ಬೆಳಗಾವಿ: ರಾಜ್ಯಶಾಸ್ತ್ರದಿಂದ ನಾಗರಿಕರ ಗುಣಮಟ್ಟ ವೃದ್ಧಿ

ಲೋಕದರ್ಶನ ವರದಿ

ಬೆಳಗಾವಿ 21: ವಿದ್ಯಾಥರ್ಿಗಳು ಅಂತರಾಷ್ಟ್ರೀಯ ವಿದ್ಯಮಾನಗಳಿಗುಣವಾಗಿ ಜಾಗತೀಕರಣೋತ್ತರ ವಿಷಯಗಳ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಅಶೋಕ ಡಿಸೋಜಾ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬೆನನ್-ಸ್ಮಿಥ್ ಮೆಥೋಡಿಸ್ಟ್ ಪದವಿ ಕಾಲೇಜಿನ ಸಭಾಭವನದಲ್ಲಿ ದಿ.20ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ "ರಾಜ್ಯಶಾಸ್ತ್ರದಲ್ಲಿ ಚಾಯ್ಸ್ ಬೇಸಡ್ ಕ್ರೇಡಿಟ್ ಸಿಸ್ಟಮ್(ಸಿಬಿಸಿಎಸ್)" ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು, ರಾಜ್ಯಶಾಸ್ತ್ರ ವಿಷಯ ಪ್ರಸ್ತುತ ವಿಷಯವಾಗಿದ್ದು ಅದರಿಂದ ನಾಗರಿಕರ ಗುಣಮಟ್ಟ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕಮಲಾಕ್ಷಿ ತಡಸದ ಅವರು ಮಾತನಾಡಿ ಯುಜಿಸಿ ನಿಯಮಾವಳಿಯಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಚಾಯ್ಸ್ ಬೇಸಡ್ ಕ್ರೇಡಿಟ್ ಸಿಸ್ಟಮ್ (ಸಿ.ಬಿ.ಸಿ.ಎಸ್.) ಪಠ್ಯಕ್ರಮವನ್ನು ಅಳವಡಿಸಲಾಗುತ್ತಿದ್ದು, ಇದರಂತೆ ವಿದ್ಯಾಥರ್ಿಗಳು ತಮಗಿಷ್ಟ ಬಂದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದಾಗಿದೆ. ಇಂದಿನ ಪಠ್ಯಕ್ರಮದ ಜೊತೆಗೆ ಅಬಿಲಿಟಿ ಎನಾನ್ಸ್ಮೆಂಟ್ ಕೋಸರ್್ ಹಾಗೂ ಸ್ಕಿಲ್ ಎನಾನ್ಸ್ಮೆಂಟ್ ಕೋಸರ್್ಗಳನ್ನು ಅಧ್ಯಯನ ಮಾಡಲು ಅವಕಾಶವಿದೆ. ಈ ಪದ್ಧತಿಯಲ್ಲಿ ಅಂಕಗಳ ಬದಲಾಗಿ ಕ್ರೇಡಿಟ್ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳು ರಾಜ್ಯಶಾಸ್ತ್ರದಲ್ಲಿ ಯಾವ ಯಾವ ಪತ್ರಿಕೆಗಳನ್ನು ಅಧ್ಯಯನ ಮಾಡಬೇಕು ಎಂಬುದರ ಕುರಿತು ಚಚರ್ಿಸಲಾಯಿತು.

ಎನ್. ಆರ್. ಬಾಳೆಕಾಯಿ ಅಧ್ಯಕ್ಷೀಯ ಪರ ಮಾತನಾಡಿದರು. ಈ ಸಂದರ್ಭದಲ್ಲಿ ಕನರ್ಾಟಕ ಲೋಕಸೇವಾ ಆಯೋಗದ ನೂತನ ಸದಸ್ಯರಾಗಿ ಆಯ್ಕೆ ಯಾದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ. ಬಿ. ಹೆಗ್ಗಣ್ಣವರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತರಾದ ಪ್ರೊ. ಎನ್. ಆರ್. ಬಾಳೆಕಾಯಿ ಹಾಗೂ ಪ್ರೊ. ಬಿ.ಎ. ಕಟಾರೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಪಿಹೆಚ್.ಡಿ. ಪದವಿ ಪಡೆದ 15 ಪ್ರಾಧ್ಯಾಪಕರನ್ನು ಹಾಗೂ ನೆಟ್/ಸೆಟ್ ಪಾಸದ 10 ಪ್ರಾಧ್ಯಾಪಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಸಮಾರಂಭವನ್ನು ಡಾ. ಬಿ.ಜಿ.ಕುಲಕಣರ್ಿ ಹಾಗೂ ಪ್ರೊ. ಅಭಯ ಉಗಾರೆ ನಿರೂಪಿಸಿದರು, ಸುರೇಶ ಬಿರಾದಾರ ಪ್ರಾಥರ್ಿಸಿದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸಂಘದ ಅಧ್ಯಕ್ಷರಾದ ಪ್ರೊ. ಎಸ್. ಎ. ಶಾಸ್ತ್ರಮಠ ಸ್ವಾಗತಿಸಿದರು. ಪ್ರೊ. ಬಿ.ಜಿ. ಪಾಟೀಲ ಪರಿಚಯಿಸಿ, ಸಂಘದ ಕಾರ್ಯದಶರ್ಿಗಳಾದ ಡಾ. ಪಿ.ಬಿ. ನರಗುಂದ ವಂಧಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸ್ಯಾಮ್ಯುಯೆಲ್ ಡ್ಯಾನಿಯಲ್, ಸಂಘದ ಪದಾಧಿಕಾರಿಗಳಾದ ಪ್ರೊ. ಎಸ್.ಎ. ಶಾಸ್ತ್ರಿಮಠ, ಪ್ರೊ. ಎಸ್. ಆರ್. ಮುಲ್ಲಾ, ಪ್ರೊ. ಬಿ.ಜಿ. ಪಾಟೀಲ, ಪ್ರೊ. ಜೆ.ಐ. ಜೋಡಂಗಿ, ಡಾ. ಬಿ.ಎಂ. ಕೋರಬು ಹಾಗೂ ಡಾ. ಐ. ಜೆ. ಬೆಳ್ಳೆನ್ನವರ ಆಯ್ಕೆಯಾಗಿರುತ್ತಾರೆ. ಡಾ. ಪಿ.ಬಿ. ನರಗುಂದ, ಬಿ.ಜಿ. ಕುಲಕಣರ್ಿ ಡಾ. ವಿ. ಬಿ. ಪಾಟೀಲ, ಡಾ. ವಿ.ಬಿ. ವೆಂಕಟೇಶಪ್ಪಾ, ಡಾ. ಅಪ್ಪು ರಾಠೋಡ, ಪ್ರೊ. ಎ. ಎಂ. ಉಗಾರೆ ಡಾ. ಅಜಯ ಅಬ್ಬಾರ ಹಾಗೂ ಡಾ. ರಿಜ್ವಾನಾ ಗಡಕರಿ ಹಾಗೂ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಪದವಿ ಕಾಲೇಜುಗಳ ರಾಜ್ಯಶಾಸ್ತ್ರ ವಿಷಯದ ಮೌಲ್ಯಮಾಪಕರು ಹಾಜರಿದ್ದರು.