ನಿಗದಿತ ಅವಧಿಯಲ್ಲಿ ಯೋಜನೆ ಅನುಷ್ಠಾನಗೊಳಿಸಿ

ಬಾಗಲಕೋಟೆ11: ನಿಗದಿತ ಅವಧಿಯಲ್ಲಿ ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುವಿಗಳಿಗೆ ತಲುಪಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಜರುಗಿದ ಜನವರಿ ಮಾಹೆಯ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾರ್ಚ ಅಂತ್ಯದೊಳಗೆ ಎಲ್ಲ ಯೋಜನೆಗಳ ಗುರಿ ತಲುಪಬೇಕು. ಯಾವುದೇ ರೀತಿಯ ಅನುದಾನ ಲ್ಯಾಪ್ಸ್ ಆಗದಂತೆ ಚುರುಕಾಗಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಕುಡಿಯುವ ನೀರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶು ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಆತ್ಮ ಯೋಜನೆ ಕಾರ್ಯಕ್ರಮಗಳ ಜಾಗೃತಿಗೆ ಗ್ರಾಮ ಮಟ್ಟದಲ್ಲಿ ಪ್ರಾಯೋಗಿಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಯೋಜನೆಗಳ ಲಾಭ ರೈತರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ಜಂಟಿ ನಿದರ್ೇಶಕಿ ಚೇತನಾ ಪಾಟೀಲ ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ನಡೆದಿದ್ದು, ನೋಂದಣಿಗೆ ಅವಧಿಯನ್ನು ಸಹ ಫೆ.25 ವರೆಗೆ ವಿಸ್ತರಿಸಲಾಗಿದೆ. ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿರುವುದಾಗಿ ಕೃಷಿ ಜಂಟಿ ನಿದರ್ೇಶಕರು ಸಭೆಗೆ ತಿಳಿಸಿದರು.

ತೋಟಗಾರಿಕೆ ಇಲಾಖೆಯಿಂದ ಬರುವ ಜೂನ್ ಮಾಹೆಯಲ್ಲಿ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ತೆಂಗು, ಚಿಕ್ಕು ಹಾಗೂ ಸೀತಾಫಲಗಳ ಸಸಿಗಳನ್ನು ವಿತರಿಸುವ ಕೆಲಸವಾಗಬೇಕು. ಶಾಲಾವಾರು ಎಷ್ಟು ಸಸಿಗಳು ಬೇಡಿಕೆಯ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಿಂದ ಪಡೆದು ವಿತರಿಸು ಕಾರ್ಯವಾಗಬೇಕು. 

ವಿತರಿಸಿದ ಸಸಿಗಳನ್ನು ನೆಟ್ಟು ಪೋಷಿಸುವಂತೆ ಶಾಲೆಯ ಮುಖ್ಯೋಪಾದ್ಯಾಯರಿಗೆ ನಿದರ್ೇಶನ ನೀಡಲು ಡಿಡಿಪಿಐ ಅವರಿಗೆ ಜಿ.ಪಂ ಅಧ್ಯಕ್ಷರು ಸೂಚಿಸಿದರು. ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಶೇ.83.43 ರಷ್ಟು ಸಾಧನೆ ಮಾಡಿರುವುದಾಗಿ ತೋಟಗಾರಿಕೆ ಉಪನಿದರ್ೇಶಕ ಪ್ರಭುರಾಜ ಹಿರೇಮಠ ತಿಳಿಸಿದರು.

ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾತನಾಡಿ ಪ್ರಸಕ್ತ ಸಾಲಿಗೆ ಒಟ್ಟು 742.198 ಹೆಕ್ಟೇರ್ ಪ್ರದೇಶದಲ್ಲಿ 4.38 ಲಕ್ಷ ವಿವಿಧ ಸಸಿಗಳನ್ನು ಬೆಳೆಸಲಾಗಿದೆ. ಮುಂದಿನ ವರ್ಷದ ಮಳೆಗಾಲದಲ್ಲಿ ವಿತರಿಸಲು 5.64 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರೆ, ರೇಷ್ಮೆ ಇಲಾಖೆಯ ಉಪನಿದರ್ೇಶಕ ಎಸ್.ಪಿ.ಹುಲ್ಲೊಳ್ಳಿ ಅವರು ಬಿಡುಗಡೆಯಾದ 68 ಲಕ್ಷ ರೂ. ಪೈಕಿ 57.80 ಲಕ್ಷ ರೂ.ಗಳನ್ನು ಖಚರ್ು ಮಾಡಲಾಗಿದೆ ಎಂದು ತಿಳಿಸಿದರು. 

ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಗೆ 77 ಕೋಟಿ ರೂ.ಗಳ ಪೈಕಿ 22 ಕೋಟಿ ರೂ. ಖಚರ್ು ಮಾಡಲಾಗಿದೆ. ಟೆಂಡರ ಪ್ರಕ್ರಿಯೆ ವಿಳಂಬದ ಹಿನ್ನಲೆಯಲ್ಲಿ ಸಾಧನೆ ಕಡಿಮೆಯಾಗಿರುವುದಾಗಿ ಪಂಚಾಯತ್ ರಾಜ್ ಇಂಜಿನೀಯರ್ ವಿಭಾಗದ ಕಾರ್ಯನಿವರ್ಾಹಕ ಅಭಿಯಂತರರು ಸಭೆಗೆ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಡಿ 38.85 ವಾಷರ್ಿಕ ಗುರಿಗೆ ಡಿಸೆಂಬರ ಅಂತ್ಯಕ್ಕೆ 32.83 ಲಕ್ಷದಷ್ಟು ಮಾನವ ದಿನಗಳನ್ನು ಸೃಜೀಸಲಾಗಿ ಶೇ.100ಕ್ಕೆ ಶೇ.107 ರಷ್ಟು ಪ್ರಗತಿ ಸಾಧಿಸಿರುವುದಾಗಿ ಜಿ.ಪಂ ಸಿಇಓ ತಿಳಿಸಿದರು.

ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅಲ್ಲದೇ ಕಳಪೆ ಮಟ್ಟದ ಕಾಮಗಾರಿಗಳಿಗೆ ಯಾವುದೇ ಬಿಲ್ಲು ಪಾವತಿಗೆ ತಡೆ ನೀಡಬೇಕೆಂದು ತಿಳಿಸಿದಾಗ ಜಿ.ಪಂ ಸದಸ್ಯ ಮಹಾಂತೇಶ ಉದಪುಡಿ ಇದಕ್ಕೆ ಪಿಆರ್ಇಡಿ ವಿಭಾಗದ ಕಾರ್ಯನಿವರ್ಾಹಕ ಅಭಿಯಂತರರು ಉತ್ತರ ನೀಡುತ್ತಾ ಆದೇಶ ನೀಡದೇ ಯಾವುದೇ ತರಹದ ಕಾಮಗಾರಿಗಳು ನಡೆದಿರುವುದಿಲ್ಲ. ಇಲಾಖೆಯಲ್ಲಿ ಕೈಗೊಂಡ ಪ್ರತಿಯೊಂದು ಕಾಮಗಾರಿಗಳ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ಅವರು ಮಾತನಾಡಿ ಜಿಲ್ಲೆಯಲ್ಲಿ ಎರಡು ಮಕ್ಕಳ ಸೂತ್ರದಡಿ ಈಗಾಗಲೇ ಜಿಲ್ಲೆಯಲ್ಲಿ ಬಾಗಲಕೋಟೆ ಮತ್ತು ಮುಧೋಳದಲ್ಲಿ ತಲಾ 6 ಜನರಿಗೆ ಸಂತಾಹ ಹರಣ ಚಿಕಿತ್ಸೆ ಮಾಡಲಾಗಿದ್ದು, ಮಾರ್ಚ ಅಂತ್ಯಕ್ಕೆ ಉಳಿದ ತಾಲೂಕುಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಕಡಿವಾಲ ಗ್ರಾಮದ 500 ಕೋಳಿಗಳು ಸತ್ತು ಹೋಗಿವೆ. ಆದರೂ ಅವರಿಗೆ ಪರಿಹಾರ ನೀಡಿರುವದಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪಶು ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷರು ಸೂಚಿಸಿದರು. ನಂತರ ಇತರೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಹೊರತಂದ ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಲಾಯಿತು. 

        ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿ.ಪಂ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಹಾಂತೇಶ ಉದಪುಡಿ, ಬಸವರಾಜ ಖೋತ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ತಾಲೂಕಿನ ಕಾರ್ಯನಿವರ್ಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.