ದೆಹಲಿ, ಭವಿಷ್ಯ ಜವಾಬ್ದಾರಿ ಎರಡೂ ಮಹಿಳೆಯರ ಮೇಲಿದೆ: ಕೇಜ್ರಿವಾಲ್

ನವದೆಹಲಿ , ಫೆ 8,ಚಳಿಯ ನಡುವೆಯೂ  ದೆಹಲಿಯಲ್ಲಿ ಮತದಾನ ಬಿರುಸುಗೊಂಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ, ವಿಶೇಷವಾಗಿ ಮಹಿಳೆಯರಿಗೆ ಮನವಿ ಮಾಡಿದ್ದಾರೆ.ತಪ್ಪದೇ  ಮತದಾನ ಮಾಡಿ ಎಂದಿರುವ ಸಿಎಂ ಅರವಿಂದ್ ಕೇಜ್ರಿವಾಲ್,  ದೆಹಲಿಯ, ಭವಿಷ್ಯ  ಮತ್ತು ಜವಾಬ್ದಾರಿ ಎರಡೂ ನಿಮ್ಮ ಮೇಲಿದೆ ಎಂದೂ  ಮನವಿ ಮಾಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್,  ನಿಮ್ಮ ಮತ ಚಲಾಯಿಸಿ. ದೆಹಲಿಯ ಮಹಿಳೆಯರಲ್ಲಿ ವಿಶೇಷ ಮನವಿ- ನೀವು ನಿಮ್ಮ ಮನೆಯ ಜವಾಬ್ದಾರಿಯನ್ನು ಹೇಗೆ ಹೊರುತ್ತೀರಾ ಅದೆ ರೀತಿ  ದೆಹಲಿಯ ಜವಾಬ್ದಾರಿಯನ್ನೂ ನಿಮ್ಮ ಹೆಗಲ ಮೇಲೆ ಹೊರಬೇಕು. ನಿಮ್ಮ ಮನೆಯವರೊಂದಿಗೆ ಚರ್ಚಿಸಿ,  ಮನೆಯ ಪುರುಷರನ್ನು ನಿಮ್ಮ ಜೊತೆ  ಮತದಾನಕ್ಕೆ ತಪ್ಪದೆ ಕರೆತನ್ನಿ ಎಂದು ಹೇಳಿದ್ದಾರೆ. 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು,   ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯಲಿದೆ.  ಒಟ್ಟು 672 ಅಭ್ಯರ್ಥಿಗಳ ಭವಿಷ್ಯವನ್ನು 1.47 ಕೋಟಿ ಮತದಾರರು ನಿರ್ಧರಿಸಲಿದ್ದು, ಬರುವ  ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.