ಲೋಕದರ್ಶನ ವರದಿ
ಗದಗ 17: ಹಿಂದೆ ಹೆಣ್ಣು ಹುಟ್ಟಿದರೆ ಹೊರೆ, ಗಂಡು ಹುಟ್ಟಿದರೆ ದೊರೆ ಎಂದು ಹೇಳುತ್ತಿದ್ದರು. ಆದರೆ, ದೇಶದ ಸ್ವಾತಂತ್ರಕ್ಕಾಗಿ ಬ್ರೀಟಿಷರ್ ವಿರುದ್ಧ ಹೋರಾಡಿದ ಪ್ರಪ್ರಥಮ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಎನ್ನವುದು ಇತಿಹಾಸ ಪದೇ ಪದೇ ನೆನಪಿಸುತ್ತಿದೆ ಎಂದು ಮಣಕವಾಡದ ಅನ್ನದಾನೀಶ್ವರ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ನಗರದ ಕನಕಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ. ಟ್ರಸ್ಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಹುಲಕೋಟಿ ಮತ್ತು ನಾಗಾವಿ ವಲಯಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿ, ದೇಶದಲ್ಲಿ ದುಶ್ಚಟ ಮಾಡುವ ವ್ಯಕ್ತಿ ಆರೋಗ್ಯದಿಂದ ಮಾತ್ರ ಹಾಳಾಗಿದ್ದರೆ ಇನ್ನೊಬ್ಬರ ಚಾಡಿ ಮಾತು ಕೇಳಿ ಮಹಿಳೆಯರು ಕುಟುಂಬವನ್ನೆ ಹಾಳು ಮಾಡುತ್ತಿದ್ದಾರೆ. ಮನೆಗೆ ಸೊಬಗು ಹೆಚ್ಚುವುದು ಮಹಿಳೆಯರಿಂದ ಮಾತ್ರ ಸಾಧ್ಯ ಅದ್ದರಿಂದ ಮಹಿಳೆಯರು ಕುಟುಂಬದ ಕಣ್ಣಾಗಿರಬೇಕು. ಮಗು ಮಾತು ಕೇಳುತ್ತಿಲ್ಲ ಎಂದರೆ ಅದರಲ್ಲಿ ಶಿಕ್ಷಕರ ತಪ್ಪಿಲ್ಲ ಬದಲಾಗಿ ಆ ಮಗುವಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ದೊರೆತಿಲ್ಲ ಎನ್ನುವದಾಗಿದೆ ಎಂದು ಹೇಳಿದ ಅವರು ಪ್ರತಿಸಲ ಸಾಲ ಮನ್ನಾದಿಂದ ರೈತರ ಸಮಸ್ಯೆಗಳು ಬಗೆಹರಿಯುವದಿಲ್ಲ ಬದಲಾಗಿ ರೈತರ ಹೆಸರಿನಲ್ಲಿ ಇನ್ನೊಬ್ಬರಿಗೆ ಸಹಾಯವಾಗುತ್ತಿರುವುದು ವಿಷಾಧನೀಯ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇದರಿಂದ ಸಾಕಷ್ಟು ಮಹಿಳೆಯರು ಹಲವಾರು ಸ್ವಂತ ಕೆಲಸಗಳಲ್ಲಿ ತೊಡಗಿಸಿಕೊಂಡು ಆಥರ್ಿಕವಾಗಿ ಸದೃಢರಾಗಿದ್ದಾರೆ. ಇದರಿಂದ ಮಹಿಳೆಯರು ಕೂಡಾ ನಾವು ಕೂಡ ಸ್ವಾಭಿಮಾನದಿಂದ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟದ್ದಾರೆ ಎಂದು ಹೇಳಿದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕಿರಪ್ಪ ಹೆಬಸೂರ, ಕಲ್ಯಾಣ ಕನರ್ಾಟಕ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಶೋತ್ತಮ ಪಿ.ಕೆ., ಜಿಪಂ ಸದಸ್ಯೆ ಶಕುಂತಲಾ ಮೂಲಿಮನಿ, ಉದ್ಯಮಿ ಈಶ್ವರಸಾ ಮೆಹರವಾಡೆ, ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ತಾಲ್ಲೂಕು ಯೋಜನಾಧಿಕಾರಿ ಸುಖೇಸ ಎ.ಎಸ್. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.