ನವದೆಹಲಿ, ಡಿಸೆಂಬರ್ 23,
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಅನಾರೋಗ್ಯದ
ಕಾರಣ ದೂರ ಉಳಿದಿದ್ದಾರೆ. ಉಪರಾಷ್ಠ್ರಪತಿ
ಎಂ.ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮಿತಾಬ್
ಅವರು , ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವಿಕರಿಸಬೇಕಿತ್ತು ಆದರೆ ಅನಾರೋಗ್ಯದ ಕಾರಣ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ
ಎಂದು ಘೋಷಿಸಲಾಯಿತು. ತೀವ್ರ ಜ್ವರದ ಕಾರಣ ಬಚ್ಚನ್
ಅವರು ಟ್ವೀಟ್ ಮಾಡಿ ಪ್ರತಿಷ್ಠಿತ ಪ್ರಶಸ್ತಿ
ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ
ಎಂದು ಹೇಳಿಕೊಂಡಿದ್ದಾರೆ. ದೆಹಲಿಗೆ ಪ್ರಯಾಣ ಮಾಡಲು ಆಗುತ್ತಿಲ್ಲ ಪರಿಣಾಮ ರಾಷ್ಟ್ರೀಯ ಪ್ರಶಸ್ತಿಗೆ ಹಾಜರಾಗಲು ಸಾಧ್ಯವಾಗದಿರುವುದು ನಿಜಕ್ಕೂ
ದುರದೃಷ್ಟಕರ, ವಿಷಾದನೀಯ ಎಂದು ಬಿಗ್ ಬಿ
ಟ್ವೀಟ್ ಮಾಡಿದ್ದಾರೆ.ವೃತ್ತಿಜೀವನದ ಅತ್ಯುತ್ತಮ ನಟನೆಗಾಗಿ ಬಿಗ್ ಬಿ ಅವರಿಗೆ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.