ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರಾಟ ಮಳಿಗೆ ಶೀಘ್ರವೇ ತೆರವುಗೊಳ್ಳಿಸಿ - ಉದ್ಯೋಗ ಸೇನಾ

Immediately vacate unauthorized and temporary stalls constructed on public roads - Udyog Sena

ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರಾಟ ಮಳಿಗೆ ಶೀಘ್ರವೇ ತೆರವುಗೊಳ್ಳಿಸಿ - ಉದ್ಯೋಗ ಸೇನಾ 

ಗದಗ 28 :  ಜಿಲ್ಲೆಯಲ್ಲಿ ಯಾವುದೇ ಕಾರ್ಖಾನೆ ಹಾಗೂ ಕಂಪನಿಗಳಿಂದ ಕಾರಣ ಸ್ಥಳೀಯ ಯುವಕರು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರು, ಮುಂಬಯ, ಪುಣೆ ಇತ್ಯಾದಿ ದೊಡ್ಡ ನಗರಗಳತ್ತ ಮುಖ ಮಾಡುತ್ತಿದ್ದು ಅದರಲು ಅಳಿದ ಉಳಿದ ಯುವಕರು ಮೋಬೈಲ್ ಕವರ್, ಪಾದರಕ್ಷೆ, ಮಕ್ಕಳ ಬಟ್ಟೆ ಹಾಗೂ ವಿವಿಧ ದಿನೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನ ನಡೆಸುತ್ತಿರುವ ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಗರದ ಹೃದಯ ಭಾಗದ ನಗರ ಸಭೆಗೆ ಒಳಪಡುವ ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತ ಹಾಗೂ ತಾತ್ಕಾಲಿಕವಾಗಿ ಮಾರಾಟ ಮಳಿಗೆಯನ್ನು ನಿರ್ಮಾಣ ಮಾಡಿಕೊಂಡು ಅನ್ಯ ರಾಜ್ಯದ ವ್ಯಾಪಾರಿಗಳು ಪ್ರತಿ ದಿನ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಿದ್ದು. ಸ್ಥಳೀಯ ಯುವಕರ ಉದ್ಯೋಗಗಕ್ಕೆ ಕುತ್ತು ತಂದಿದ್ದಾರೆ ಜೊತೆಗೆ ಆರ್ಥಿಕ ಸ್ವಾವಲಂಬನೆ ನಿರ್ಮಾಣದಲ್ಲಿ ಸೋತ್ತಿರುವ ಯುವಕರು ದಿನ ನಿತ್ಯ ಕುಡಿತ ಇತ್ಯಾದಿ ದುಷ್ಟಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬವನ್ನು ಬೀದಿಗೆ ತರುವ ಕೆಲಸವಾಗಿತ್ತಿದೆ. ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾದ ಹಾಗೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರಾಟ ಮಳಿಗೆಯಿಂದ ಸಾರ್ವಜನಿಕರಿಗೆ ಹಾಗೂ ಶ್ರೀಮಠದ ಭಕ್ತರಿಗೆ ಸಂಚಾರ ವ್ಯವಸ್ಥೆಯು ಅಸ್ಥವ್ಯಸ್ಥಗೊಂಡಿದೆ  ಕಾರಣ ಈ ಕೂಡಲೇ ಅನಧಿಕೃತವಾದ ಹಾಗೂ ತಾತ್ಕಾಲಿಕವಾಗಿ ನಿರ್ಮಾಣಗೊಂಡಿರುವ ಮಾರಾಟ ಮಳಿಗೆಯನ್ನು ಕೊಡಲೇ ತೆರವುಗೊಳ್ಳಿಸಿ ಸ್ಥಳೀಯ ಯುವಕರಿಗೆ ಉದ್ಯೋಗಕ್ಕೆ ಅವಕಾಶ ಮಾಡಿಕೋಡಬೇಕು ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳ್ಳಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಈ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಅನಧಿಕೃತ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಲು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಉದ್ಯೋಗ ಸೇನಾ ಅಧ್ಯಕ್ಷ ಸತೀಶ ಕುಂಬಾರ ನೇತೃತ್ವದಲ್ಲಿ ಮನವಿ ಸಲ್ಲಿದಲಾಯಿತ್ತು. 

    ತಾವುಗಳು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದಲ್ಲಿ ಉಗ್ರವಾದ ಹೋರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಸದಾನಂದಸಿಂಗ್ ಗುರ್ಲಹೊಸೂರ, ಪರಶುರಾಮ ಆಡಿನ, ಪಂಚಾಕ್ಷರಿ ಸಾಲಿಮಠ, ಸಿದ್ಧು ಹಳ್ಳದ, ಈರಣ್ಣ ವಾಕ್ಮೀಕಿ, ಲಕ್ಷ್ಮಣ ಗೌಡರ, ಅರುಣ ಮರಾಠಿ, ಬಸವರಾಜ ಇಟಗಿ ಮುಂತಾದವರು ಹಾಜರಿದ್ದರು.