ಶಾಲೆಗಳಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಕೆ: ಕೃಷ್ಣ ದೊಡ್ಡಮನಿ ಸಲಹೆ

ಗದಗ 04: ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಇಂದು ದಿ. 4ರಂದು ಸರಕಾರಿ ಶಾಲೆಗಳಲ್ಲಿ ಬಿಸಿ  ಊಟದಿಂದ ಬರುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಡದೇ ಅದನ್ನು ಸಮರ್ಪಕವಾಗಿ ಸಾವಯವ ಗೊಬ್ಬರವಾಗಿ ಪರಿವತರ್ಿಸಲು ಶಾಲೆಗಳಲ್ಲಿ  ಪೈಪ್ ಕಾಂಪೋಸ್ಟ್ಗಳನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪಂಚಾಯತ್  ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ಎಸ್..ಎಚ್.ಪಿ. ಸಮಾಲೋಚಕರಾದ ಕೃಷ್ಣ ದೊಡ್ಡಮನಿ ಉಪಸ್ಥಿತರಿದ್ದು ಪೈಪ್ ಕಾಂಪೋಸ್ಟ್ ಅಳವಡಿಕೆ ಮತ್ತು ಅದರಿಂದ ಆಗುವ ಉಪಯೋಗಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ  ತಿಳಿಸಿದರು.

 ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಎ.ಎ.ಇನಾಮತಿ, ಗ್ರಾ.ಪಂ. ಪಿ.ಡಿ.ಓ ಕುಮಾರ್ ಪೂಜಾರ, ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಸಿ. ಹಾನಗಲ್, ಎಸ್.ಡಿ. ಎಮ್.ಸಿ. ಅಧ್ಯಕ್ಷ ಶಶಿಧರ ಗಡ್ಡದ,  ಕ್ಷೇತ್ರ ಕಾರ್ಯ ಭೇಟಿಗಾಗಿ ಬಂದ ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿದ್ಯಾಥರ್ಿಗಳು, ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.  ಇದೇ ಸಂದರ್ಭದಲ್ಲಿ ಆರ್ಟ ಆಫ್ ಲಿವಿಂಗ್ ಸಿಬ್ಬಂದಿಗಳು  ಪರಿಸರ ಸ್ನೇಹಿ ದ್ರಾವಣ ಸಿಂಪಡಿಸಿ ಗ್ರಾಮದಲ್ಲಿ   ಗಟಾರುಗಳಲ್ಲಿನ  ತ್ಯಾಜ್ಯವನ್ನು  ಕಾಂಪೋಸ್ಟ್ ಆಗಿ  ಪರಿವತರ್ಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಪಿಡಿಓ ಕೆ.ಎಲ್. ಪೂಜಾರ  ವಂದನಾರ್ಪಣೆ ಸಲ್ಲಿಸಿ  ಗ್ರಾಮದ ಎಲ್ಲ ಶಾಲೆ ಅಂಗನವಾಡಿಗಳಲ್ಲಿ  ಪೈಪ್ ಕಂಪೋಸ್ಟ್ನ್ನು ಅಳವಡಿಸಲು  ಕ್ರಮ ಕೈಗೊಳ್ಳಲಾಗುವುದು.   ಸ್ವಚ್ಛತೆಗಾಗಿ ಶ್ರಮಿಸಲು ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ  ಎಂದರು.