ಇಮೇಜಸ್ ಮಾಸಿಕ ಪತ್ರಿಕೆ ಲೋಕಾರ್ಪಣೆ

ಲೋಕದರ್ಶನ ವರದಿ

ಬೆಳಗಾವಿ, 11:   ಪತ್ರಿಕಾ ರಂಗ ಮತ್ತು ಛಾಯಾಗ್ರಹಣ ಮೌಲ್ಯಗಳ  ವಾಸ್ತವ ಪರಿಸ್ಥಿತಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಂಸದ  ಸುರೇಶ ಅಂಗಡಿ ಅವರು ಹೇಳಿದರು.    ನಗರದ ಲಕ್ಷ್ಮೀ ಟೇಕ್ ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾ ಛಾಯಾಗ್ರಾಹಕ ಪಿ.ಕೆ. ಬಡಿಗೇರ ಸಂಪಾದಕತ್ವದ ಬೆಳಗಾವಿ ಇಮೇಜಸ್ ಮಾಸಿಕ ಪತ್ರಿಕೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

ಬೆಳಗಾವಿ ಇಮೇಜಸ್ ಮಾಸಿಕ ಪತ್ರಿಕೆ ಚೆನ್ನಾಗಿ ಮೂಡಿ ಬಂದಿದೆ. ಸಮಾಜಮುಖಿ ಹಾಗೂ ಸಮಾಜದ ಮೇಲೆ ಬೆಳಕು ಚೆಲ್ಲುವಂತಹ ಭಾವ ಚಿತ್ರಗಳನ್ನು ಛಾಯಾಗ್ರಾಹಕರು ನೀಡಬೇಕು. ಬಡಿಗೇರ ಪ್ರಾಮಾಣಿಕವಾಗಿ ತಮ್ಮ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಎಲ್ಲಯೂ ತಮ್ಮ ಇಮೇಜ್ ಕಳೆದುಕೊಂಡಲ್ಲ. ತಮ್ಮ ಪತ್ರಿಕೆ ಮೂಲಕ ಬೆಳಗಾವಿ ಆಗು ಹೋಗುಗಳನ್ನು ದಾಖಲೇ ರೂಪದಲ್ಲಿಟ್ಟಿದ್ದಾರೆ. ಛಾಯಾಚಿತ್ರಗಳನ್ನೊಳಗೊಂಡ ವಿಶಿಷ್ಟ ಪತ್ರಿಕೆ ಇದಾಗಿದೆ ಎಂದರು. ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ,  ಸಮ್ಮಿಶ್ರ ಸಕರ್ಾರ ಈವರೆಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಕುರಿತು ಯಾವುದೇ ತೀಮರ್ಾನ ಕೈಗೊಳ್ಳದಿರುವುದು ಖಂಡನೀಯ. ಕೂಡಲೇ ಚಳಿಗಾಲದ ಅಧಿವೇಶನ ನಡೆಸಿ, ಉತ್ತರ ಕನರ್ಾಟಕ ಅಭಿವೃದ್ದಿಗೆ ಕ್ರಮಕೈಗೊಳ್ಳಬೇಕು.  ಈ ಭಾಗದ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. 

ಬೆಳಗಾವಿ ಅಧಿವೇಶನ ಮೂಲಕ ಸಕರ್ಾರ ತನ್ನದೇ ಆದ ಕೊಡುಗೆ ನೀಡಬೇಕು. 

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಡಿಗೇರ ಅವರ ಬೆಳಗಾವಿ ಇಮೇಜಸ್ ಮಾಸಿಕ ಪತ್ರಿಕೆ ವಿಶಿಷ್ಟ ಪತ್ರಿಕೆಯಾಗಿದೆ.  ಕನರ್ಾಟಕ ರಾಜ್ಯದಲ್ಲಿ ಬಹುಶಃ ಛಾಯಾಚಿತ್ರಗಳನ್ನೊಳಗೊಂಡ ಪತ್ರಿಕೆ ಇದೇ ಮೊದಲಾಗಿದೆ.  ಮಾದರಿಯೂ ಆಗಿದೆ. ಕನ್ನಡದ ಕೆಲಸಗಳಿಗೆ ಪ್ರೋತ್ಸಾಹ ನೀಡಲು ನಮ್ಮ ಮಠ ಸದಾ ಸಿದ್ಧವಾಗಿದೆ ಎಂದು ಹೇಳಿದರು. 

ಪಿ.ಕೆ.ಬಡಿಗೇರ  ಅವರು ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ  ಅತಿಥಿಗಳಾಗಿ  ಶಾಸಕ ಅಭಯ ಪಾಟೀಲ,  ಕನ್ನಡ ಹೋರಾಟಗಾರ ಅಶೋಕ ಚಂದರಗಿ,  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿದರ್ೆಶಕ ಗುರುನಾಥ ಕಡಬೂರ,  ಪತ್ರಕರ್ತರಾದ ವಿವೇಕ ಮಹಾಲೆ, ಹೃಷಿಕೇಶ ಬಹಾದ್ದೂರ್ ದೇಸಾಯಿ ಆಗಮಿಸಿದ್ದರು.  ಶಂಕರ ಬಾಗೇವಾಡಿ ಕಾರ್ಯಕ್ರಮ ನಿರೂಪಿಸಿದರು.