ನಮ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬವು ಹೊಸ ವರ್ಷದ ಆರಂಭದ ಸಂಕೇತವಾಗಿದೆ : ಜಗದೀಶ ವಿ
In our culture, the Ugadi festival marks the beginning of a new year: Jagadish V.
ರಾಣೇಬೆನ್ನೂರ 15: ಯುಗಾದಿ : ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ನವಚೈತನ್ಯದ ಸಂಕೇತವಿಶ್ವಾವಸು ಸಂವತ್ಸರದ ನಂತರ ಪರಾಭವ ಸಂವತ್ಸರ ಆಗಮನವಾಗುತ್ತಿದೆ . ನಮ್ಮ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬವು ಹೊಸ ವರ್ಷದ ಆರಂಭದ ಸಂಕೇತವಾಗಿದೆ. ‘ಯುಗ’ ಎಂದರೆ ಕಾಲ, ‘ಆದಿ’ ಎಂದರೆ ಆರಂಭ. ಆದ್ದರಿಂದ ಯುಗಾದಿ ಎಂದರೆ ಹೊಸ ಕಾಲದ ಪ್ರಾರಂಭ. ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಆಚರಿಸುವ ಈ ಹಬ್ಬವು ಪ್ರಕೃತಿಯಲ್ಲೂ, ಮಾನವನ ಬದುಕಲ್ಲೂ ಹೊಸತನವನ್ನು ತರುತ್ತದೆ.ಯುಗಾದಿ ಹಬ್ಬದ ಮಹತ್ವವು ಕೇವಲ ಆಚರಣೆಯಲ್ಲಷ್ಟೇ ಅಲ್ಲ, ಕನ್ನಡ ಸಾಹಿತ್ಯದಲ್ಲಿಯೂ ಪ್ರಾಚೀನ ಕಾಲದಿಂದಲೇ ವ್ಯಕ್ತವಾಗಿದೆ.
ವಿಶೇಷವಾಗಿ ಹಳೆಗನ್ನಡ ಸಾಹಿತ್ಯದಲ್ಲಿ ವಸಂತ ಋತು, ಚೈತ್ರ ಮಾಸ ಮತ್ತು ಹೊಸ ವರ್ಷದ ಆರಂಭದ ಉಲ್ಲೇಖಗಳು ಕಾಣುತ್ತವೆ. ಕನ್ನಡದ ಆದಿಕವಿ -ಪಂಪ- ಅವರ ಕಾವ್ಯಗಳಲ್ಲಿ ವಸಂತ ಋತುವಿನ ಸೊಬಗು, ಪ್ರಕೃತಿಯ ನವಚೈತನ್ಯವನ್ನು ವರ್ಣಿಸುವ ಸಂದರ್ಭಗಳಲ್ಲಿ ಹೊಸ ವರ್ಷದ ಸಂಭ್ರಮದ ಸಂಕೇತಗಳು ವ್ಯಕ್ತವಾಗುತ್ತವೆ. ವಸಂತದ ಆಗಮನವನ್ನು ಅವರು ಜೀವನದ ಪುನರುಜ್ಜೀವನದ ರೂಪದಲ್ಲಿ ಚಿತ್ರಿಸಿದ್ದಾರೆ.ಹಾಗೆಯೇ ಮಹಾಕವಿ ಅಭಿನವ ಕವಿಚಕ್ರವರ್ತಿ ರನ್ನ ಅವರ ಕಾವ್ಯಗಳಲ್ಲಿ ಋತುಗಳ ವೈಭವದ ವರ್ಣನೆ ಕಾಣುತ್ತದೆ. ವಸಂತ ಋತುವಿನ ಸುಂದರತೆಯನ್ನು ಚಿತ್ರಿಸುವಾಗ ಪ್ರಕೃತಿಯಲ್ಲಿನ ಹೊಸ ಹಸಿರು, ಹೂವಿನ ಸೊಬಗು ಮತ್ತು ಜನರ ಉಲ್ಲಾಸವನ್ನು ಅವರು ಕಾವ್ಯಮಯವಾಗಿ ನಿರೂಪಿಸಿದ್ದಾರೆ.
ಈ ವಸಂತದ ವೈಭವವೇ ಯುಗಾದಿಯ ಸಂಭ್ರಮಕ್ಕೆ ಹಿನ್ನೆಲೆಯಾಗಿದೆ.ವಚನ ಸಾಹಿತ್ಯದಲ್ಲಿಯೂ ಹೊಸತನದ ತತ್ತ್ವವನ್ನು ಕಾಣಬಹುದು. ಶರಣರ ವಚನಗಳಲ್ಲಿ ಜೀವನದಲ್ಲಿ ಸದಾ ಹೊಸ ಅರಿವು ಮತ್ತು ಆತ್ಮಜ್ಞಾನ ಮೂಡಬೇಕು ಎಂಬ ಸಂದೇಶ ವ್ಯಕ್ತವಾಗುತ್ತದೆ. ಶರಣರ ವಚನಗಳಲ್ಲಿ ಹೊಸ ಜೀವನದ ಮೌಲ್ಯಗಳನ್ನು ಅರಿಯುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಯುಗಾದಿಯ ಆತ್ಮಾರ್ಥವೂ ಇದೇ ಹಿ ಹಳೆಯದನ್ನು ಬಿಟ್ಟು ಹೊಸ ಅರಿವಿನೊಂದಿಗೆ ಬದುಕನ್ನು ಆರಂಭಿಸುವುದು.ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಯುಗಾದಿಯ ಸಂಭ್ರಮವನ್ನು ಕವಿಗಳು ಕಾವ್ಯಮಯವಾಗಿ ಚಿತ್ರಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಮತ್ತು ವರಕವಿ ದ.ರಾ. ಬೇಂದ್ರೆ ಅವರ ಕೃತಿಗಳಲ್ಲಿ ವಸಂತದ ಚೈತನ್ಯ, ಪ್ರಕೃತಿಯ ನವಸೌಂದರ್ಯ ಮತ್ತು ಹೊಸ ಆಶೆಯ ಭಾವನೆಗಳು ವ್ಯಕ್ತವಾಗುತ್ತವೆ.ಇದರ ಜೊತೆಗೆ ಜನಪದ ಸಾಹಿತ್ಯದಲ್ಲಿಯೂ “ಯುಗಾದಿ ಬಂದಿತು ಹಸಿರು ತಂದಿತು” ಎಂಬ ಸಾಲುಗಳು ಹೊಸ ವರ್ಷದ ಸಂತಸವನ್ನು ವ್ಯಕ್ತಪಡಿಸುತ್ತವೆ. ಯುಗಾದಿ ಪಚಡಿಯ ಆರು ರುಚಿಗಳು ಜೀವನದ ಸೂಚಿಸುವಂತೆ, ಕನ್ನಡ ಸಾಹಿತ್ಯವೂ ಬದುಕಿನ ವಿವಿಧ ಅನುಭವಗಳನ್ನು ಪ್ರತಿಬಿಂಬಿಸುತ್ತದೆ.ಕಾಳಿದಾಸನ ಮೇಘದೂತ ಹಾಗೂ ಋತುಸಂಹಾರ ಕೃತಿಗಳಲ್ಲಿಯೂ ಕೂಡ ಚೈತ್ರ ಮಾಸದ ಆರಂಭದ ಯುಗಾದಿಯ ವರ್ಣನೆಯನ್ನು ಕೂಡ ಕಾಣಬಹುದು
ಈ ದಿನ ಅಭ್ಯಂಗಸ್ನಾನ ಮಾಡಿ ಮನೆ ಬಾಗಿಲಿಗೆ ತೋರಣವನ್ನು ಕಟ್ಟುವರು.ಸಂವತ್ಸರ ಪೂಜೆಯನ್ನು ಮಾಡಿ ಸೂರ್ಯೋದಯದ ಸಮಯದಲ್ಲಿ ಬ್ರಹ್ಮಧ್ವಜವನ್ನು ಏರಿಸಿ, ಅದಕ್ಕೆ ಪೂಜೆ ಮತ್ತು ಪ್ರಾರ್ಥನೆಯನ್ನು ಸಲ್ಲಿಸುವರು. ಕ್ಷಮತೆಗನುಸಾರ ಸತ್ಪಾತ್ರೆ ದಾನ ಮಾಡುವುದು ವಾಡಿಕೆ. ಕಾಲಕೋಶಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವು ಪಂಚಾಂಗಗಳು. ಪಂಚಾಂಗ ಶ್ರವಣ ಅಂದರೆ ವರ್ಷಫಲದ ಶ್ರವಣವನ್ನು ಮಾಡುವರು. ತಿಥಿಯಿಂದ ಐಶ್ವರ್ಯ, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ರೋಗ ಪರಿಹಾರ, ಕರಣದಿಂದ ಕಾರ್ಯಸಿದ್ಧಿ, ಮುಂತಾದ ಶುಭಫಲಗಳು ಪಂಚಾಂಗದಿಂದ ಲಭಿಸುತ್ತವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 