ್ ಜೈನ್ ಮಂದಿರದಲ್ಲಿ ಪ್ರತಿಷ್ಠಾಚಾರ್ಯ ಡಾ. ರಾಜೇಂದ್ರ ಸಾಂಗಾವೆ, ಶಾಂತಿನಾಥ ಉಪಾಧ್ಯೆ, ಭರತ ಉಪಾಧ್ಯೆ ಇವರ ಸಾನಿಧ್ಯದಲ್ಲಿ ಕಳೆದ 16 ದಿನಗಳಿಂದ ಜರುಗುತ್ತಿರುವ ಲೋಪಿ ಕಾರ್ಯಕ್ರಮ ಮತ್ತು 10 ದಿನಗಳಿಂದ ಜರುಗುತ್ತಿರುವ ದಶಲಕ್ಷಣ ಪರ್ವದ ಲೋಪಿ ಕಾರ್ಯಕ್ರಮದಲ್ಲಿ 300 ಶ್ರಾವಕ-ಶ್ರಾವಿಕೆಯರು ಭಾಗವಹಿಸಿದರು.
ಬುಧವಾರ ಬೆಳಿಗ್ಗೆ ನೇಮಿನಾಥರ ಪಲ್ಲಕ್ಕಿ ಉತ್ಸವ ಜರುಗಿತು. ಉಗಾರದ ಜೈನ್ ಸಮಾಜದ ಮುಖಂಡರಾದ ಶೀತಲ ಪಾಟೀಲ, ಬಾಬು ಅಕಿವಾಟೆ ಇವರ ನೇತೃತ್ವದಲ್ಲಿ ಆಚಾರ್ಯ ಶಾಂತಿಸಾಗರ ಮಹಾರಾಜರ ಪ್ರತಿಮೆ ಮೆರವಣಿಗೆ ನಡೆಯಿತು. ಶೃಂಗಾರಿಸಿದ ಪಲ್ಲಕ್ಕಿಯಲ್ಲಿ ನೂರಾರು ಜಲಕುಂಭ ಹೊತ್ತ ಶ್ರಾವಿಕೆಯರು ಭಾಗವಹಿಸಿದರು. ಉಗಾರದ ಪ್ರಮುಖ ಬೀದಿಗಳಿಂದ ಮಹಾವೀರ ವೃತ್ತದವರೆಗೆ ಸಂಚರಿಸಿ, ಮರಳಿ ಮಂದಿರಕ್ಕೆ ಬಂದು ಧಾಮರ್ಿಕ ಕಾರ್ಯಕ್ರಮಗಳು, ನೇಮಿನಾಥ ಭಗವಾನ್ರಿಗೆ ಪಂಚಾಮೃತ ಅಭಿಷೇಕ, ಜಲಾಭಿಷೇಕ ನಡೆಯಿತು.
ಭಗವಾನ್ ನೇಮಿನಾಥ ಮಂದಿರದ ಮತ್ತು ಜೈನ್ ಸಮಾಜ ಸಂಘದ ಆಧ್ಯಕ್ಷ ಬಾಬು ಅಕಿವಾಟೆ, ಭೂಪಾಲ್ ಹೊಸುರೆ, ಆನಂದ ಖೋತ, ಭರತ ಕುಸನಾಳೆ, ಆನಂದ ಸದಲಗೆ, ವಜ್ರಕುಮಾರ ಮಗದುಮ್ಮ, ರಾಜೇಂದ್ರ ಚಿಕ್ಕೂಳ, ಅಣ್ಣಾಸಾಹೇಬ ನಂದಗಾಂವೆ, ದಾದು ಚೌಗುಲೆ, ಮಹಾವೀರ ಮಗದುಮ್ಮ ಸೇರಿದಂತೆ ಶ್ರಾವಕ-ಶ್ರಾವಿಕೆಯರು ಮೆರವಣಿಗೆ ಯಶಸ್ವಿಗೊಳಿಸಿದರು.