ಇಮ್ತಿಯಾಜ್ ಹೆಬ್ಬಾಳಗೆ ಹೆಮ್ಮೆಯ ಸಂಘಟಕ ಪ್ರಶಸ್ತಿ: ಸನ್ಮಾನ

ಇಮ್ತಿಯಾಜ್ ಹೆಬ್ಬಾಳಗೆ ಹೆಮ್ಮೆಯ ಸಂಘಟಕ ಪ್ರಶಸ್ತಿ: ಸನ್ಮಾನ Imtiaz Hebbal receives the Proud Organizer Award: Honor

ವಿಜಯಪುರ 20: ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಯುವ ನಾಯಕರಾದ ಇಮ್ತಿಯಾಜ್ ಹೆಬ್ಬಾಳ ಅವರಿಗೆ ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಸರ್ವೋದಯ ಸೌಹಾರ್ದ ವೇದಿಕೆ ವತಿಯಿಂದ ಸ್ವಾತಂತ್ರೋತ್ಸವದ ನಿಮಿತ್ಯ ಹಮ್ಮಿಕೊಂಡಿರುವ ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಗೆ ಹೆಮ್ಮೆಯ ಸಂಘಟಕ ಪ್ರಶಸ್ತಿ ನೀಡಿ ಗೌರವಿಸಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಸನ್ಮಾನಿಸಿ ಶುಭ ಕೊರಿದರು. 

ಹಿರಿಯ ರೈತ ಮುಖಂಡರಾದ ಬಾಬುಸಾಬ ಬೀಳಿಗಿ ಮಾತನಾಡುತ್ತಾ ಇಮ್ತಿಯಾಜ್ ಹೆಬ್ಬಾಳ ಅವರು ತಮ್ಮ ಚಿಕ್ಕ ವಯಸ್ಸಿನಿಂದ ವಿವಿಧ ಕನ್ನಡಪರ, ರೈತಪರ, ಕಾರ್ಮಿಕಪರ, ಮಹಿಳಾಪರ, ವಿದ್ಯಾರ್ಥಿಪರ ಸೇರಿದಂತೆ ಎ.ಐ.ಸಿ.ಸಿ ಮಾನವ ಹಕ್ಕು ಸಮಿತಿ ಮಾತ್ರವಲ್ಲದೇ ಹತ್ತು ಹಲವಾರು ಸಂಘಟನೆಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಕ್ರೀಯವಾಗಿ ಮುಂದೆನಿಂತು ಹೋರಾಟ ಮಾಡಿ ನಾಡು-ನುಡಿ ಸಂರಕ್ಷಣೆ ಮಾತ್ರವಲ್ಲದೇ ಅನ್ಯಾಯಕ್ಕೊಳಗಾದ ಸಾವಿರಾರು ಬಡವರು, ತುಳಿಕ್ಕೊಳಗಾದವರು ನಿರ್ಗತೀಕರಿಗೆ ಯಾವುದೇ ಜಾತಿ ಮತ ನೋಡದೇ ಸಹಾಯ ಮಾಡಿರುವುದು ಇವರ ವೈಶಿಷ್ಠವಾಗಿದೆ ಎಂದರು. 

ಸಿಂಧೂರ ಚಲವಾದಿ ಮಾತನಾಡಿ ಈ ನಾಡಿನಲ್ಲಿ ದೇಶದ ಬಗ್ಗೆ ಜಾತ್ಯಾತೀತದ ಬಗ್ಗೆ ಸೌಹಾರ್ದತೆಯ ಬಗ್ಗೆ ವಿಶೇಷ ಕಾಳಜಿ ಇರುವ ಇಮ್ತಿಯಾಜ್ ಹೆಬ್ಬಾಳ ಅವರು ಗೊಳಸಂಗಿ ಸೇರಿದಂತೆ ನಿಡಗುಂದಿ ತಾಲೂಕು ಮಾತ್ರವಲ್ಲದೇ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ ಅವರದೇ ಆದ ಸ್ನೇಹಿತರ ಬಳಗವನ್ನು ಹೊಂದಿ ಈ ದೇಶದ ಅಭಿವೃದ್ಧಿಗೆ ಹಲವಾರು ರೀತಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರಿಗೆ ಇಂದು ನಮ್ಮ ರೈತ ಸಂಘದಿಂದ ಸನ್ಮಾನಿಸಿ ಗೌರವಿಸುತ್ತಾ ಮುಂದೆಯೂ ಇದೇ ರೀತಿ ಸಮಾಜ ಕಟ್ಟುವ ಕೆಲಸದಲ್ಲಿ ಮುಂಚುಣಿಯಲ್ಲಿದ್ದು ನಿಮ್ಮ ಸಾಧನೆಯ ದಾರಿ ಬಹುದೂರ ಹೋಗಲಿ ಎಂದು ಹಾರೈಸುತ್ತೆವೆ ಎಂದರು. 

ಈ ವೇಳೆ ಮಶಾಕ ಕಮತಗಿ, ರಾಜೇಸಾಬ ಹತ್ತರಕಿಹಾಳ, ಅಬ್ದುಲ್ ಬಿಜಾಪುರ, ಶಕೀಲಹಮ್ಮದ ಜಾಗೀರದಾರ, ಮೌಲಾಲಿ ಹತ್ತರಕಿಹಾಳ, ಮಲ್ಲು ಬುದ್ನಿ, ಬಾಷಾ ನಾಗರಾಳ, ಡೋಂಗ್ರಿ ಹತ್ತರಕಿಹಾಳ, ಯಾಸೀನ ಹತ್ತರಕಿಹಾಳ, ಬಸವರಾಜ ಮೇಲಿನಮನಿ, ಮೌಲಾಲಿ ದೇಗಿನಾಳ, ದಸ್ತಗಿರ ಸರಕುಲ್ಲಿ, ಬಂದೇನಾಮಾಜ ಮಕಾಂದಾರ, ಜಾವೀದ ಹೆಬ್ಬಾಳ, ಮೌಬೂಬ ಹೆಬ್ಬಾಳ, ಬಸೀರ ತಾಳೀಕೋಟಿ, ಹುಸೇನಬಾಷಾ ಮಲಘಾಣ, ಲಾಯಕಲಿ ಬಿಜಾಪುರ, ಸೇರಿದಂತೆ ಇತರರು ಇದ್ದರು ತ