ಗದಗ 29: ಕೃಷಿ ಇಲಾಖೆ ಗದಗ ಮತ್ತು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ದಿ. 27ರಂದು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಜಲಾನಯನ) ಅಡಿ ಜಾನುವಾರುಗಳ ಚಿಕಿತ್ಸಾ ಶಿಬಿರ ಸಂಭಾಪುರದಲ್ಲಿ ನೆರವೇರಿತು.
ಪಿ.ಜಿ.ಉಂಡಿಗೇರಿ ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಬೆಟಗೇರಿ ಸ್ವಾಗತಿಸಿದರು. ಡಾ.ಎಸ್.ಎಸ್.ಹೊಸಮಠ, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಗದಗ ಇವರು ರೈತರನ್ನು ಉದ್ದೇಶಿಸಿ ರೈತರು ಈ ಶಿಬಿರದ ಪ್ರಯೋಜನೆ ಪಡೆಯಬೇಕು. ಎಲ್ಲ ರೈತರು ಜಾನುವಾರುಗಳನ್ನು ಸಾಕಿದರೆ ಹೊಲಕ್ಕೆ ಗೊಬ್ಬರ ಮತ್ತು ಹೈನುಗಾರಿಕೆಯಿಂದ ಆಥರ್ಿಕ ಪರಿಸ್ಥಿತಿ ಉತ್ತಮವಾಗಲು ಸಹಕಾರಿಯಾಗುವದು ಎಂದು ಮಾತಾನಾಡಿದರು.
ಡಾ. ಎನ್.ಎಚ್.ಬಂಡಿ, ಮಣ್ಣು ಆರೋಗ್ಯ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರು ರೈತರು ಶಗಣಿ ಗೊಬ್ಬರ, ಎರೆಹುಳು ಗೊಬ್ಬರವನ್ನು ತಮ್ಮ ಜಮೀನಿಗೆ ಹಾಕುವದರಿಂದ ಮಣ್ಣಿನ ಆರೋಗ್ಯ ಸುಧಾರಿಸುವುದಲ್ಲದೇ ಮಣ್ಣಿನಲ್ಲಿ ನೀರು ಹಿಡಿಟ್ಟುಕೊಳ್ಳುವ ಸಾಮಥ್ಯ ಹೆಚ್ಚಿಸುವದು. ಆದ್ದರಿಂದ ಪ್ರತಿಯೊಬ್ಬ ರೈತರು ಜಾನುವಾರುಗಳನ್ನು ಸಾಕುವದು ಅನಿವಾರ್ಯ ಆಗಿದೆ ಎಂದು ವಿವರಿಸಿದರು.
ಜಾನುವಾರುಗಳು ಕೃಷಿಯ ಅವಿಭಾಜ್ಯ ಅಂಗಗಳಾಗಿವೆ. ರೈತರು ಅದನ್ನು ಅರಿಯಬೇಕು. ಕೃಷಿ ಜೊತೆ ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ, ತೋಟಗಾರಿಕೆ, ಆಡು-ಕುರಿ ಸಾಕಾಣಿಕೆ, ರೇಷ್ಮೆ ಕೃಷಿ ಮುಂತಾದವುಗಳನ್ನು ಅಳವಡಿಸಿ ವರ್ಷ ಪೂರ್ತಿ ಆದಾಯ ಬರುವ ಹಾಗೆ ಯೋಜನೆ ರೂಪಿಸಿ ,ಅಳವಡಿಸಬೇಕು ಎಂದು ಹೇಮಾ ಮೊರಬ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಬೆಟಗೇರಿ ಇವರು ರೈತರಿಗೆ ಮನವರಿಕೆ ಮಾಡಿದರು.
ಡಾ.ಎ.ಕೆ.ಗಾಣಿಗೇರ, ಪಶು ವೈದ್ಯರು, ಲಕ್ಕುಂಡಿ ಇವರು ತಮ್ಮ ಆಸ್ಪತ್ರೆಯ ವೈದ್ಯಕೀಯ ಪರೀಕ್ಷಕರಾದ ಎಮ್.ಟಿ.ಬಂಡಿವಡ್ಡರ ಮತ್ತು ವಾಯ್.ಎ.ಭಾಗವಾನ ಇವರೊಂದಿಗೆ ಜಾನುವಾರಗಳಿಗೆ ಚಿಕಿತ್ಸೆ ನೀಡಿ, ಜಂತು ನಾಶಕ, ಜೀವ ರಕ್ಷಕ ಮತ್ತು ಶಕ್ತಿ ವರ್ದಕ ಔಷದಿಗಳನ್ನು 150 ಜಾನುವಾರುಗಳು ಮತ್ತು 800 ಕುರಿ, ಮೇಕೆಗಳನ್ನು ಸಾಕಿದ ರೈತರಿಗೆ ನೀಡಿದರು.
ಸಂಭಾಪುರ ಗ್ರಾಮದ ಅಧ್ಯಕ್ಷ ಮತ್ತು ಕಾರ್ಯದಶರ್ಿಗಳಾದ ನಾರಾಯನಗೌಡ ಪಾಟೀಲ, ಅಶೋಕ ಬಂಡಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಮತು ಸದಸ್ಯರಾದ ಕುಸುಮಾ ಬಂಡಿ ಮತ್ತು ದೇವಪ್ಪ ಕುರುಬರ, ಪ್ರಗತಿ ಪರ ರೈತರಾದ ರಾಯಪ್ಪ ನಾಗನೂರ, ಹನಮರಡ್ಡಿ ಬಿದರಳ್ಳಿ, ಬಸವರಡ್ಡಿ ಕುರಹಟ್ಟಿ, ವಾಸುದೇವ ನಾಗನೂರ, ಗೋವಿಂದಪ್ಪ ಪೂಜಾರ, ದೇವರಡ್ಡಿ ಕುರಹಟ್ಟಿ, ಗೋವಿಂದಪ್ಪ ನಾಗನೂರ, ದೇವನಗೌಡ ಕಿರೇಸೂರ, ಯಶವಂತರಡ್ಡಿ ನಾವಳ್ಳಿ ಮುಂತಾದವರು ಉಪಸ್ಥಿತರಿದ್ದರು.