ಲೋಕದರ್ಶನ ವರದಿ
ಮಾಂಜರಿ 16: ಶರೀರಕ್ಕೆ ಸಂಬಂಧಿಸಿದ ಐದು ಪ್ರಕಾರದ ಶೀಲಗಳನ್ನು ಹೇಳಿದ ನಂತರ ಮನಸ್ಸಿಗೆ ಸಂಬಂಧಿಸಿದ ಮೂವತೈದು ಪ್ರಕಾರದ ಶೀಲಗಳನ್ನು ವಿವರಿಸಲಾಗುತ್ತದೆ. ಶರೀರ ಮತ್ತು ಇಂದ್ರಿಯಗಳ ಎಲ್ಲ ವ್ಯವಹಾರಗಳಿಗೆ ಮನಸ್ಸೆ ಮೂಲ ಕಾರಣವಾಗಿರುವುದರಿಂದ ಇದಕ್ಕೆ ಸಂಬಂಧಿಸಿದ ಶೀಲಗಳೇ ಬಹಳಷ್ಟಿವೆ. ಈಶ್ವರನೇ ಹೇಳಿದಂತೆ ಶಾಸ್ತ್ರನಿಷಿದ್ಧ ಭೋಗಗಳ ವಿಷಯಕವಾಗಿ ಸಂಕಲ್ಪ ಮಾಡದೆ ಇರುವುದು ಬ್ರಹ್ಮಚರ್ಯವೆಂದು ಕರೆಯಲ್ಪಡುವ ಮೂವತ್ತನೆಯ ಶೀಲವಾಗಿದೆ. ನಮ್ಮ ಎಲ್ಲ ವ್ಯವಹಾರಗಳು ಸಂಕಲ್ಪದಿಂದಲೇ ಆರಂಭವಾಗುವುದರಿಂದ ನಿಷಿದ್ಧ ಸಂಕಲ್ಪಗಳಿಗೆ ಮನದಲ್ಲಿ ಅವಕಾಶ ನೀಡಬಾರದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ಹೇಳಿದರು.
ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹಾಗೂ ಯಡೂರ ಗ್ರಾಮಗಳ ಮಧ್ಯದಲ್ಲಿರುವ ಕೃಷ್ಣಾ ಮತ್ತು ದೂಧಗಂಗಾ ನದಿಯ ಸಂಗಮದಲ್ಲಿ ಯಡೂರಿನ ಕಾಡಸಿದ್ದೇಶ್ವರ ಹಾಗೂ ವೀರಭದ್ರ ದೇವಸ್ಥಾನದ ಧಮರ್ಾಧಿಕಾರಿ ಹಾಗೂ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಪುಣ್ಯ ಸ್ನಾನಮಾಡಿ ನದಿ ತೀರದಲ್ಲಿ ಹಲವಾರು ಶ್ರೀಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಈಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.
ಇಷ್ಟಲಿಂಗ ಪೂಜೆಯ ನಂತರ ಶ್ರೀಶೈಲ ಜಗದ್ಗುರುಗಳು ಮಾತನಾಡಿ ಮನುಷ್ಯ ಆಧ್ಯಾತ್ಮಿಕವಾಗಿ ಮುನ್ನಡೆದಂತೆ ಆಯುಷ್ಯ ಆರೋಗ್ಯ ಬುದ್ಧಿ ಮತ್ತೆ ವೃದ್ಧಿಸುತ್ತದೆ ಆಧ್ಯಾತ್ಮ ವಿದ್ಯೆಯನ್ನು ಬೋಧಿಸುವ ಗ್ರಂಥಗಳು ಪ್ರಮುಖವಾಗಿ ಮೂರು ಅವುಗಳೆಂದರೆ ಉಪನಿಷತ್ತಗಳು, ಭಗವತ್ತ್ಗಿತೆ, ಬ್ರಹ್ಮಸೂತ್ರ ಇತ್ತಿಚೆಗೆ ಮನುಷ್ಯನ ಮಾನಸಿಕ ಚಂಚಲತೆ ಅತಿಯಾಗಿದೆ ಅದು ಇನ್ನೂ ಹೆಚ್ಚಾದಾಗ ಖಿನ್ನತೆ ಎನಿಸಿಕೊಳ್ಳುತ್ತದೆ ಇದರಿಂದ ದೂರವಾಗಲು ನಮ್ಮ ಮನಸ್ಸು ಆಧ್ಯಾತ್ಮಿಕತೆಯತ್ತ ಕೇಂದ್ರಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು ಸ್ವಾಮಿಜಿಗಳು ಮಾತನಾಡಿ ದಕ್ಷಿಣ ಕಾಶಿಯೆಂದೆ ಪ್ರಸಿದ್ಧಿ ಪಡೆದಿರುವ ಯಡೂರಿನ ಕೃಷ್ಣಾ ನದಿಯಲ್ಲಿ ಕನರ್ಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಜನರು ಇಲ್ಲಿ ಪವಿತ್ರ ಸ್ನಾನವನ್ನು ಮಾಡಿಕೊಂಡು ಹೊಗುತ್ತಿದ್ದಾರೆ ಮಕರ ಸಂಕ್ರಮಣದ ಪವಿತ್ರ ದಿನದಂದು ಸಕಲ ಭಕ್ತಾದಿಗಳ ಜೀವನ ನೆಮ್ಮದಿಯಿಂದ ಕೂಡಿರಲಿ ನಮ್ಮ ಭಾರತದ ಆಧ್ಯಾತ್ಮಿಕ ಪರಂಪರೆಯ ಮೇರು ವ್ಯಕ್ತಿದೇಶದ ಯಾವುದೇ ಮೂಲೆಯಲ್ಲು ಸಹ ಪಂಚಪೀಠ ಜಗದ್ಗುರುಗಳ ಬಗ್ಗೆ ಪೂಜ್ಯಭಾವನೆ ಇದೆ ಎಂದು ಅವರು ಹೇಳಿದರು.
ಇಂದಿನ ಪವಿತ್ರ ಸ್ನಾನದಲ್ಲಿ, ಕೊಟ್ಟುರಿನ ಜಾನುಕೋಲಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಬೆಂಗಳೂರು ವಿಭೂತಿ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಶಹಾಪೂರ ಹೀರೆಮಠದ ಸೂರಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಜಮಖಂಡಿ ಮುತ್ತಿನಕಂಠ ಮಠದ ಶೀವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಕೊನ್ನೂರಿನ ಹೊರಗಿನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಬೆಳಗಾವಿ, ವಿಜಾಪೂರ, ಬಾಗಲಕೋಟ, ಜಿಲ್ಲೆಯ ಜೊತರೆಗೆ ನೆರೆಯ ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.