ಪರಿಸರ ಬೆಳೆಸುವ ಕಾರ್ಯಕ್ಕೆ ಮುಂದಾಗಿ: ಕುಲಾಲ್

ಲೋಕದರ್ಶನವರದಿ

ರಾಣೇಬೆನ್ನೂರು-ಜೂ.8: ತಾಲೂಕಿನ ಉದಗಟ್ಟಿ ಗ್ರಾಮದ ವಿದ್ಯಾಶಂಕರ ಮಠದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಧಿ ಯೋಜನೆ ವತಿಯಿಂದ ಸಸಿಗಳನ್ನು ನೆಡಲಾಯಿತು.

ಜಿಲ್ಲಾ ನಿದರ್ೇಶಕ ಮಹಾಬಲ ಕುಲಾಲ ಮಾತನಾಡಿ, ಪ್ರಸ್ತುತ ನಾವೆಲ್ಲ ಇಂದು ಉತ್ತಮವಾದ ಗಾಳಿ ಮತ್ತು ವಾತಾವರಣ ಸಮರ್ಪಕವಾಗಿ ಇರುವುದಕ್ಕೆ ಹಿಂದಿನ ತಲೆಮಾರಿನವರು ನಮಗೆ ಕೊಡುಗೆಯಾಗಿ ನೀಡಿದ ಗಿಡ ಮರಗಳೇ ಕಾರಣ, ನಾವೂ ಕೂಡ ಮುಂದಿನ ಪೀಳಿಗೆಯವರಿಗೆ ಉತ್ತಮ ಪರಿಸರಕ್ಕಾಗಿ ಏನಾದರೂ ಕೊಡುಗೆ ನೀಡಲೇ ಬೇಕು. 

 ಇಲ್ಲವೆಂದರೆ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾದ್ಯವಿಲ್ಲ ಎಂದರು.

 ಎಲ್ಲಾ ಮಕ್ಕಳಿಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸಿ ಮನೆಯಲ್ಲಿ ಒಬ್ಬರಿಗೆ ಒಂದರಂತೆ ಮರ ಗಿಡಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋಣ. ಇಂದು ಮರ ಗಿಡಗಳು ಕಣ್ಮರೆಯಾಗಿವೆ. ಪುಸ್ತಕದಲ್ಲಿ ನೋಡಿ ಪರಿಚಯ ಮಾಡಿಕೊಳ್ಳುವ ಕಾಲ ಬಂದಾಗಿದೆ ಎಂದರು.

  ಯೋಜನಾಧಿಕಾರಿ ಸತೀಶ ಶೇಟ್, ಸೇವಾ ಸಹಾಕಾರಿ ಸಂಘದ ಉಪಾಧ್ಯಕ್ಷ ಕರಬಸಪ್ಪ  ಬಾಕರ್ಿ, ಶಂಕರಪ್ಪ ಪೂಜಾರ, ಒಕ್ಕೂಟದ ಅಧ್ಯಕ್ಷೆ ಲಕ್ಷ್ಮವ್ವ ಕಾಯಕದ, ಗಂಗಪ್ಪ, ಕರಿಯಪ್ಪ, ವಲಯದ ಮೇಲ್ವಿಚಾರಕ ವಿಶ್ವನಾಥ, ಸೇವಾ ಪ್ರತಿನಿಧಿ ನಾಗರಾಜ, ಪ್ರಗತಿ ಭಂಧು ಸ್ವಸಹಾಯ ಸಂಘದ ಸದಸ್ಯರು ಇದ್ದರು.