ಬೈಯ್ದವರನ್ನು ನಿರ್ಲಕ್ಷಿಸುವುದು ಸಕಾರಾತ್ಮಕ ಮನೋವೃತ್ತಿ: ಪ್ರೊ. ಕಡ್ಡಿ
Ignoring those who scold you is a positive attitude: Prof. Kadi
ಜಮಖಂಡಿ 09: ಬೈಯ್ದವರಿಗೆ ತಿರುಗಿ ಬೈಯ್ಯುವುದು ನಕಾರಾತ್ಮಕ ಮನೋವೃತ್ತಿ. ಬೈಯ್ದವರನ್ನು ನಿರ್ಲಕ್ಷಿಸುವುದು ಸಕಾರಾತ್ಮಕ ಮನೋವೃತ್ತಿ. ಆದರೆ, ಬೈಯ್ದವರನ್ನು ಬಂಧು ಎಂದು ಒಪ್ಪಿಕೊಳ್ಳುವುದು ಅತ್ಯುತ್ತಮ ಮನೋವೃತ್ತಿ. ವಿಶ್ವದಲ್ಲಿಯೇ ಈ ಬಸವತತ್ತ-್ವ ವಿನೂತನ ಎನಿಸಿದೆ ಎಂದು ಬಸವಜ್ಯೋತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ದಾನಮ್ಮದೇವಿ ಸಮುದಾಯ ಭವನದಲ್ಲಿ ನಡೆದ 10ನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಬಸವಣ್ಣನವರ ಬೈಯ್ದವರೆನ್ನ ಬಂಧುಗಳೆಂಬೆ ವಚನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತಪ್ಪು ಮಾಡಿದಾಗ ಯಾರಾದರೂ ಟೀಕಿಸಿದರೆ ತಪ್ಪನ್ನು ತಿದ್ದಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ಟೀಕಿಸಿದವರಿಗೆ ಧನ್ಯವಾದ ಹೇಳಬೇಕು. ಆದರೆ, ಸಾಧನೆಯನ್ನು ಸಹಿಸಿಕೊಳ್ಳದವರ, ಸತ್ಯವನ್ನು ಅರಗಿಸಿಕೊಳ್ಳದವರ ಟೀಕೆಗಳಿಗೆ ಪ್ರತಿಕ್ರಿಯಿಸಿದರೆ ಸಾಧನೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಟೀಕೆಗಳಿಗೆ ಹೆದರಬಾರದು, ಹಿಮ್ಮೆಟ್ಟಬಾರದು. ಹಣ್ಣು ಕೊಡುವ ಮಾವಿನ ಮರಕ್ಕೆ ಕಲ್ಲು ಎಸೆಯುತ್ತಾರೆ ಹೊರತು ಜಾಲಿಗಿಡಕ್ಕಲ್ಲ ಎಂದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದಾನಮ್ಮದೇವಿ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಸುಭಾಸ ಅನಂತಪೂರ, ಸದಾನಂದ ಬಾಗೇವಾಡಿ, ಮಲ್ಲು ಮುದಕನ್ನವರ, ಬಸವರಾಜ ಬಳಗಾರ ಇದ್ದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ವಕೀಲ ಸಿ.ಎಸ್. ಬಾಂಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲು ಗಣಾಚಾರಿ ನಿರೂಪಿಸಿದರು. ಬಸವರಾಜ ಬಳಗಾರ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 