ಲೋಕದರ್ಶನ ವರದಿ
ಅಕ್ರಮ ಗೋಮಾಂಸ ಸಾಗಾಟ: ವಾಹನ ವಶಕ್ಕೆ
ಬೆಳಗಾವಿ : ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಪತ್ತೆ ಮಾಡಿರುವ ಶ್ರೀರಾಮ ಸೇನೆಯ ಕಾರ‌್ಯಕರ್ತರು ಚಾಲಕ ಸಮೇತ ವಾಹನವನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.
ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದ ಸಿಗ್ನಲ್’ನಲ್ಲಿ ಬೋಲೆರೋ ಟೆಂಪೋ ವಾಹನ ನಿಂತುಕೊಂಡಿತ್ತು. ಅದರಿಂದ ಬೀರುವ ವಾಸನೆಯಿಂದ ಸಂಶಯಗೊಂಡು, ಅದನ್ನ ತಡೆಹಿಡಿದು ಪರೀಶೀಲಿಸಿದಾಗ, ಅದರಲ್ಲಿ ಗೋಮಾಂಸವಿರುವುದು ಕಂಡು ಬಂದಿದೆ. ಕೂಡಲೇ ಈ ವಿಷಯವನ್ನು ಎಪಿಎಂಸಿ ಪೊಲೀಸರ ಗಮನಕ್ಕೆ ತರಲಾಯಿತು.
ಚಾಲಕನನ್ನು ವಿಚಾರಿಸಿದಾಗ ಕ್ಯಾಂಪನಿಂದ ಗೋಮಾಂಸವನ್ನು ಬೇರೆಡೆ ಸಾಗಿಸಲಾಗುತ್ತಿತ್ತೆಂದು ತಿಳಿದು ಬಂದಿದೆ. ಸರ್ಕಾರ ಗೋಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ ಆಗ್ರಹಿಸಿದರು. ಈ ವೇಳೆ ಶ್ರೀರಾಮಸೇನೆಯ ಕಾರ್ಯಕರ್ತರು ಭಾಗಿಯಾಗಿದ್ದರು. ಸದ್ಯ ವಾಹನ ಚಾಲಕ ಮತ್ತು ವಾಹನವನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.