ಗುಳೇದಗುಡ್ಡ : ಕನ್ನಡ ವೃತ್ತಿ ರಂಗಭೂಮಿಗೆ ವಿಶಿಷ್ಟವಾದ ಸಾಹಿತ್ಯ ಪರಂಪರೆ ಇದೆಯಾದರೂ ಜಾಣ ಕುರುಡುತನದಿಂದ ಪಠ್ಯಕ್ರಮ ಸಮಿತಿ ವೃತಿ ರಂಗಭೂಮಿ ನಾಟಕಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುತ್ತಿಲ್ಲವೆಂಬ ಬೇಸರವನ್ನು ರಂಗಸಂಶೋಧಕ ಡಾ.ಭೀಮನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಗುರುಸಿದ್ದೇಶ್ವರ ಮಹಿಳಾ ಬಿಇಡಿ ಕಾಲೇಜಿನಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದಿ. ಬಸವರಾಜ ಅಮರಣ್ಣೇಗೌಡ ಪಾಟೀಲ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಪರಿವರ್ತನೆಯಲ್ಲಿ ರಂಗಭೂಮಿಯ ಕೊಡುಗೆ ಅಪಾರವಾಗಿದ್ದರೂ ಈ ನಾಡಿನ ಪ್ರಸಿದ್ದ ನಾಟಕಕಾರರ ನಾಟಕಗಳನ್ನು ವಿಶ್ವವಿದ್ಯಾಲಯಗಳು ಪಠ್ಯಕ್ಕೆ ಅಳವಡಿಸುತ್ತಿಲ್ಲ. ಪಠ್ಯಕ್ರಮ ಸಮಿತಿ ರಂಗಸಾಹಿತ್ಯವನ್ನು ಈ ಮೂಲಕ ಕಡೆಗಣಿಸುತ್ತಿದೆ. ಇನ್ನು ಮುಂದಾದರೂ ವಿಶ್ವವಿದ್ಯಾಲಯಗಳು ಕಂಪನಿ ನಾಟಕಗಳನ್ನು ಪಠ್ಯಕ್ಕೆ ಅಳವಡಿಸಲಿ ಎಂದರು.
ಲಕ್ಷ್ಮೀ ಸಹಕಾರಿ ಬ್ಯಾಂಕಿನ ದತ್ತಿಯ ವಿಷಯವಾದ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಬ್ಯಾಂಕಿನ ಪಾತ್ರ ಕುರಿತಾಗಿ ಎಂ.ಪಿ. ಅಳ್ಳಿಚಂಡಿ ಅವರು ಮಾತನಾಡಿ, ಗ್ರಾಮೀಣ ಜನರ ನಿತ್ಯ ಬದುಕಿನ ಶಕ್ತಿಯಾಗಿ ಸಹಕಾರಿ ಬ್ಯಾಂಕುಗಳು ಕೆಲಸ ಮಾಡುತ್ತಿವೆ ಎಂದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಾಗಲಕೋಟೆ ಜಿಲ್ಲೆಯ ಪ್ರಕಾಶ ಕಡಪಟ್ಟಿ ಕಲಾಕೌಸ್ತುಭ ಬಿರುದು ಸ್ವೀಕರಿಸಿ ಮಾತನಾಡಿ, ರಾಜ್ಯ ಸಕರ್ಾರ ನನಗೆ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿದ್ದಕ್ಕೆ ತುಂಬ ಸಂತೋಷವಾಗಿದೆ. ಸಕರ್ಾರ ಕಂಪನಿ ನಾಟಕಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ರಾಜ್ಯ ನಾಟಕ ಅಕಾಡೆಮಿಯ ನೂತನ ಸದಸ್ಯ ವಿನೋದ ಅಂಬೇಕರ್ ಮಾತನಾಡಿ, ಈ ಭಾಗದಲ್ಲಿ ರಂಗ ತರಬೇತಿ ಶಿಬಿರ ನಡೆಸುವ ಹಾಗೂ ಪ್ರಕಾಶ ಕಡಪಟ್ಟಿ ಅವರ ಸಾಕ್ಷ್ಯ ಚಿತ್ರ ತಯಾರಿಸುವ ಯೋಜನೆ ಅಕಾಡೆಮಿಯಿಂದ ಹಾಕಿಕೊಳ್ಳುವುದಾಗಿ ಭರವಸೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎ.ಹೆಚ್. ನಿಷಾನದರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾನಿಧ್ಯವಹಿಸಿದ್ದ ಗುರುಸಿದ್ದೇಶ್ವರ ಮಠದ ಬಸವರಾಜ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪ್ರಸ್ತಾವಿಕವಾಗಿ ತಾಲೂಕ ಕಸಾಪ ಅಧ್ಯಕ್ಷ ಸಿ.ಎಂ.ಜೋಶಿ ಮಾತನಾಡಿದರು. ಸಂಗಮೇಶ್ವರ ನಾಟ್ಯ ಸಂಘದ ಮಾಲೀಕರಾದ ಪ್ರೇಮಾ ಗುಳೇದಗುಡ್ಡ, ಅಥಣಿಯ ಶ್ರೀಗಳು ವೇದಿಕೆ ಮೇಲಿದ್ದರು. ಮಲ್ಲಿಕಾಜರ್ುನ ರಾಜನಾಳ ನಿರೂಪಿಸಿದರು. ಮಹಾದೇವ ಜಗತಾಪ ವಂದಿಸಿದರು.
ರಂಗ ಕಲಾವಿದರಾದ ಶ್ರೀಕಾಂತ ಹುನಗುಂದ, ವಿಜಯಲಕ್ಷ್ಮೀ ಕಟ್ಟಿ, ಈಶ್ವರ ಕಂಠಿ, ಮಾಜಿ ಸಂಗೀತ ಅಕಾಡೆಮಿ ಸದಸ್ಯ ಅಖಂಡೇಶ್ವರ ಪತ್ತಾರ, ಶಿವಕುಮಾರ ಕರನಂದಿ, ಕಿರಣ ಏರಪಲ್, ಶಂಕರ ಲಕ್ಕುಂಡಿ, ಮೋಹನ ಕರನಂದಿ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.