ಧಾರವಾಡ 24: ತ್ಯಾಜ್ಯಎನ್ನುವುದನ್ನು ಸಂಪನ್ಮೂಲವಾಗಿ ಪರಿವರ್ತನೆ ಮಾಡಿದಾಗ ಬಂಧುತ್ವ ಪ್ರಾಪ್ತಿಯಾಗುವುದು. ಇದರಿಂದ ಪರಿಸರಕ್ಕೆ ಆಗುವ ಮಾರಕವನ್ನುಕಡಿಮೆ ಮಾಡಬಹುದು.ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿಜನರ ಸಹಭಾಗಿತ್ವದೊಂದಿಗೆ, ಸಂಬಂಧಪಟ್ಟ ಅಧಿಕಾರಿಗಳ ಸಹಕಾರವು ಪ್ರಮುಖ ಪಾತ್ರ ವಹಿಸುತ್ತದೆ, ತ್ಯಾಜ್ಯ ಲಕ್ಷ್ಮಿಯನ್ನು ನಿರ್ಲಕ್ಷಿಸಿದರೆ ದಾರಿದ್ರ್ಯ ಪ್ರಾಪ್ತಿಯಾಗುತ್ತದೆಎಂದುರಾಮದುರ್ಗದ ಪರಿಸರತಜ್ಞ ಬಾಲಚಂದ್ರ ಜಾಬಶೆಟ್ಟಿ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಘನ ಮತ್ತುದ್ರವತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಜೈವಿಕ ತಂತ್ರಜ್ಞಾನಗಳ ಅಳವಡಿಕೆ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ತ್ಯಾಜ್ಯದಕುರಿತು ವಿವರಿಸುತ್ತಾ, 1975 ರ ಆಸುಪಾಸಿನಿಂದ ತ್ಯಾಜ್ಯ ನಿರ್ವಹಣೆ ಸಮಸ್ಯೆ 13 ಲಕ್ಷಟನ್ ಭಾರತದಲ್ಲಿ, 135 ಲಕ್ಷಟನ್‌ಕರ್ನಾಟಕದಲ್ಲಿ, 12 ಲಕ್ಷಟನ್ ಹುಬ್ಬಳ್ಳಿ-ಧಾರವಾಡದಲ್ಲಿ ಕಂಡು ಬರುತ್ತಿದೆ.ಸರಕಾರದ ಯೋಜನೆಗಳು ತ್ಯಾಜ್ಯ ಬಳಕೆಗೆ ಸದುಪಯೋಗವಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ.ರಾಸಾಯನಿಕ ಮುಕ್ತ ಕೃಷಿಯನ್ನುರೈತರು ಅಳವಡಿಸಿಕೊಂಡಾಗ ಆರೋಗ್ಯಯುತವಾದಆಹಾರವನ್ನು ನೀಡುವುದಕ್ಕೆ ಸಾಧ್ಯ.ಇಲ್ಲವಾದರೆ ಮಾರಕ ರೋಗಗಳಿಂದ ಜನರ ಜೀವನದಲ್ಲಿ ಅಸ್ತವ್ಯಸ್ತವಾಗುತ್ತದೆ. ಗಟ್ಟಿ ಕಸ ನಿರ್ವಹಣೆಗೆ ‘ಬುಟ್ಟಿಜಾಥಾ’ ಹೀಗೆ ಹತ್ತು ಹಲವು ಜಾಥಾಗಳ ಮೂಲಕ ಜನರಲ್ಲಿಜಾಗೃತಿಯನ್ನು ಮೂಡಿಸಿ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಪಾತ್ರದಕುರಿತು ಮನವರಿಕೆ ಮಾಡಿಕೊಟ್ಟಅವರು, ಕೆಲವೊಂದು ಪ್ರಾತ್ಯಕ್ಷಿಕೆಯ ಮೂಲಕ ಘನ ಮತ್ತುದ್ರವ ತ್ಯಾಜ್ಯಗಳ ನಿರ್ವಹಣೆ ಹೇಗೆ ಮಾಡಬೇಕು?,ರೈತರ ಮೌಲ್ಯವರ್ಧನೆ ಹೇಗೆ ಮಾಡಬೇಕು? ಎಂದು ಮಹತ್ವದ ವಿಷಯಗಳನ್ನು ಚರ್ಚಿಸಿ, ಸಂವಾದ ನಡೆಸಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹ ಕಾರ್ಯದರ್ಶಿ ಶಂಕರ ಕುಂಬಿ ಮಾತನಾಡಿ, ಕೇವಲ ಪರಿಸರ ಸಂರಕ್ಷಣೆ ಬಾಯಿ ಮಾತಿನಿಂದಾಗುವುದಲ್ಲ. ಅದು ನಮ್ಮೊಳಗೆ ಜಾಗೃತಿ ಮೂಡಿದಾಗ ಮತ್ತು ಸಂಘಟನಾತ್ಮಕವಾಗಿ ಪರಿಸರಕುರಿತ ಅಭಿಯಾನಗಳಲ್ಲಿ ಭಾಗವಹಿಸಿ, ಪ್ರತಿಯೊಬ್ಬರ ಮನೆ ಮನೆಗೂ ತಲುಪಿಸುವಂತೆ ಮಾಡಿದಾಗ ಮಾತ್ರ ಸ್ವಚ್ಛ ಪರಿಸರ, ನೆಮ್ಮದಿಯಜೀವನಇರಲು ಸಾಧ್ಯ. ಇಲ್ಲವಾದರೆ ಮುಂದಿನ ತಲೆಮಾರಿಗೆ ರೋಗಗಳನ್ನು ಹಸ್ತಾಂತರಿಸಿದಂತೆ ಆಗುತ್ತದೆಎಂದು ಕಳವಳ ವ್ಯಕ್ತಪಡಿಸಿದರು.
ವಿಜ್ಞಾನ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯರಾದ ನವೀನಶಾಸ್ತ್ರಿ ರಾ.ಪುರಾಣಿಕ ನಿರೂಪಿಸಿದರು.ಡಾ. ಅರುಣಕುಮಾರ ಶಿರಹಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ.ಶಿವಾನಂದ ಶೆಟ್ಟರ, ಡಾ.ಆನಂದ ಶಿವಪುರ, ಆರ್. ಜಿ. ತಿಮ್ಮಾಪೂರ, ಸರಸ್ವತಿ ಪೂಜಾರ, ಶಾರದಾದಾಬಡೆ, ನಿರ್ಮಲಾ ಹಿರೇಗೌಡರ, ಪ್ರಮೀಳಾ ಜಕ್ಕಣ್ಣವರ, ಕೆ.ಎಸ್. ಕೋರಿಶೆಟ್ಟರ, ಚನ್ನು ನೂಲ್ವಿ, ಬಸಲಿಂಗಪ್ಪ ಅರವಾಳದ, ಉಲ್ಲಾಸ ಹರಪನಹಳ್ಳಿ, ಆರ್.ಎಫ್. ಇಂಚಲ, ಕವಿತಾ ಎಲೆದಳ್ಳಿ, ಜಿ.ಜಿ. ಗೊಂದಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.