ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ: ರಮೇಶ ಅಳಗುಂಡಿ

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ: ರಮೇಶ ಅಳಗುಂಡಿ In Indian tradition, the Guru is accorded the highest position: Ramesh Alagundi

ಲೋಕದರ್ಶನ ವರದಿ 

ಬೆಟಗೇರಿ 29: ಅಜ್ಞಾನದಿಂದ ಜ್ಞಾನದ ಕಡೆಗೆ ಹೊರಗಿನ ಅರಿವಿನಿಂದ ಅಂತರಂಗದ ಸತ್ಯದ ಕಡೆಗೆ ಶಿಷ್ಯನನ್ನು ಕರೆದೊಯ್ಯುವ ಮಾರ್ಗದರ್ಶಕ ಗುರುವಾಗಿದ್ದಾನೆ. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.29ರಂದು ನಡೆದ  ಗುರುಪೂರ್ಣಿಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಗುರುಪೂರ್ಣಿಮೆ ಕೇವಲ ಗುರುವನ್ನು ಪೂಜಿಸುವ ದಿನವಲ್ಲ, ನಮಗೆ ದೊರೆತ ಜ್ಞಾನಕ್ಕೆ ಕೃತಜ್ಞರಾಗುವ, ಗುರು ತೋರಿಸಿದ ಸತ್ಯದ ಹಾದಿಯಲ್ಲಿ ನಡೆಯುವ ಮತ್ತು ಪಡೆದ ಜ್ಞಾನವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಸಂಕಲ್ಪದ ದಿನವಾಗಿದೆ ಎಂದು ಗುರುವಿನ ಮಹತ್ವದ ಕುರಿತು ತಿಳಿಸಿದರು. 

ಸ್ಥಳೀಯ ಸರಕಾರಿ ಪ್ರೌಢ ಶಾಲೆಯಲ್ಲಿ ಗುರು ಪೂರ್ಣಿಮೆ  ಪ್ರಯುಕ್ತ ಶಾಲೆಯ ಎಲ್ಲಾ ಶಿಕ್ಷಕರಿಗೆ ಸಿಹಿ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಸದಾನಂದ ತೆರಣಿ, ಈರಣ್ಣ ಪಟಗುಂದಿ, ರಾಕೇಶ ನಡೋಣೆ, ವೈ.ಎಮ್‌.ವಗ್ಗರ, ಶುಭಾ ಬಿ.ಪ್ರಕಾಶ ಕುರಬೇಟ, ಭಾಗ್ಯ  ನಾಯಕ, ಮಲ್ಹಾರಿ ಪೋಳ, ಗಣಪತಿ ಭಾಗೋಜಿ, ಸೌಮ್ಯಾ  ಗಂಗಾ, ಮಂಜುನಾಥ ಸವತಿಕಾಯಿ, ಸಿರಾಜಅಹ್ಮದ ಜಿಡ್ಢಿಮನಿ, ನಾಗರಾಜ ಅರಳಿಮಟ್ಟಿ, ಬಸವರಾಜ ಭೋಸಲೆ, ಭೀಮಶಿ ನರಸನ್ನವರ, ದೀಪಾ ದಾಸಂಗಳಿ, ಕಿರಣ ಕಮತ, ಶಾಲೆಯ ಸಹಶಿಕ್ಷಕರು, ಅತಿಥಿ ಶಿಕ್ಷಕರು, ಬಿಸಿಯೂಟದ ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.