ಪ್ರಜಾಪ್ರಭುತ್ವ ಪಾಲನೆಯಲ್ಲಿ ಸಂವಿಧಾನವೇ ಪರಮ ಸತ್ಯ: ಹಿಮ್ಮಡಿ

ಲೋಕದರ್ಶನ ವರದಿ

ಬೆಳಗಾವಿ 01: ಸಂವಿಧಾನವೇ ಪರಮ ಸತ್ಯವಾಗಿರುವುದರಿಂದ ಇಂದಿನ ಯುವ ಜನತೆಗೆ ಭಾರತೀಯ ಸಂವಿಧಾನದ ಆಶಯಗಳನ್ನು ಮನಗಾಣಿಸಬೇಕಾದ ಜರೂರತೆಯಿದೆ ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 01 ರಂದು 0ಬಂಡಾಯ ಸಾಹಿತ್ಯ ಸಂಘಟನೆಯಿಂದ ಆಯೋಜಿಸಲಾಗಿದ್ದ, 'ಬಂಡಾಯ ವಿದ್ಯಾರ್ಥಿ ಕಾರ್ಯಾಗಾರದ ಸಮಾಲೋಚನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

  ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ 2020ರ ಜನೇವರಿ 25 ಮತ್ತು 26ರಂದು ಕಾರ್ಯಾಗಾರ ನಡೆಸಲು ತೀರ್ಮಾನಿಸಲಾಗಿದ್ದು ಜನಪರ ಚಳುವಳಿಗಳ ಜೊತೆ ಸಂವಿಧಾನ ಹಾಗೂ ಮೀಸಲಾತಿ ಕುರಿತು ಸಂವಾದ, ಚರ್ಚೆ  ನಡೆಸುವ ಆಶಯ ಹೊಂದಲಾಗಿದೆ ಎಂದು ವಿವರಿಸಿದರು. ಬಂಡಾಯ ಸಾಹಿತ್ಯ ಸಂಘಟನೆಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ವಿದ್ಯಾರ್ಥಿ  ಕಾರ್ಯಾಗಾರದ ಸಭೆ ನಡೆಸಲಾಯಿತು.

ಪ್ರಾಧ್ಯಾಪಕ ಎಚ್. ಬಿ. ಕೋಲ್ಕಾರ್, ಶಂಕರ ಬಾಗೇವಾಡಿ, ದೇಮಣ್ಣಾ ಸೊಗಲದ, ಅಡಿವೆಪ್ಪ ಇಟಗಿ, ಗಜಾನನ ಸಂಗೋಟೆ, ನೀಲಕಂಠ ಭೂಮನ್ನವರ, ಸುಮಿತ್ರಾ ಪೂಜೇರಿ, ಅಶೋಕ್ ಮುಧೋಳ, ಬಂಡಾಯ ಕವಿಗಳಾದ  ನದೀಮ್ ಸನದಿ, ಮೆಹಬೂಬ ಮುಲ್ತಾನಿ, ಸಿದ್ದರಾಮ ತಳವಾರ, ರಾಜು ಸನದಿ, ಪ್ರಕಾಶ್ ಜಾಲಹಳ್ಳಿ ವಿದ್ಯಾರ್ಥಿ ಮುಖಂಡರಾದ  ಆಕಾಶ ಬೇವಿನಕಟ್ಟಿ, ಸೈದು ಹಿರೇಮನಿ, ಸುನೀಲ ನಾಟೀಕಾರ್, ಹನುಮಂತ ಯರಗಟ್ಟಿ, ಗೋಪಿಕಾ ಹೇರಗೆ, ಶ್ರೀದೇವಿ ಕರೋಶಿ, ಸುನಿಲ್ ಮುಚ್ಚಂಡಿ, ಸಚಿನ್ ಮಾಳಗೆ, ಮಚ್ಚೀಂದ್ರ ಪಾಶ್ಚಾಪೂರೆ, ದೇವಪ್ಪ ರಾಯಚೂರು, ವಿಠ್ಠಲ ಹರಿಜನ ಮುಂತಾದವರು ಭಾಗವಹಿಸಿದ್ದರು. ಬಾಲಕೃಷ್ಣ ನಾಯಕ ಸ್ವಾಗತಿಸಿದರು, ಮಂಜುನಾಥ್ ಪಾಟೀಲ್ ವಂದಿಸಿದರು.