ಇಂದು ಹಾಲವರ್ತಿ ಗ್ರಾಮದಲ್ಲಿ ಇಫ್ತಾರ ಕೂಟ ಆಚರಣೆ
ಕೊಪ್ಪಳ 22: ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮ ದೇವಿ ಟ್ರೈನಿಂಗ್ ಕಂಪನಿಯ ಮಾಲಕರು ಹಾಗೂ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ ಯವರ ನಿವಾಸದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ಮುಸ್ಲಿಂ ರೋಜಾದಾರ್ ಬಾಂಧವರಿಗೆ ಇಫ್ತಾರ್ ಕೂಟ ದಿನಾಂಕ 23ರ ರವಿವಾರ ಸಂಜೆ ವೇಳೆಗೆ ಕರಿಯಪ್ಪ ಬೇವಿನಹಳ್ಳಿ ಅವರ ನಿವಾಸ ಹಾಲ ವರ್ತಿ ಗ್ರಾಮದಲ್ಲಿ ಏರಿ್ಡಸಲಾಗಿದೆ ಎಂದು ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯಪ್ಪ ಗಿಣಿಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿದ ಆವರು ಹಿಂದೂ ಮುಸ್ಲಿಂ ಸಮಾಜ ಬಾಂಧವರಲ್ಲಿ ಸೌಹಾರ್ದತೆ ಯ ಸಂಕೇತವಾಗಿ ಇಫ್ತಾರ್ ಸೌಹಾರ್ದ ಕೂಟವನ್ನು ಪ್ರತಿವರ್ಷದಂತೆ ಈ ವರ್ಷವೂ ಸಹ ಜರುಗಲ್ಲಿದ್ದು ಸರ್ವರು ಪಾಲ್ಗೊಳ್ಳುವಂತೆ ಜೆಡಿಎಸ್ ಪಕ್ಷದ ಕರಿಯಪ್ಪ ಬೇವಿನಹಳ್ಳಿ ಗಿಣಿಗೇರಿ ರವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ